ಶಿವಮೊಗ್ಗದಲ್ಲಿ ಉಸ್ತುವಾರಿ ಸಚಿವರ ಮಹತ್ವದ ಸುದ್ದಿಗೋಷ್ಟಿ! ಏನು ಹೇಳಿದ್ರು ಮಧು ಬಂಗಾರಪ್ಪ

Shivamogga District In-charge Minister Madhu Bangarappa held a press conference regarding the upcoming elections for the Southwest Graduates' and Teachers' constituencies.

ಶಿವಮೊಗ್ಗದಲ್ಲಿ ಉಸ್ತುವಾರಿ ಸಚಿವರ ಮಹತ್ವದ ಸುದ್ದಿಗೋಷ್ಟಿ! ಏನು ಹೇಳಿದ್ರು ಮಧು ಬಂಗಾರಪ್ಪ
District In-charge Minister Madhu Bangarappa ,Shivamogga

SHIVAMOGGA | MALENADUTODAY NEWS | May 30, 2024  ಮಲೆನಾಡು ಟುಡೆ

 

ಶಿವಮೊಗ್ಗದಲ್ಲಿ ಇವತ್ತು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉಸ್ತುವಾರಿಯಲ್ಲಿದ್ರು. ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಮತದಾರರಿಗೆ ಆಮಿಷವೊಡ್ಡುತ್ತಿದ್ದಾರೆ. ಸೋಲಿನ ಹತಾಷೆಯಿಂದ ಎಲ್ಲೆಂದರಲ್ಲಿಗುಂಡಿನ ಪಾರ್ಟಿ ಮಾಡುತ್ತಿದ್ದಾರೆ. ಸಂಸ್ಕೃತಿ ಬಗ್ಗೆ ಪಾಠ ಹೇಳುವ ಅವರ ಪಕ್ಷದ ನಾಯಕರು ಇದಕ್ಕೆ ಉತ್ತರಿಸಬೇಕು ಎಂದರು. 

 

30 ವರ್ಷದ ರಾಜಕಾರಣ

30 ವರ್ಷದಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಈ ರೀತಿ ಕೆಳಮಟ್ಟದ ರಾಜಕಾರಣ ಮಾಡಿಲ್ಲ. ಈ ಕ್ಷೇತ್ರದಲ್ಲಿ ಇನ್ನೂಅಂಬೆಗಾಲಿಡುತ್ತಿರು ಡಾ. ಧನಂಜಯ್‌ ಸರ್ಜಿ ರಾಜಕೀಯ ಸಂಸ್ಕೃತಿಯನ್ನು ಹಾಳುಮಾಡುತ್ತಿದ್ದಾರೆ. ಈ ಬಗ್ಗೆ ಮತದಾರರು ಎಚ್ಚರವಾಗಿರಬೇಕು. ಇಡೀ ಕ್ಷೇತ್ರದಲ್ಲಿ ಸಂಚಾರ ಮಾಡಿ ಮತದಾರರನ್ನು ತಲುಪಿದ್ದೇವೆ. ನಮ್ಮ ಪಕ್ಷದ ಇಬ್ಬರೂ ಗೆಲ್ಲುತ್ತಾರೆ ಎಂದರು. 

 

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಎಲ್ಲೋಯ್ತು 

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರವರು ಮಾಡಿರುವ ವಾಲ್ಮೀಕಿ ನಿಗಮದ ಹಣ ಹೊರರಾಜ್ಯಕ್ಕೆ ವರ್ಗಾವಣೆಯಾಗಿದೆ. ಚುನಾವಣೆಗೆ ಬಳಕೆಯಾಗಿದೆ ಎಂಬ ಆರೋಪಕ್ಕೆ ಮಧು ಬಂಗಾರಪ್ಪ ಉತ್ತರಿಸುತ್ತಾ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನಮ್ಮ ಸರಕಾರ ಮತ್ತು ಪಕ್ಷದ ಬಗ್ಗೆ ಮಾತನಾಡದೆ ತಮ್ಮದೇ ಪಕ್ಷದ ಶಾಸಕ ಬಸನಗೌಡ ಯತ್ನಾಳ್ ಮತ್ತು ಕೆ.ಎಸ್. ಈಶ್ವರಪ್ಪ ಅವರ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಚಂದ್ರಶೇಖರನ್‌  ಪ್ರಕರಣದಲ್ಲಿ ರಾಜಕೀಯ ಮಾಡಬಾರದು ಎಂದರು. ಶಾಸಕರನ್ನು ಕೊಂಡೊಯ್ದು ಬಾಂಬೆಯಲ್ಲಿ ಇಟ್ಟುಕೊಂಡಿದ್ದ ವಿಜಯೇಂದ್ರ ಅವರಿಗೆ ಹಣ ವರ್ಗಾವಣೆಯಲ್ಲಿ ವಿಶೇಷವಾದ ನೈಪುಣ್ಯತೆ ಇದೆ. ಹಂಗಾಗಿ ಈ ಬಗ್ಗೆ ಹೇಳಿದ್ದಾರೆ ಎಂದು ದೂರಿದರು. 

 

ಗ್ರೇಸ್‌ ಮಾರ್ಕ್‌ ಎಷ್ಟು?

ಅವರದೇ ಪಕ್ಷದ ಸರಕಾರ ಕೇಂದ್ರದಲ್ಲಿದೆ ತನಿಖೆ ಮಾಡಿಸಲಿ ಎಂದ ಮಧು ಬಂಗಾರಪ್ಪ ಈಬಾರಿ ಎಸ್‌ಎಸ್ ಎಲ್ ಸಿಯಲ್ಲಿ ಶೇ.20 ಗ್ರೇಸ್ ಮಾರ್ಕ್್ಸ ಕೊಡಲಾಗಿದೆ ಎಂದು ಪ್ರತಿಪಕ್ಷದವರು ಹುಯಿಲೆಬ್ಬಿಸಿದ್ದಾರೆ. ಆದರೆ ಇದರಲ್ಲಿ ಶೇ.10 ಅಂಕ ಕೋವಿಡ್ ಕಾರಣಕ್ಕೆ ಬಿಜೆಪಿ ಸರಕಾರ ನಿಗದಿ ಮಾಡಿರುವುದು ಮುಂದುವರಿದಿದೆ. ಎಲ್ಲವೂ ಈ ವರ್ಷಕ್ಕೆ  ಕೊನೆಯಾಗಲಿದೆ. ನಮ್ಮ ಸರಕಾರ ಪರೀಕ್ಷೆಯ ಪಾವಿತ್ರ÷್ಯತೆಯನ್ನು ಕಾಪಾಡಿದೆ. ಶಿಸ್ತುಬದ್ಧವಾಗಿ ಪರೀಕ್ಷೆ ನಡೆಸಿದೆ. 

 

ಶಾಲೆಗಳಿಗೆ ಉಚಿತ ವಿದ್ಯುತ್ ಮತ್ತು ನೀರು ಕೊಡುತ್ತಿರುವುದು ಮಕ್ಕಳ ಶಿಕ್ಷಣ ಗುಣಮಟ್ಟ ಸುಧಾರಿಸಲೆಂದೇ ಆಗಿದೆ. ಮೂರು ಪರೀಕ್ಷೆಗಳನ್ನು ಮಾಡಿದ್ದರಿಂದ ಕೊನೆಯ ಎರಡು ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳು ಮುಂದಿನ ತರಗತಿಗೆಹೋಗುವುದಿಲ್ಲವೇ ಎಂದು ಪ್ರಶ್ನಿಸಿದ ಸಚಿವರು, ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಮುಖಂಡರು ತಲೆಬುಡ ಇಲ್ಲದ ವಾದ ಮಾಡುವುದನ್ನು ನಿಲ್ಲಿಸಬೇಕೆಂದರು.ಚುನಾವಣೆ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಮತ್ತಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು. 



ಚಂದ್ರಶೇಖರನ್‌ ಆತ್ಮಹತ್ಯೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು. ಆ ಘಟನೆ  ನಡೆಯಬಾರದಿತ್ತು. ಆ ಕುಟುಂಬ  ಸಂಕಷ್ಟದಲ್ಲಿದೆ. ಮುಖ್ಯಮಂತ್ರಿಗಳು ಈ ಬಗ್ಗೆ  ಮಾಹಿತಿ ಪಡೆದಿದ್ದಾರೆ. ಅವರ ಕುಟುಂಬದೊಂದಿಗೆ ಸರಕಾರ ಇರುತ್ತದೆ. ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ಅದು ಕಾನೂನು ರೀತಿ ಆಗುತ್ತದೆ. ಮಾನವೀಯ ನೆಲೆಯಲ್ಲಿ ಮೃತ ಚಂದ್ರಶೇಖರನ್‌ ಮಕ್ಕಳು ಮತ್ತು ಕುಟುಂಬಕ್ಕೆ ನೆರವು ನೀಡಲಾಗುವುದು ಎಂ ದರು. 

 

Shivamogga District In-charge Minister Madhu Bangarappa held a press conference regarding the upcoming elections for the Southwest Graduates' and Teachers' constituencies.