ಟ್ರಾನ್ಸಫರ್‌ ಆಗಿ ಮಣಿಪಾಲ್‌ಗೆ ತೆರಳಿದ ಬೆನ್ನಲ್ಲೆ ಬ್ಯಾಂಕ್‌ ಮ್ಯಾನೇಜರ್‌ಗೆ ಶಾಕ್‌ |

Anandapura, near Sagara, Shivamogga district, thieves broke into a house and stole gold ornaments and cash worth over 16 lakhs. The house belonged to Abdul Ahamad,

ಟ್ರಾನ್ಸಫರ್‌ ಆಗಿ ಮಣಿಪಾಲ್‌ಗೆ ತೆರಳಿದ ಬೆನ್ನಲ್ಲೆ ಬ್ಯಾಂಕ್‌ ಮ್ಯಾನೇಜರ್‌ಗೆ ಶಾಕ್‌ |
Anandapura, near Sagara, Shivamogga district,

SHIVAMOGGA | MALENADUTODAY NEWS | Jun 15, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಸಮೀಪದ ಅಂದಾಸುರ ಗ್ರಾಮದಲ್ಲಿ ಮನೆಯ ಬಾಗಿಲ ಇಂಟರ್‌ ಲಾಕ್‌ ಮುರಿದು ಸುಮಾರು 16 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಕಳ್ಳತನವಾದ ಬಗ್ಗೆ  ವರದಿಯಾಗಿದೆ. 

 

ಆನಂದಪುರ ಕೆನರಾ ಬ್ಯಾಂಕ್ ನಲ್ಲಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸಿದ ಅಬ್ದುಲ್ ಅಹಮದ್‌ ರವರು ಇತ್ತೀಚಿನ ದಿನಗಳಲ್ಲಿ ವರ್ಗಾವಣೆಯಾಗಿದ್ದರು. ಹೀಗಾಗಿ ಆನಂದಪುರದಲ್ಲಿದ್ದ ಅವರ ಮನೆಗೆ ಬೀಗ ಹಾಕಿ ಅವರು ಮಣಿಪಾಲಿಗೆ ತೆರಳಿದ್ದರು. 

 

ಮನೆ ಬೀಗ ಹಾಕಿರುವುದನ್ನ ಗಮನಿಸಿದ ಕಳ್ಳರು ಮನೆಯ ಬಾಗಿಲು ಮುರಿದು, ಮನೆಯಲ್ಲಿದ್ದ ಸುಮಾರು 330 ಗ್ರಾಂ ಬಂಗಾರದ ಆಭರಣ, 90 ಸಾವಿರ ನಗುದು ದೋಚಿಕೊಂಡು ಪರಾರಿಯಾಗಿದ್ದಾರೆ.

 

ಗ್ರಾಮಸ್ಥರು ಮನೆಯ ಬಾಗಿಲು ಮುರಿದಿರುವ ವಿಚಾರವನ್ನು ದೂರವಾಣಿ ಮೂಲಕ ಅಬ್ದುಲ್‌ ರವರಿಗೆ ತಿಳಿಸಿದ್ದಾರೆ. ಆ ಬಳಿಕ ಮನೆಗೆ ಬಂದ ಅವರು ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಯುವರಾಜ್ ಕಂಬಳಿಯವರಿಗೆ ಮಾಹಿತಿ ನೀಡಿದ್ದಾರೆ ಆ ಬಳಿಕ ಈ ಸಂಬಂಧ ಕಳ್ಳತನದ ಪ್ರಕರಣ ದಾಖಲಾಗಿದೆ. 

 

In Anandapura, near Sagara, Shivamogga district, thieves broke into a house and stole gold ornaments and cash worth over 16 lakhs. The house belonged to Abdul Ahamad, a recently transferred bank manager. Taking advantage of his absence, the thieves broke in and stole 330 grams of gold ornaments and 90 thousand in cash. Informed by villagers, PSI Yuvaraj Kambali and the police rushed to the scene to investigate.