ಕೋಟೆ ಮಾರಿಕಾಂಬಾ ಜಾತ್ರೆ ಹಿನ್ನೆಲೆ ಬೆಂಗಳೂರು, ಚಿತ್ರದುರ್ಗ, ಹೊನ್ನಾಳಿ ವಾಹನ ಸಂಚಾರ ಮಾರ್ಗ ಬದಲಾವಣೆ! ನಿಲುಗಡೆ ನಿಷೇಧ ! ಬಸ್​ಗಳ ಓಡಾಟ ಹೇಗೆ ?

Kote Marikamba jatre background Bangalore, Chitradurga, Honnali traffic route change! Parking ban! How are the buses running?

ಕೋಟೆ ಮಾರಿಕಾಂಬಾ ಜಾತ್ರೆ ಹಿನ್ನೆಲೆ ಬೆಂಗಳೂರು, ಚಿತ್ರದುರ್ಗ, ಹೊನ್ನಾಳಿ ವಾಹನ ಸಂಚಾರ ಮಾರ್ಗ ಬದಲಾವಣೆ! ನಿಲುಗಡೆ ನಿಷೇಧ ! ಬಸ್​ಗಳ ಓಡಾಟ ಹೇಗೆ ?
Kote Marikamba jatre , Bangalore, Chitradurga, Honnali traffic route ,Parking ban

Shivamogga Mar 11, 2024 Kote Marikamba jatre , Bangalore, Chitradurga, Honnali traffic route ,Parking ban  ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆ 2024  ಸಂಬಂಧ ಜಿಲ್ಲಾಡಳಿತ ಜಾತ್ರೆಯ ದಿನಗಳಂದು ಶಿವಮೊಗ್ಗಕ್ಕೆ ಬಂದು ಹೋಗುವ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. 

ದಿನಾಂಕ:12.3.2024 ರಿಂದ ದಿನಾಂಕ:16.3.2024ರವರೆಗೆ ಶಿವಮೊಗ್ಗ ನಗರದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ ಜರುಗಲಿದ್ದು ವಾಹನಗಳ ಸಂಚಾರ ನಿಷೇಧ, ನಿಲುಗಡೆ ಮತ್ತು ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲು ಸಂಬಂಧಿಸಿದಂತೆ ತಾತ್ಕಾಲಿಕ ಅಧಿಸೂಚನೆ  ಹೊರಡಿಸಲಾಗಿದೆ.  

ಅಧಿಸೂಚನೆಯಲ್ಲಿ ಏನಿದೆ?

ಕೋಟೆ ಶ್ರೀ ಮಾರಿಕಾಂಬ ದೇವಿ ದೇವಸ್ಥಾನವು ಪೂರ್ವಸಂಚಾರ ಪೋಲಿಸ್ ಠಾಣೆ ವ್ಯಾಪ್ತಿಯ ಎಸ್.ಪಿ.ಎಂ ರಸ್ತೆಯಲ್ಲಿದ್ದು, ಮೇಲ್ಕಂಡ ಜಾತ್ರಾ ಅವಧಿಯಲ್ಲಿ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಕಾರು, ದ್ವಿಚಕ್ರ. ಬಸ್ ಹಾಗೂ ಇತರೆ ವಾಹನಗಳಲ್ಲಿ ಬಂದು ಹೋಗಲಿರುತ್ತಾರೆ

ಈ ಸಮಯದಲ್ಲಿ ಹೊಳೆಬಸ್ ಸ್ಟಾಪ್, ಶಂಕರಮಠ ರಸ್ತೆ, ಬಿ.ಹೆಚ್ ರಸ್ತೆ, ಕೋಟೆ ರಸ್ತೆ, ಎಸ್.ಪಿ.ಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್, ಶಿವಪ್ಪನಾಯಕ ಸರ್ಕಲ್ ಹಾಗೂ ಇತರೆಡೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇರುತ್ತದೆ. 

ಆದ ಕಾರಣ ಮೇಲ್ಕಂಡ 5 ದಿನಗಳ ಕಾಲ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ದಿನಾಂಕ:12-03-2024 ರಿಂದ ದಿನಾಂಕ:16-03-2024ರವರೆಗೆ ವಾಹನಗಳ ಸಂಚಾರ ನಿಷೇಧ, ನಿಲುಗಡೆ ಮತ್ತು ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲು ಉಲ್ಲೇಖಿತ ಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. 

ಮಾರ್ಗ ಬದಲಾವಣೆ 

1. ಬೆಂಗಳೂರು, ಭದ್ರಾವತಿ, ಎನ್ ಆರ್ ಪುರ ಕಡೆಗಳಿಂದ ಬರುವ ಎಲ್ಲಾ ಭಾರಿ ವಾಹನಗಳು, ಸರಕು ಸಾಗಣೆ ವಾಹನಗಳು ಮತ್ತು ಬಸ್ ಗಳು ಎಂ.ಆರ್.ಎಸ್ ಸರ್ಕಲ್, ಬೈ ಪಾಸ್ ಮೂಲಕ ಶಿವಮೊಗ್ಗ ನಗರಕ್ಕೆ ಪ್ರವೇಶ ಪಡೆಯುವುದು.

2. ಚಿತ್ರದುರ್ಗ, ಹೊಳೆಹೊನ್ನೂರು ಕಡೆಯಿಂದ ಬರುವ ಎಲ್ಲಾ ಭಾರಿ ವಾಹನಗಳು, ಸರಕು, ಸಾಗಾಣೆ ವಾಹನಗಳು ಮತ್ತು ಬಸ್ ಗಳು ವಿದ್ಯಾನಗರ, ಎಂ.ಆರ್.ಎಸ್ ಸರ್ಕಲ್, ಬೈಪಾಸ್ ಮೂಲಕ ಶಿವಮೊಗ್ಗ ನಗರಕ್ಕೆ ಪ್ರವೇಶ ಪಡೆಯುವುದು.

3. ಹೊನ್ನಾಳಿ, ಹೊಳಲೂರು ಕಡೆಯಿಂದ ಬರುವ ಎಲ್ಲಾ ಭಾರಿ ವಾಹನಗಳು, ಸರಕು, ಸಾಗಾಣೆ ವಾಹನಗಳು ಮತ್ತು ಬಸ್ ಗಳು ಸಂಗೋಳ್ಳಿರಾಯಣ್ಣ ಸರ್ಕಲ್, ಕೆ.ಇ.ಬಿ ಸರ್ಕಲ್, ರೈಲ್ವೇ ಸ್ಟೇಷನ್, ಉಷಾ ನರ್ಸಿಂಗ್ ಹೋಂ ಸರ್ಕಲ್, ನೂರು ಅಡಿ ರಸ್ತೆ ಮೂಲಕ ಸಂಚರಿಸುವುದು.

4. ಶಿಕಾರಿಪುರ ಸವಳಂಗದಿಂದ ಬರುವ ಎಲ್ಲಾ ಭಾರಿ ವಾಹನಗಳು, ಎಲ್ಲಾ ಬಸ್ಸುಗಳನ್ನು ಉಷಾ ನರ್ಸಿಂಗ್ ಹೋಂ, ಲಕ್ಷ್ಮೀ ಟಾಕೀಸ್, ಪೊಲೀಸ್ ಚೌಕಿ, ಆಯ್ಯೋಳ ಮುಖಾಂತರ ಸಾಗರ ರಸ್ತೆಯಲ್ಲಿ ಹೋಗುವುದು.

5. ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ, ಎನ್ ಆರ್ ಪುರ ಕಡೆಗೆ ಹೋಗುವ ಎಲ್ಲಾ ವಾಹನಗಳು.ಸಂದೇಶ್ ಮೋಟರ್ಸ್,ಬೈ ಪಾಸ್ ರಸ್ತೆ, ಎಂ.ಆರ್.ಎಸ್ ಸರ್ಕಲ್ ಮೂಲಕ ಸಂಚರಿಸುವುದು.

6. ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ. ಶಿಕಾರಿಪುರ, ಸೊರಬ, ಹರಿಹರ, ದಾವಣಗೆರೆ ಹೋಗುವ ಎಲ್ಲಾ ಬಸ್ ಗಳು ಮತ್ತು ಭಾರಿ ಸರಕು ವಾಹನಗಳು ಸಾಗರ ರಸ್ತೆ ಮುಖಾಂತರವಾಗಿ ಹೆಲಿಪ್ಯಾಡ್ ಸರ್ಕಲ್, ಆಯ್ಯೋಳ ಸರ್ಕಲ್, ಪೊಲೀಸ್ ಚೌಕಿ, ಉಷಾ ನರ್ಸಿಂಗ್ ಹೋಂ, ನವಳಂಗ ರಸ್ತೆ ಮೂಲಕ ಹೋಗುವುದು.

7. ಕೋಟೆ ಮಾರಿಕಾಂಬ ದೇವಸ್ಥಾನದ ಸುತ್ತ ಇರುವ ಎಲ್ಲಾ ರಸ್ತೆಯಲ್ಲಿ 500 ಮೀಟರ್ ವ್ಯಾಪ್ತಿಯಲ್ಲಿ ಎಲ್ಲಾ ವಾಹನಗಳ ಸಂಚಾರ ನಿಷೇಧ ಮಾಡುವುದು.

8. ದಿನಾಂಕ:12.3.2024 ರಂದು ಬೆಳಿಗ್ಗೆ 3.00 ಎ.ಎಂ ಗಂಟೆಯಿಂದ ರಾತ್ರಿ 11-00 ಗಂಟೆಯವರೆಗೆ ರಾಮಣ್ಣ

ಶ್ರೇಷ್ಠಿ ಪಾರ್ಕ್ ನಿಂದ ಗಾಂಧಿಬಜಾರ್ ರಸ್ತೆಯಲ್ಲಿ ಶಿವಪ್ಪನಾಯಕ ಸರ್ಕಲ್ ವರೆಗೆ ಮತ್ತು ಶಿವಪ್ಪನಾಯಕ ಸರ್ಕಲ್ ಸುತ್ತಮುತ್ತ ಎಲ್ಲಾ ವಾಹನಗಳ ನಿಲುಗಡೆ ನಿಷೇಧ

9. ದಿನಾಂಕ:12.3.2024 ರಿಂದ ದಿನಾಂಕ:16.3.2024 ರವರೆಗೆ ಹೊಳೆ ಬನ್ ಸ್ಟಾಪ್ ನ ಬೆಕ್ಕಿನಕಲ್ಮಠದಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್ ವರೆಗೆ (ಕೋಟೆ ರಸ್ತೆ, ಎನ್.ಪಿ.ಎಂ ರಸ್ತೆ) ಎಲ್ಲಾ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧ ಮಾಡುವುದು.

10. ಮೇಲ್ಕಂಡ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು ಅಂಬ್ಯೂಲೆನ್ಸ್ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತು ಪಡಿಸಿರುತ್ತದೆ.