ಸರ್ಕಾರಿ ಶಾಲೆಯಲ್ಲಿ ಎಸ್​.ಬಂಗಾರಪ್ಪರವರ ಜನ್ಮದಿನ | ಹುಲಿ ಉಗುರು ಬಗ್ಗೆ ಎಚ್ಚರಿಕೆ ನೀಡಿದ ಮಧು ಬಂಗಾರಪ್ಪ

Madhu Bangarappa warns about tiger claw ಹುಲಿ ಉಗುರು ಬಗ್ಗೆ ಎಚ್ಚರಿಕೆ ನೀಡಿದ ಮಧು ಬಂಗಾರಪ್ಪ

ಸರ್ಕಾರಿ ಶಾಲೆಯಲ್ಲಿ ಎಸ್​.ಬಂಗಾರಪ್ಪರವರ ಜನ್ಮದಿನ | ಹುಲಿ ಉಗುರು ಬಗ್ಗೆ ಎಚ್ಚರಿಕೆ ನೀಡಿದ  ಮಧು ಬಂಗಾರಪ್ಪ

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS

ಇಂದು ಮಾಜಿ ಸಿಎಂ ದಿವಂಗತ ಎಸ್​ ಬಂಗಾರಪ್ಪರವರ ಜನ್ಮದಿನ, ಅವರ ಹುಟ್ಟುಹಬ್ಬವನ್ನು  ಸರ್ಕಾರಿ ಶಾಲೆಯಲ್ಲಿ  ಆಚರಿಸಿದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.  

ತಂದೆ ಸಿಎಂ ಆಗಿದ್ದಾಗ ಒಂದು ಯೋಜನೆ ಮಾಡಿದ್ದರು. ಶಾಲೆಗೆ ಬರುವ ಮಕ್ಕಳಿಗೆ ಒಂದು ರೂಪಾಯಿ ಕೊಡುವ ಯೋಜನೆ ಜಾರಿಗೆ ತಂದಿದ್ದರು. ಇವತ್ತು ನಾನು ಕೂಡ ಶಿಕ್ಷಣ ಸಚಿವನಾಗಿದ್ದೇನೆ. ಇಲಾಖೆಯಲ್ಲಿ ಬದಲಾವಣೆ ತರಹ ಕೆಲಸ ಆರಂಭಿಸಿದ್ದೇನೆ ಎಂದರು. ಇದೇ ಕಾರಣಕ್ಕೆ ಸರ್ಕಾರಿ ಶಾಲೆಯಲ್ಲಿ ತಂದೆಯ ಬರ್ತಡೆ ಮಾಡಿದ್ದೇವೆ. ಮಕ್ಕಳ ಜೊತೆಗೆ ಊಟ ಮಾಡಿ, ಕಾಲ ಕಳೆದಿದ್ದೇವೆ ಎಂದ ಸಚಿವರು ಇಂಡಿಯಾ- ಭಾರತ ಹೆಸರು ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ ಕೇಂದ್ರ ಸರ್ಕಾರ ಎಲ್ಲವನ್ನು ತನ್ನ ಕೈಯಲ್ಲಿ ಹಿಡಿದುಕೊಳ್ಳಲು ಈ ರೀತಿ ಲಗಾಮು ಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. 

ಆಯಾ ರಾಜ್ಯಕ್ಕೆ ತಕ್ಕಂತೆ ಇರುವ ಸಂಪ್ರದಾಯವನ್ನು ಹಾಗೆ ಇರುವಂತೆ ಬಿಡಬೇಕು. ಭಾರತ, ಇಂಡಿಯಾ ಎಂದು ಸುಮ್ಮನೆ ಗೊಂದಲವನ್ನುಂಟು ಮಾಡುವುದು ಸರಿಯಲ್ಲ. ಮಕ್ಕಳನ್ನು ಶುದ್ದವಾಗಿ ಬೆಳೆಸಲು ಅವಕಾಶ‌ ನೀಡಬೇಕು ಎಂದರು. 

ಇದೇ ವೇಳೇ ರಾಜ್ಯದಲ್ಲಿ ಹುಲಿ ಉಗುರು ವಿಚಾರವಾಗಿ ನಡೆಯುತ್ತಿರುವ ಸನ್ನಿವೇಶಗಳಿಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ  ಹುಲಿ ಉಗುರು ವಿಚಾರದಲ್ಲಿ ಎಲ್ಲರೂ ಸಹ ಎಚ್ಚರಿಕೆಯಿಂದ ಇರಬೇಕು. ಸಾರ್ವಜನಿಕ ಜೀವನದಲ್ಲಿ ಬಹಳ ಎಚ್ಚರಿಕೆ ಅಗತ್ಯ. ಕಾನೂನು ಎಲ್ಲರಿಗೂ ಒಂದೇ  ಎಂದಿದ್ದಾರೆ. 

ಇನ್ನೂ ಡಿಸಿಎಂ ಕಚೇರಿ ನವೀಕರಣ ವಿಚಾರದ ಬಗ್ಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ನಮ್ಮನ್ನು ಟೀಕೆ ಮಾಡುತ್ತಿದ್ದಾರೆ. ಈ ಮುಂಚೆ ಅವರು ನಮ್ಮಂತೆಯೇ ಆಡಳಿತ ನಡೆಸಿದ್ದರು ಎಂಬುದನ್ನು ಮರೆಯಬಾರದು.  

ವಿರೋಧ ಪಕ್ಷದಲ್ಲಿರುವವರು ಕಾವೇರಿ, ಜಿಎಸ್ಟಿ, ಶರಾವತಿ ಸೇರಿದಂತೆ ಯಾವುದರ ಬಗ್ಗೆಯು ಕೇಂದ್ರದೊಂದಿಗೆ ಮಾತನಾಡಲ್ಲ ಎಂದಿದ್ದಾರೆ.


ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!