KARNATAKA NEWS/ ONLINE / Malenadu today/ Oct 24, 2023 SHIVAMOGGA NEWS
ಮ್ಯಾಚ್ ಗೆದ್ದರೇ ಅದೇಗಾಯ್ತು ಇದೇಗೇ ಸಾಧ್ಯವಾಯ್ತು ಎಂದು ಪ್ರಶ್ನಿಸುತ್ತಾರೆ, ಅದೇ ಮ್ಯಾಚ್ ಸೋತರೆ, ನೋಡುವ ದೃಷ್ಟಿಯೇ ಉಲ್ಟಾ ಆಗಿರುತ್ತದೆ. ಮೊಹಮ್ಮದ್ ಸಮಿ ಐದು ವಿಕೆಟ್ ಪಡೆದು ಸುದ್ದಿಗೋಷ್ಟಿಯಲ್ಲಿ ಹೇಳಿದ ಮಾತಿದು. ಸದ್ಯ ಶಿವಮೊಗ್ಗದ ದಸರಾ ಸಹ ಹೀಗೆ ಆಗುತ್ತಿದೆ. ಅಂಬಾರಿ ಮೆರವಣಿಗೆ ಇನ್ನೇನು ನಡೆಯುತ್ತದೆ ಎನ್ನುವಾಗ ನೇತ್ರಾವತಿ ಮಗುವಿಗೆ ಜನ್ಮ ನೀಡಿದೆ. ನೇತ್ರಾ ಮರಿಹಾಕುವವರೆಗೂ ಎಲ್ಲವೂ ಸರಿಯಾಗಿತ್ತು. ಆದರೆ ಆನಂತರ ಗಂಧಗಾಳಿಯ ನಡುವೆ ಗುದ್ದಾಟ ಆರಂಭವಾಗಿದೆ. ಹಾಗಾದರೆ ಅಸಲಿಯತ್ತಲ್ಲಿ ಏನೆಲ್ಲಾ ಆಯ್ತು ಎಂಬುದರ ವರದಿಯನ್ನ ಇಲ್ಲಿ ತಿಳಿಸುತ್ತೇವೆ.
ಆನೆಯ ಪ್ರೆಗ್ನೆನ್ಸಿ ರಿಪೋರ್ಟ್ ನೆಗೆಟಿವ್ ಬಂತು ಅಂದ ಮೇಲೆ…ಯಂತ್ರೋಪಕರಣಗಳ ವರದಿಯನ್ನು ವೈದ್ಯಲೋಕ ನಂಬೋದು ಹೇಗೆ ಸ್ವಾಮಿ..ವೈದ್ಯರ ನೆಗೆಟಿವ್ ರಿಪೋರ್ಟ್ನ್ನೇ ಪಾಸಿಟಿವ್ ಮಾಡಿದ ಸಕ್ರೆಬೈಲಿನ ನೇತ್ರ ವಿಸ್ಮಯ ಮೂಡಿಸಿ, ಮನುಜ ಲೋಕದ ಕರ್ಮಕಾಂಡವನ್ನು ಬೆತ್ತಲೆಗೊಳಿಸಿದ್ದು ಹೇಗೆ ಗೊತ್ತಾ..? ಜೆಪಿ ಬರೆಯುತ್ತಾರೆ
ಈ ಬಾರಿ ಶಿವಮೊಗ್ಗದ ದಸರಾ ಅಂಬಾರಿಗೆ ಸಕ್ರೆಬೈಲು ಆನೆ ಬಿಡಾರದ ಮೂರು ಆನೆಗಳನ್ನು ಬಳಸಿಕೊಳ್ಳಲು ಮಹಾನಗರ ಪಾಲಿಕೆ ನಿರ್ಧರಿಸಿದ ಸಂದರ್ಭದಲ್ಲಿ ಶಿವಮೊಗ್ಗದ ಜನತೆ ಸಂತಸಗೊಂಡಿದ್ದರು. ಮೈಸೂರು ದಸರಾ ಹೊರತು ಪಡಿಸಿದರೆ, ಚೆನ್ನಾಗಿ ನಡೆಯುವ ದಸರಾ ಉತ್ಸವಗಳಲ್ಲಿ ಶಿವಮೊಗ್ಗ ದಸರಾ ಕೂಡ ಒಂದು… ಪೂರಕವಾಗಿ ಶಿವಮೊಗ್ಗದಲ್ಲಿಯು ನಡೆಯುವ ಅಂಬಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಜನರು ಸಿದ್ದರವಾಗಿದ್ದರು
ಇನ್ನೂ ಅಂಬಾರಿಯ ಮೆರವಣಿಗೆ ವೇಳೆ ಯಾವೆಲ್ಲಾ ಹೆಣ್ಣಾನೆಗಳನ್ನು ಬಳಸಿಕೊಳ್ಳಬೇಕು ಎಂದು ಇಲಾಖೆಯ ಅಧಿಕಾರಿಗಳು ತಿರ್ಮಾನಿಸುವಾಗ ಬಿಡಾರದ ಬಹುತೇಕ ಎಲ್ಲಾ ಹೆಣ್ಣಾನೆಗಳನ್ನು ಗರ್ಭಾವಸ್ಥೆಯಲ್ಲಿದ್ದವು.ಈ ಬಗ್ಗೆ ಟುಡೆ ಈ ಮೊದಲೇ ವರದಿಯನ್ನು ಬಿತ್ತರಿಸಿತ್ತು.
ವೈರುದ್ಯಗಳ ನಡುವೆಯು ನೇತ್ರಾ ಹಾಗು ಹೇಮಾವತಿ ಆನೆಯನ್ನು ಸಾಗರ್ ಆನೆಗೆ ಕುಮ್ಕಿ ಆನೆಗಳಾಗಿ ಬಳಸಿಕೊಳ್ಳಲು ಇಲಾಖೆ ತೀರ್ಮಾನಿಸಿತ್ತು. ಇಲ್ಲಿ ನೇತ್ರಾ ಗರ್ಭವತಿಯಾಗಿದ್ದು ಗೊತ್ತಿತ್ತು. ಆದರೆ ಅದು ಯಾವಾಗ ಮರಿ ಹಾಕುತ್ತೆ ಎನ್ನುವ ಬಗ್ಗೆ ಗೇಜ್ ಮಾಡುವಲ್ಲಿ ವನ್ಯಜೀವಿ ವೈದ್ಯರು ಫೆಲ್ಯೂರ್ ಆಗಿದ್ದಾರೆ.
ಹೌದು ಈ ಸಲದ ಮೈಸೂರು ದಸರಾ ಉತ್ಸವಕ್ಕೆ ಸಕ್ರೆಬೈಲಿನ ಆನೆಗಳನ್ನು ಬಳಸಿಕೊಳ್ಳಲು ಬಂದ ವೈದ್ಯರ ತಂಡ ನಡೆಸಿದ ಪ್ರೆಗ್ನೆನ್ಸಿ ರಿಪೋರ್ಟ್ ನಲ್ಲಿ ಭಾನುಮತಿ ಗರ್ಭಿಣಿ ಎಂದು ನೇತ್ರಾವತಿ ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ ಎಂದು ವನ್ಯಜೀವಿ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಆದರೂ ನೇತ್ರಾ ಆನೆ ಜಸ್ಟ್ ಗರ್ಭಿಣಿ ಎಂಬುದು ಗೊತ್ತಾಗಿತ್ತು. ಈ ಸಂದರ್ಭದಲ್ಲಿ ವನ್ಯಜೀವಿ ವೈದ್ಯರು ಡಾ ಕಲ್ಲಪ್ಪ OOD ಮೇಲೆ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೆ ಡಾ.ವಿನಯ್ ಆನೆ ದಾಳಿಗೊಳಗಾಗಿ ಚಿಕಿತ್ಸೆಯಲ್ಲಿದ್ದರು.
ಇನ್ನೂ ಸಾಮಾನ್ಯವಾಗಿ ಆನೆಗಳು ಮರಿಹಾಕುವ ಎರಡು ಮೂರು ದಿನದ ಹಿಂದೆಯೇ ಅವುಗಳ ಹೊಟ್ಟೆಯಲ್ಲಿ ಮರಿ ಉರುಳಾಡುವುದು ಗೊತ್ತಾಗುತ್ತದೆ.ಹೊಟ್ಟೆಯ ಭಾಗದಲ್ಲಿ ಆಗುವ ಬದಲಾವಣೆಗಳು ಸಹಜವಾಗಿ ಮಾವುತ ಕಾವಾಡಿಗೆ ಗೊತ್ತಾಗುತ್ತದೆ. ಆದರೆ ನಾಲ್ಕು ದಿನಗಳಿಂದ ತಾಲೀಮಿನಲ್ಲಿ ಪಾಲ್ಗೊಂಡಿದ್ದ ನೇತ್ರಾ ಇಂತಹ ಸಹಜ ಕುರುಹುಗಳನ್ನ ನೀಡದೇ ಇದ್ದಕ್ಕಿದ್ದ ಹಾಗೆ ನೆನ್ನೆ ರಾತ್ರಿ ಹೆಣ್ಣು ಮರಿಗೆ ಜನ್ಮ ನೀಡಿದೆ.
ಮರಿ ಸಂಪೂರ್ಣ ಆರೋಗ್ಯವಾಗಿದೆ. ಇದು ಸಂತೋಷದಾಯಕ ವಿಚಾರವಾಗಿದೆ ನಿಜ…ಆದರೆ ಇಲ್ಲಿ ಪ್ರಶ್ನೆ ಮೂಡುವುದಕ್ಕೆ ಕಾರಣವಿದೆ. ತುಂಬು ಗರ್ಭಿಣಿಯಾಗಿದ್ದ ನೇತ್ರ ಮರಿ ಹಾಕುವ ನಾಲ್ಕು ಗಂಟೆ ಮೊದಲು ಗಂಟೆಗಟ್ಟಲೆ ತಾಲೀಮಿನಲ್ಲಿ ಹೆಜ್ಜೆ ಹಾಕಿದೆ. ಆಗ ಅದು ಅದೆಷ್ಟು ಯಾತನೆ ಅನುಭವಿಸಿರಬೇಕು. ಹೊಟ್ಟೆ ನೋವಿನಿಂದ ಅದೆಷ್ಟು ಬಳಲಿದೆ ಎಂಬುದು ಲೆಕ್ಕ ಹಾಕಲು ಸಾಧ್ಯವಿಲ್ಲ. ತಾನು ಇನ್ನೇನು ಮೂರ್ನಾಲ್ಕು ಗಂಟೆ ಹೊತ್ತಿನಲ್ಲಿ ಮರಿಗೆ ಜನ್ಮ ನೀಡುವ ರಹಸ್ಯ ಆ ನೋವಿನಲ್ಲಿಯೇ ಕಮರಿ ಹೋಗಿತ್ತೇನೋ ಗೊತ್ತಿಲ್ಲ..ಯಾತನಮಯವಾಗಿ ನೇತ್ರಾ ರಾಜಾಜ್ಞೆ ಪಾಲಿಸಿದೆ.
ಮನುಷ್ಯರ ವಾಸನೆ ಇರೋ ಜಾಗದಲ್ಲಿ ಮರಿ ಹಾಕೋದು ಕಡಿಮೆ.
ಸಾಮಾನ್ಯವಾಗಿ ಆನೆಗಳು ಕಾಡಿನ ಪರಿಸರದಲ್ಲಿ ಮರಿ ಹಾಕುತ್ತವೆ. ಬಿಡಾರದ ಆನೆಗಳಾದ್ರೆ..ಗರ್ಭಿಣಿ ಆನೆಯನ್ನು ಕಾಡಿನ ಪರಿಸರದಲ್ಲಿ ಕಟ್ಟಲಾಗುತ್ತದೆ. ಆನೆಯ ಆರೈಕೆಗೆ ಎರಡು ಹಿರಿಯ ಹೆಣ್ಣು ಸಾಕಾನೆಗಳನ್ನು ಸನಿಹದಲ್ಲಿ ಕಟ್ಟಲಾಗುತ್ತದೆ. ಗರ್ಭಿಣಿ ಆನೆ ಮರಿಹಾಕುವಾಗ ಅದೆಷ್ಟು ನೋವು ಅನುಭವಿಸುತ್ತಿದ್ದರೂ, ಈ ಸಾಕಾನೆಗಳು ಅದಕ್ಕೆ ಧೈರ್ಯ ತುಂಬುವ ಕೆಲಸ ಮಾಡುತ್ತವೆ. ನಿರ್ಜನ ಪ್ರದೇಶದಲ್ಲಿ ಭದ್ರತೆ ಇರೋ ಜಾಗದಲ್ಲಿಯೇ ಆನೆಯನ್ನು ಕಟ್ಟಿ ಹಾಕುವುದರಿಂದ ಅದರ ಹೆರಿಗೆ ತುಂಬಾ ಸಲೀಸಾಗಿರುತ್ತದೆ.
ಮನುಷ್ಯರಿರುವ ಸ್ಥಳದಲ್ಲಿ ಆನೆ ಸಾಮಾನ್ಯವಾಗಿ ಮರಿ ಹಾಕೋದಿಲ್ಲ. ಆದರೆ ವಾಸವಿ ಶಾಲಾ ಆವರಣದಲ್ಲಿ ಜನಸಂದಣಿ ಇರೋ ಪ್ರದೇಶದಲ್ಲಿ ನೇತ್ರಾ ಮರಿ ಹಾಕಿದೆ ಎಂದರೆ…ಅದು ಎಷ್ಟು ನೋವು ಅನುಭವಿಸಿದೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ನೇತ್ರಾಳ ಪರಿಸ್ಥಿತಿ ಮತ್ತವಳು ಅನುಭವಿಸಿದ ನೋವಿನ ಬಗ್ಗೆಯೇ ಅಲ್ಲಿನ ಸಿಬ್ಬಂದಿ ಆತಂಕಗೊಂಡಿದ್ದರು.
ಮನುಷ್ಯ ಬರೀ ಮಾತನಾಡುತ್ತಾನೆ, ಅದಕ್ಕೂ ದಿಕ್ಕಿರಲ್ಲ, ಲೆಕ್ಕವಿರಲ್ಲ… ಆದರೆ ಮೂಕಪ್ರಾಣಿ ತನ್ನ ಒಡಲ ಜೀವವನ್ನು ಹೊರಜಗತ್ತಿಗೆ ಪರಿಚಯಿಸುವಾಗ ಅನುಭವಿಸಿದ ನೋವನ್ನ ಮಾತ್ರ ತೋರಗೊಡಲಿಲ್ಲ. ಇದು ಅಚ್ಚರಿಯಲ್ಲಿ ನೇತ್ರಾಳ ಶಕ್ತಿ.. ಮರಿಹಾಕುತ್ತಲೇ ಮತ್ತೆ ಎದ್ದು ನಿಂತವಳಿಗೆ ಕೈ ಮುಗಿದೇ ಆಕೆಯ ಆರೈಕೆಗೆ ನಿಂತಿದ್ದರು..ತೆರೆಮರೆ ಮಾಡಿ, ಹುಲ್ಲು ಸುರಿದು, ಹೇಮಾವತಿಯನ್ನು ಜೊತೆ ಮಾಡಿ ನಿಲ್ಲಿಸುತ್ತಲೇ ಪುಟ್ಟ ಹೆಣ್ಣು ಮರಿಯು ಸಹ ಎದ್ದು ಅಮ್ಮನ ಕೆಚ್ಚಲು ಹುಡುಕುತ್ತಿತ್ತು..
ಇನ್ನೂ ನೇತ್ರಾ ಯಾವಾಗ ಗರ್ಭಿಣಿಯಾಗಿದ್ದು ಎಂಬ ನಿಖರ ಮಾಹಿತಿ ಮಾವುತರಿಗೆ ಇರಲಿಲ್ಲ. ದಿನಾ ಕಾಡಿಗೆ ಬಿಡಲು ಹಾಗು ಕರೆತರಲು ಹೋಗುವ ಸಿಬ್ಬಂದಿಗಳು ಇವರೇ ಆಗಿರುವುದರಿಂದ ಆನೆ ಎಲ್ಲಿ ಯಾವಾಗ ಮೇಟ್ ಆಗಿತ್ತು ಎಂಬ ಮಾಹಿತಿ ಇರುತ್ತೆ. ನೇತ್ರಾ ಹಲವು ತಿಂಗಳು ಸಹಜವಾಗಿಯೇ ಇದ್ದು ನಂತರ ಹೊಟ್ಟೆ ಭಾಗ ದೊಡ್ಡಾದಾಗಿದ್ದರಿಂದ ಮಾವುತರಿಗೆ ತಡವಾಗಿ ಗೊತ್ತಾಗಿದೆ. ಆಗ ಅವರು ಏಳೆಂಟು ತಿಂಗಳಾಗಿರಬಹುದು ಎಂದು ಅಂದಾಜಿಸಿದ್ದಾರೆ.
ಇತ್ತ ಸಕ್ರೆಬೈಲಿನಲ್ಲಿ ಭಾನುಮತಿ ತುಂಬು ಗರ್ಭಿಣಿಯಾಗಿದ್ದ ಮಾಹಿತಿ ಇದ್ದ ಕಾರಣಕ್ಕೆ ದಸರಾ ಉತ್ಸವಕ್ಕೆ ಬಳಸಿಕೊಳ್ಳಲಿಲ್ಲ, ಇತ್ತ ನೇತ್ರಾಗೆ ಎಷ್ಟು ತಿಂಗಳು ಎಂಬುದನ್ನು ಅಂದಾಜಿನ ಮೇಲೆ ಲೆಕ್ಕ ಮಾಡಿದ್ದೇ ತಪ್ಪಾಗಿ ಹೋಯ್ತು. ಮೈಸೂರು ದಸರಕ್ಕೆ ಸಕ್ರೆಬೈಲಿನ ಹೆಣ್ಣಾನೆ ಬಳಸಿಕೊಳ್ಳಲು ತೀರ್ಮಾನಿಸಿದಾಗ, ಬಿಡಾರಕ್ಕೆ ಬಂದಿದ್ದ ವನ್ಯಜೀವಿ ಡಾಕ್ಟರ್ ಗಳು ಪ್ರೆಗ್ನೆನ್ಸಿ ಟೆಸ್ಟ್ ಮಾಡಿದ್ದರು. ಆದರೆ ಅದರಲ್ಲಿ ಭಾನುಮತಿ ತುಂಬು ಗರ್ಭಿಣಿಯಂತ ಗೊತ್ತಾಗಿತ್ತು. ಆದರೆ ನೇತ್ರಾ ಆನೆಯ ರಿಪೋರ್ಟ್ನ ನೆಗೆಟಿವ್ ಬಂದಿತ್ತು.. ಹೀಗಾಗಿಯೇ ದಸರಾಕ್ಕೆ ನೇತ್ರಾ ಆನೆಯನ್ನು ಕಳಿಸಲು ನಿರ್ಧರಿಸಲಾಗಿತ್ತು.
ಡಾಕ್ಟರ್ ವಿನಯ್ ಮಾರ್ಚ್ ತಿಂಗಳಲ್ಲಿ ಕಾಡಾನೆ ದಾಳಿಗೆ ತುತ್ತಾಗಿ ಮೂರು ತಿಂಗಳ ರಜೆಯಲ್ಲಿದ್ದು ಇತ್ತಿಚ್ಚೆಗೆ ಅಷ್ಟೆ ಡ್ಯೂಟಿಗೆ ಜಾಯಿನ್ ಆಗಿದ್ರು. ತಮಗೆ ಗೊತ್ತಿದ್ದ ತಿಳುವಳಿಕೆ ಮೇಲೆ ನೇತ್ರಾಳನ್ನು ಪರೀಕ್ಷಿಸಿದ ವಿನಯ್ ಗೆ ಅದರ ಹೊಟ್ಟೆಯು ಊದಿಕೊಂಡಿರುವುದು ಹೊಟ್ಟೆಯೊಳಗೆ ಮರಿಯ ಜಾಡು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಗರ್ಭಿಣಿ ಮಹಿಳೆಯರಲ್ಲಿ ಕೆಲವು ಗರ್ಭಿಣಿ ಹೆಂಗಸರನ್ನು ಗರ್ಭಿಣಿ ಎಂದು ಊಹಿಸುವುದೇ ಕಷ್ಟವಾಗುತ್ತೆ. ಹೊಟ್ಟೆನೋವು ಎಂದು ಆಸ್ಪತ್ರೆಗೆ ಬಂದವರಿಗೆ ಹೆರಿಗೆಯಾದ ಉದಾಹರಣೆಗಳು ಸಾಕಷ್ಟು ಇವೆ.
ಅದೇರೀತಿಯಲ್ಲಿ ಆನೆಗಳಲ್ಲಿ ಕೆಲ ಗರ್ಭಿಣಿ ಆನೆಯನ್ನು ಹೊಟ್ಟೆಯಿಂದ ಗುರುತಿಸುವುದು ಕಷ್ಟವಾಗುತ್ತದೆ. ಭಾನುಮತಿ ತುಂಬು ಗರ್ಭಿಣಿ ಎಂದು ದಸರಾ ಉತ್ಸವದಿಂದ ಕೈಬಿಟ್ಟ ಅರಣ್ಯಾಧಿಕಾರಿಗಳು, ನೇತ್ರಳು ಎಂಟು ತಿಂಗಳು ಇರಬಹುದು. ಸಾಮಾನ್ಯವಾಗಿ ಆನೆ ಮರಿಹಾಕಲು 19-20 ತಿಂಗಳು ಬೇಕು ನೇತ್ರ ಆನೆಯನ್ನು ತಾಲೀಮಿಗೆ ಬಳಸಿಕೊಳ್ಳಬಹುದು. ಅದರ ಆರೋಗ್ಯ ಕೂಡ ಚೆನ್ನಾಗಿರುವುತ್ತದೆ ಎಂಬ ಲೆಕ್ಕಚಾರದಲ್ಲಿಯೇ ನೇತ್ರಾ ಆನೆಗೆ ಮಣೆ ಹಾಕಿದ್ರು.
ಆದರೆ ನೇತ್ರಾ ತುಂಬು ಗರ್ಭಿಣಿಯಾಗಿ, ದಸರಾ ಹಬ್ಬದಲ್ಲಿಯೇ ಹೆಣ್ಣು ಮರಿಗೆ ಜನ್ಮ ನೀಡಿದೆ. ಮರಿ ಕೂಡ ಆರೋಗ್ಯವಾಗಿದೆ. ಅದೇ ಈಗ ಸದ್ಯದ ಸಮಾಧಾನದ ವಿಚಾರ. ಆದರೆ ಈ ಬಾರಿ ದಸರಾ ಉತ್ಸವದಲ್ಲಿ ಆನೆಗಳ ಜಂಬು ಸವಾರಿಗೆ ಬ್ರೇಕ್ ಬಿದ್ದಂತಾಗಿರುವುದು ಜನತೆಗೆ ನಿರಾಸೆಯನ್ನು ಮೂಡಿಸಿದೆ. ಅಂಬಾರಿ ಹೊರಬೇಕಿದ್ದ ಸಾಗರ್ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದಾನೆ. ಹೇಮಾವತಿ ಸಾಗರ್ ಗೆ ಸಾಥ್ ನೀಡಲಿದೆ.
ಇನ್ನಷ್ಟು ಸುದ್ದಿಗಳು
ದುರ್ಗಾಷ್ಟಮಿಯ ದಿನದಂತೆ 3 ಕಡೆಗಳಲ್ಲಿ ಕಳ್ಳತನ | ಎರಡು ದೇಗುಲದ ಭೀಗ ಮುಗಿದ ಕಳ್ಳರು
ರಾಗಿಗುಡ್ಡ ಕೇಸ್ |DYSP ಯಿಂದಲೇ ದೂರು | ದಾಖಲಾಯ್ತು 150 ಮಂದಿ ವಿರುದ್ಧ ಕೇಸ್ !
ಭದ್ರಾವತಿ ಕೇಸ್ | ಕೊಲೆಯಾದ ಟಿಪ್ಪು ನಗರ ನಿವಾಸಿ ಬಗ್ಗೆ SP ಮಿಥುನ್ ಕುಮಾರ್ ಹೇಳಿದ್ದೇನು?
