ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

Attention Passengers: Here is the details of special trains run by South Western Railway for Dussehra festivalಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರದ ವಿವರ ಇಲ್ಲಿದೆ

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Oct 15, 2023 SHIVAMOGGA NEWS

ನೈರುತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ

ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ಮೈಸೂರು-ಬೆಂಗಳೂರು ಮತ್ತು ಮೈಸೂರು-ಚಾಮರಾಜನಗರ ನಿಲ್ದಾಣಗಳ ನಡುವೆ ಕಾಯ್ದಿರಿಸದ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ವಲಯವು ನಿರ್ಧರಿಸಿದೆ. ಅವುಗಳ ಮಾಹಿತಿ ಕೆಳಗಿನಂತಿವೆ:

1. ರೈಲು ಸಂಖ್ಯೆ 06279/06280 ಮೈಸೂರು-ಕೆ.ಎಸ್.ಆರ್ ಬೆಂಗಳೂರು-ಮೈಸೂರು ಕಾಯ್ದಿರಿಸದ ವಿಶೇಷ (5  ಟ್ರಿಪ್ಸ್).

ರೈಲು ಸಂಖ್ಯೆ 06279 ಮೈಸೂರು-ಕೆ.ಎಸ್.ಆರ್ ಬೆಂಗಳೂರು ವಿಶೇಷ ರೈಲು ಅಕ್ಟೋಬರ್ 20 ರಿಂದ 24, 2023 ರವರೆಗೆ ರಾತ್ರಿ 11:15 ಗಂಟೆಗೆ ಮೈಸೂರು ನಿಲ್ದಾಣದಿಂದ ಹೊರಟು ಮರುದಿನ 02:30 a.m. ಗಂಟೆಗೆ ಕೆ.ಎಸ್.ಆರ್ ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06280 ಕೆ.ಎಸ್.ಆರ್ ಬೆಂಗಳೂರು-ಮೈಸೂರು ವಿಶೇಷ ರೈಲು ಅಕ್ಟೋಬರ್ 21 ರಿಂದ 25, 2023 ರವರೆಗೆ ಮುಂಜಾನೆ 3 ಗಂಟೆಗೆ ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ಹೊರಟು ಅದೇ ದಿನ ಬೆಳಿಗ್ಗೆ 06:15 ಗಂಟೆಗೆ ಮೈಸೂರು ತಲುಪಲಿದೆ.

ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ನಾಗನಹಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ, ಚಂದ್ರಗಿರಿ ಕೊಪ್ಪಳ ಹಾಲ್ಟ್, ಬ್ಯಾಡ್ರಹಳ್ಳಿ, ಯಲಿಯೂರು, ಮಂಡ್ಯ, ಹನಕೆರೆ, ಮದ್ದೂರು, ಶೆಟ್ಟಿಹಳ್ಳಿ, ಚನ್ನಪಟ್ಟಣ, ರಾಮನಗರಂ, ಬಿಡದಿ, ಹೆಜ್ಜಾಲ, ಕೆಂಗೇರಿ ಮತ್ತು ನಾಯಂಡಹಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ಈ ವಿಶೇಷ ರೈಲುಗಳಲ್ಲಿ ಎಸಿ ಚೇರ್ ಕಾರ್ (1), ನಾನ್ ಎಸಿ ಚೇರ್ ಕಾರ್ (18) ಮತ್ತು 2 ನೇ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್/ ಅಂಗವಿಕಲ ಸ್ನೇಹಿ ಕಂಪಾರ್ಟೆಂಟ್ (2) ಸೇರಿದಂತೆ ಒಟ್ಟು 21 ಬೋಗಿಗಳು ಹೊಂದಿರುತ್ತವೆ.

2. ರೈಲು ಸಂಖ್ಯೆ 06597/06598 ಮೈಸೂರು-ಕೆ.ಎಸ್.ಆರ್ ಬೆಂಗಳೂರು-ಮೈಸೂರು ಕಾಯ್ದಿರಿಸದ ವಿಶೇಷ (5 ಟ್ರಿಪ್).

ರೈಲು ಸಂಖ್ಯೆ 06597 ಮೈಸೂರು-ಕೆ.ಎಸ್.ಆರ್ ಬೆಂಗಳೂರು ವಿಶೇಷ ರೈಲು ಅಕ್ಟೋಬರ್ 20 ರಿಂದ 24, 2023 ರವರೆಗೆ ಮಧ್ಯಾಹ್ನ 12:15 ಗಂಟೆಗೆ ಮೈಸೂರು ನಿಲ್ದಾಣದಿಂದ ಹೊರಟು ಅದೇ ದಿನ ಮಧ್ಯಾಹ್ನ 03:30 ಗಂಟೆಗೆ ಕೆ.ಎಸ್‌.ಆರ್ ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06598 ಕೆ.ಎಸ್.ಆರ್. ಬೆಂಗಳೂರು-ಮೈಸೂರು ವಿಶೇಷ ರೈಲು ಅಕ್ಟೋಬರ್ 20 ರಿಂದ 24, 2023 ರವರೆಗೆ ಮಧ್ಯಾಹ್ನ 03:45 ಗಂಟೆಗೆ ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ಹೊರಟು ಅದೇ ದಿನ ಸಂಜೆ 07:20 ಗಂಟೆಗೆ ಮೈಸೂರು ನಿಲ್ದಾಣವನ್ನು ತಲುಪಲಿದೆ.

ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ಕೃಷ್ಣದೇವರಾಯ ಹಾಲ್ಡ್, ನಾಯಂಡಹಳ್ಳಿ, ಜ್ಞಾನ ಭಾರತಿ, ಕೆಂಗೇರಿ, ಹೆಜ್ಜಾಲ, ಬಿಡದಿ, ರಾಮನಗರಂ, ಚನ್ನಪಟ್ಟಣ, ಶೆಟ್ಟಿಹಳ್ಳಿ, ಮದ್ದೂರು, ಹನಕೆರೆ, ಮಂಡ್ಯ, ಯಲಿಯೂರು, ಬ್ಯಾಡರಹಳ್ಳಿ, ಚಂದ್ರಗಿರಿ ಕೊಪ್ಪಳ ಹಾಲ್ಟ್, ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ನಾಗನಹಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ಈ ವಿಶೇಷ ರೈಲುಗಳು 8 ಡೆಮು ಕಾರ್ ಬೋಗಿಗಳನ್ನು ಹೊಂದಿರುತ್ತವೆ

3. ರೈಲು ಸಂಖ್ಯೆ 06281/06282 ಮೈಸೂರು-ಚಾಮರಾಜನಗರ-ಮೈಸೂರು ಕಾಯ್ದಿರಿಸದ ವಿಶೇಷ (1 ಟ್ರಿಪ್).

ರೈಲು ಸಂಖ್ಯೆ 06281 ಮೈಸೂರು-ಚಾಮರಾಜನಗರ ವಿಶೇಷ ರೈಲು ಅಕ್ಟೋಬರ್ 24, 2023 ರಂದು ರಾತ್ರಿ 11:30 ಗಂಟೆಗೆ ಮೈಸೂರಿನಿಂದ ಹೊರಟು ಮರುದಿನ 01:15 a.m. ಗಂಟೆಗೆ ಕ್ಕೆ ಚಾಮರಾಜನಗರ ನಿಲ್ದಾಣವನ್ನು ತಲುಪಲಿದೆ.

ಅದೇರೀತಿ, ಹಿಂದಿರುಗುವ ದಿಕ್ಕಿನಲ್ಲಿ ಈ ರೈಲು (06282) ಅಕ್ಟೋಬರ್ 25, 2023 ರಂದು ಬೆಳಿಗ್ಗೆ 5 ಗಂಟೆಗೆ ಚಾಮರಾಜನಗರದಿಂದ ಹೊರಟು ಅದೇ ದಿನ ಬೆಳಿಗ್ಗೆ 06:50 ಕ್ಕೆ ಮೈಸೂರು ತಲುಪಲಿದೆ.



ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ಚಾಮರಾಜಪುರಂ, ಅಶೋಕಪುರಂ, ಕಡಕೋಳ, ತಾಂಡವಪುರ ಹಾಲ್ಟ್, ಸುಜಾತಾಪುರಂ ಹಾಲ್ಟ್, ನಂಜನಗೂಡು ಟೌನ್, ಚಿನ್ನದಗುಡಿಹುಂಡಿ ಹಾಲ್ಡ್, ನರಸಾಂಬುಧಿ ಹಾಲ್ಡ್, ಕವಲಂದೆ ಹಾಲ್ಟ್, ಕೊಣನೂರು ಹಾಲ್ಟ್, ಬದನಗುಪ್ಪೆ ಹಾಲ್ಟ್ ಮತ್ತು ಮರಿಯಾಲ್ ಗಂಗವಾಡಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ಈ ವಿಶೇಷ ರೈಲುಗಳು ಸಾಮಾನ್ಯ ದ್ವಿತೀಯ ದರ್ಜೆ (13) ಮತ್ತು 2 ನೇ ದರ್ಜೆ ಲಗೇಜ್ ಕಂ ಬ್ರೇಕ್ ವ್ಯಾನ್/ಅಂಗವಿಕಲ ಸ್ನೇಹಿ ಕಂಪಾರ್ಟೆಂಟ್ (2) ಸೇರಿದಂತೆ ಒಟ್ಟು 15 ಬೋಗಿಗಳನ್ನು ಹೊಂದಿರುತ್ತವೆ.

.

4. ರೈಲು ಸಂಖ್ಯೆ 06283/06284 ಮೈಸೂರು-ಚಾಮರಾಜನಗರ-ಮೈಸೂರು ಕಾಯ್ದಿರಿಸದ ವಿಶೇಷ (1 ಟ್ರಿಪ್).



ರೈಲು ಸಂಖ್ಯೆ 06283 ಮೈಸೂರು-ಚಾಮರಾಜನಗರ ವಿಶೇಷ ರೈಲು ಅಕ್ಟೋಬರ್ 24, 2023 ರಂದು ರಾತ್ರಿ 09:15 ಗಂಟೆಗೆ ಮೈಸೂರಿನಿಂದ ಹೊರಟು ಅದೇ ದಿನ ರಾತ್ರಿ 11:10 ಕ್ಕೆ ಚಾಮರಾಜನಗರವನ್ನು ತಲುಪಲಿದೆ.

ಅದೇರೀತಿ, ಹಿಂದಿರುಗುವ ದಿಕ್ಕಿನಲ್ಲಿ ಈ ರೈಲು (06284) ಅಕ್ಟೋಬರ್ 24, 2023 ರಂದು ರಾತ್ರಿ 11:30 ಗಂಟೆಗೆ ಚಾಮರಾಜನಗರದಿಂದ ಹೊರಟು ಮರುದಿನ 01:30 a.m. ಗಂಟೆಗೆ ಮೈಸೂರು ತಲುಪಲಿದೆ.

ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ಚಾಮರಾಜಪುರಂ, ಅಶೋಕಪುರಂ, ಕಡಕೋಳ, ತಾಂಡವಪುರ ಹಾಲ್ಟ್ ಸುಜಾತಾಪುರಂ' ಹಾಲ್ಟ್, ನಂಜನಗೂಡು ಟೌನ್, ಚಿನ್ನದಗುಡಿಹುಂಡಿ ಹಾಲ್ಡ್‌, ನರಸಾಂಬುಧಿ ಹಾಲ್ಡ್, ಕವಲಂದೆ ಹಾಲ್ಟ್, ಕೊಣನೂರು ಹಾಲ್ಟ್, ಬದನಗುಪ್ಪೆ ಹಾಲ್ಟ್ ಮತ್ತು ಮರಿಯಾಲ್ ಗಂಗವಾಡಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ಈ ವಿಶೇಷ ರೈಲುಗಳಲ್ಲಿ ಎಸಿ ಚೇರ್ ಕಾರ್ (1), ನಾನ್ ಎಸಿ ಚೇರ್‌ ಕಾ‌ ಸಿಟಿಂಗ್ (9), ಜನರಲ್ ಸೆಕೆಂಡ್ ಕ್ಲಾಸ್ (9) ಮತ್ತು 2 ನೇ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್/ಅಂಗವಿಕಲ ಸ್ನೇಹಿ ಕಂಪಾರ್ಟೆಂಟ್ (2) ಸೇರಿದಂತೆ 21 ಬೋಗಿಗಳು ಹೊಂದಿರುತ್ತವೆ.

ಸೂಚನೆ: ಎಸಿ ಚೇರ್ ಕಾರ್ ಬೋಗಿಗಳು ಲಾಕ್ ಸ್ಥಿತಿಯಲ್ಲಿರುತ್ತವೆ.


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?