ದುರ್ಗಾಷ್ಟಮಿಯ ದಿನದಂದೆ 3 ಕಡೆಗಳಲ್ಲಿ ಕಳ್ಳತನ | ಎರಡು ದೇಗುಲದ ಬೀಗ ಮುರಿದ ಕಳ್ಳರು

Here is a report about the incident that took place at Hosnagar in Shimoga districtಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ನಡೆದ ಘಟನೆಯ ಬಗ್ಗೆ ವರದಿ ಇಲ್ಲಿದೆ

ದುರ್ಗಾಷ್ಟಮಿಯ ದಿನದಂದೆ  3 ಕಡೆಗಳಲ್ಲಿ ಕಳ್ಳತನ | ಎರಡು ದೇಗುಲದ ಬೀಗ ಮುರಿದ ಕಳ್ಳರು

KARNATAKA NEWS/ ONLINE / Malenadu today/ Oct 22, 2023 SHIVAMOGGA NEWS

 

ಹೊಸನಗರದಲ್ಲಿ ದುರ್ಗಾಷ್ಟಮಿ ಬೆಳಗಿನ ಜಾವ ಒಂದು ಮನೆ,  ಎರಡು ದೇವಸ್ಥಾನಗಳ ಬೀಗ ಮುರಿದು ಕಳ್ಳತನವೆಸಗಿದ ಪ್ರಕರಣದ ಬಗ್ಗೆ ವರದಿಯಾಗಿದೆ. ಪಟ್ಟಣದ ಚೌಡಮ್ಮ ರಸ್ತೆಯ ಶ್ರೀ ನಾಗ ಚೌಡೇಶ್ವರಿ ಗುಡಿಯ ಬೀಗ ಹಾಗೂ ಹಳೆ ಸಾಗರ ರಸ್ತೆಯ  ಜೀವಿ ವೇಣುಗೋಪಾಲ್ ಎಂಬುವರ ಮನೆಯಲ್ಲಿ ಬಾಡಿಗೆಗಿದ್ದ ಶಿಕ್ಷಕರೊಬ್ಬರ ಮನೆಯ ಹೊರಗಿನ ಹಾಗೂ ಒಳಗಿನ ಬಾಗಿಲಿನ ಬೀಗ ಮುರಿದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ನವರಾತ್ರಿಯ ದುರ್ಗಾಷ್ಟಮಿಯ ಬೆಳಗಿನ ಜಾವ ಸಂಭವಿಸಿ ಜನರಲ್ಲಿ ಆತಂಕ ಉಂಟು ಮಾಡಿದೆ

ಇಲ್ಲಿ ವಿಫಲ ಯತ್ನ ನಡೆಸಿದ ಕಳ್ಳರು ಹಳೆ ಸಾಗರ ರಸ್ತೆಯ ಮಾರಿಕಾಂಬಾ ದೇವಸ್ಥಾನದ ಬೀಗ ಮುರಿದು ದೇವಸ್ಥಾನದ ಹುಂಡಿಯ ಚಿಲ್ಲರೆ ಹಣ ಬಿಟ್ಟು ನೋಟುಗಳನ್ನು  ಬಗ್ಗೆ ದೇವಸ್ಥಾನ ಸಮಿತಿಯ ಹೆಚ್ಎನ್ ಶ್ರೀಪತಿ ರಾವ್ ಹಾಗೂ ಎನ್ ಶ್ರೀಧರ ಉಡುಪ ಪೊಲೀಸರಿಗೆ ದೂರು ನೀಡಿದ ಬಗ್ಗೆ ತಿಳಿದು ಬಂದಿದೆ

ರಾಗಿಗುಡ್ಡ ಕೇಸ್​ |DYSP ಯಿಂದಲೇ ದೂರು | ದಾಖಲಾಯ್ತು 150 ಮಂದಿ ವಿರುದ್ಧ ಕೇಸ್​ !

ಕಳ್ಳತನ ಸುದ್ದಿ ತಿಳಿದಾಕ್ಷಣ ಸಿಪಿಐ ಗುರಣ್ಣ ಎಸ್ ಹೆಬ್ಬಾಳ ಪಿಎಸ್ಐ ಶಿವಾನಂದ ಕೋಳಿ ಸಿಬ್ಬಂದಿಗಳ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನದ ಪತ್ತೆಗಾಗಿ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಕರೆಸುವುದಾಗಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಸಿಪಿಐ ಗುರಣ್ಣ ತಿಳಿಸಿದ್ದಾರೆ


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ