ಬೈಕ್​ HORN ಮಾಡಿದ್ದಕ್ಕೆ , FOLLOW ಮಾಡಿಕೊಂಡು ಬಂದು ನವುಲೆ ಕೆರೆ ಬಳಿ ಹಲ್ಲೆ

Here is a report about the incident that happened near Navule Lake in Shimoga ಶಿವಮೊಗ್ಗದ ನವುಲೆ ಕೆರೆ ಬಳಿ ನಡೆದ ಘಟನೆ ಬಗ್ಗೆ ವರದಿ ಇಲ್ಲಿದೆ

ಬೈಕ್​ HORN  ಮಾಡಿದ್ದಕ್ಕೆ , FOLLOW ಮಾಡಿಕೊಂಡು ಬಂದು ನವುಲೆ ಕೆರೆ ಬಳಿ ಹಲ್ಲೆ

KARNATAKA NEWS/ ONLINE / Malenadu today/ Oct 22, 2023 SHIVAMOGGA NEWS

 

ಬೈಕ್ ಹಾರ್ನ್​ ಮಾಡಿದ ವಿಚಾರಕ್ಕೆ ಕಿರಿಕ್ ತೆಗೆದು ಬೈಕ್ ಫಾಲೋ ಮಾಡಿಕೊಂಡು ಹಿಂದಿನಿಂದ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ ಸಂಬಂಧ ಪ್ರಕರಣವೊಂದು ವಿನೋಬನಗರ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಗಿದೆ. 

ಶಿವಮೊಗ್ಗದಲ್ಲಿ ಬೇಕೆಂತಲೇ ಕಿರಿಕ್ ತೆಗೆದು ಹಲ್ಲೆ ಮಾಡುವ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದೆ. ಶಿವಮೊಗ್ಗ ಪೊಲೀಸರು ಈ ಹಿಂದೆ ಇಂತಹ ಕಿರಿಕ್ ಪಾರ್ಟಿಗಳನ್ನ ಹುಡುಕಿ ಅವರಿಗೆ ಬೇಕಾದ ಟ್ರೀಟ್ಮೆಂಟ್ ನೀಡುತ್ತಿದ್ದರು. 

ಆದರೆ ಇತ್ತೀಚೆಗೆ ಇಂತಹ ಟ್ರೀಟ್ಮೆಂಟ್​ಗಳು ಕಡಿಮೆಯಾಗಿದೆ ಎನ್ನುತ್ತಿವೆ ಪೊಲೀಸ್ ಮೂಲಗಳು. ಇದರ ಪರಿಣಾಮ ಎಂಬಂತೆ ಕಿರಿಕ್ ಪಾರ್ಟಿಗಳ ಹಾವಳಿಗಳು ಹೆಚ್ಚಾಗಿದ್ದು ಹಲ್ಲೆ, ರಾಬರಿ, ದರೋಡೆ ಪ್ರಕರಣಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. 

ಇನ್ನೂ ನಡೆದ ಘಟನೆಯಲ್ಲಿ  ಗೋಪಿಸರ್ಕಲ್​ನಲ್ಲಿ ಮಂಜುನಾಥ್ ಎಂಬವರು ತಮ್ಮ ಸಂಬಂಧಿ ಜೊತೆ ಊಟ ಮುಗಿಸಿಕೊಂಡು ವಾಪಸ್ ಮನೆಗೆ ಹೊರಟಿದ್ದಾರೆ. ಈ ವೇಳೆ ಮಥುರಾ ಪ್ಯಾರಡೇಸ್​ ಬಳಿ ಎದುರು ವಾಹನಗಳಿದ್ದ ಕಾರಣಕ್ಕೆ ಹಾರ್ನ್​ ಮಾಡಿದ್ದಾರೆ. ಇದಕ್ಕೆ ಬೈಕ್​ನಲ್ಲಿದ್ದ ಇಬ್ಬರು ಮಹಾವೀರ್​ ಸರ್ಕಲ್​ ಬಳಿ ಮಂಜುನಾಥ್​ರವರ ಬೈಕ್​ ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ,  ಸವಳಂಗ ರಸ್ತೆಯ ಕಮಲ ನರ್ಸಿಂಗ್ ಹೋಂ ಬಳಿ ಪುನಃ ಅಡ್ಡಗಟ್ಟಿ ಹೆದರಿಸಿದ್ದಾರೆ. ಅಲ್ಲಿಂದ ಮತ್ತೆ ಫಾಲೋ ಮಾಡಿಕೊಂಡು ನವುಲೆ ಕೆರೆ ಬಳಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಇನ್ನೂ ಬೈಕ್​ನಲ್ಲಿದ್ದ ಸಂಬಂಧಿ ಮಂಜುನಾಥ್​ರವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ

ರಾಗಿಗುಡ್ಡ ಕೇಸ್​ |DYSP ಯಿಂದಲೇ ದೂರು | ದಾಖಲಾಯ್ತು 150 ಮಂದಿ ವಿರುದ್ಧ ಕೇಸ್​ !


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ