ಈಶ್ವರಪ್ಪನವರ ಗಂಡಸ್ತನಕ್ಕೆ ಮಧು ಬಂಗಾರಪ್ಪ ಸವಾಲ್‌ | ಎಂತಹ ಮಾತು?

Madhu Bangarappa challenged Eshwarappa gandstana

ಈಶ್ವರಪ್ಪನವರ ಗಂಡಸ್ತನಕ್ಕೆ ಮಧು ಬಂಗಾರಪ್ಪ ಸವಾಲ್‌ | ಎಂತಹ ಮಾತು?
Madhu Bangarappa

SHIVAMOGGA | MALENADUTODAY NEWS | Apr 23, 2024    

ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಆರೋಪ ಪ್ರತ್ಯಾರೋಪಗಳು ಹೆಚ್ಚು ಸದ್ದು ಮಾಡುತ್ತಿದ್ದು, ವೈಯಕ್ತಿಕ ನಿಂದನೆಗೂ ಗುರಿಯಾಗುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಡಮ್ಮಿ ಅಭ್ಯರ್ಥಿ ಎಂದು ಪದೇ ಪದೇ ಹೇಳುತ್ತಿರುವ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನವರ ಮಾತಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೆಂಡಾಮಂಡಲರಾಗಿದ್ದಾರೆ. ಅದು ಎಲ್ಲಿವರಿಗೆ ಎಂದರೆ ಈಶ್ವರಪ್ಪನವರ ಗಂಡಸ್ತನವನ್ನ ಅವರು ಪ್ರಶ್ನೆ ಮಾಡಿದ್ದಾರೆ. 

ಮಧು ಬಂಗಾರಪ್ಪ ಸವಾಲ್ 

ಮಧು ಬಂಗಾರಪ್ಪರವರಿಗೆ ತಮ್ಮ ಸಹೋದರಿಯನ್ನು ಈಶ್ವರಪ್ಪ,ನವರು ಪದೇ ಪದೇ ಡಮ್ಮಿ ಅಭ್ಯರ್ಥಿ ಎಂದು ಕಾಲೆಳೆಯುತ್ತಿರುವುದು .ಗೀತಾ ಕಾಂಗ್ರೆಸ್ ಬಿಜೆಪಿ ಹೊಂದಾಣಿಕೆಯ ಅಭ್ಯರ್ಥಿ ಎಂದು ಹೇಳುತ್ತಿರುವುದು ಹಾಗೂ ಕಾಂಗ್ರೆಸ್ ನವರು ನನ್ನ ಸಂಪರ್ಕದಲ್ಲಿದ್ದು, ಚುನಾವಣೆಯಲ್ಲಿ ಗೆಲ್ಲಿಸುತ್ತಾರೆ ಎಂದು ಹೇಳಿರುವುದು ತಲೆಬಿಸಿ ತಂದಂತಿದೆ. ಇದೇ ಕಾರಣಕ್ಕೆ ಇವತ್ತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  ಈಶ್ವರಪ್ಪನವರಿಗೆ ಗಂಡಸ್ತನ ಅನ್ನುವುದು ಇದ್ದಿದ್ದರೆ ಅವರ ಮಗನಿಗೆ ಟಿಕೆಟ್ ಕೊಡಿಸುತ್ತಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ. 

 

ಈಶ್ವರಪ್ಪನವರು ನಮ್ಮ ಅಭ್ಯರ್ಥಿಗೆ ಡಮ್ಮಿ ಕ್ಯಾಂಡೇಟ್ ಡಮ್ಮಿ ಕ್ಯಾಂಡಿಡೇಟ್ ಅಂತ ಹೇಳ್ತಾ ಇದ್ರು. ಆದರೆ  ಈಗ  ಕಾಂಗ್ರೆಸ್ ನಾಯಕರು ನಮಗೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಯಾರು ಅವರಿಗೆ ಬೆಂಬಲ ನೀಡುತ್ತಾರೆ  ಎಂಬುದು ನಮಗೆ ಗೊತ್ತಿಲ್ಲ. ಒಂದು ಕಡೆ ಗೀತಾ ಶಿವರಾಜ್ ಕುಮಾರ್  ನನ್ನ ಸೋದರಿ ಎಂದು ಹೇಳುತ್ತಾರೆ ಇನ್ನೊಂದು ಕಡೆ ಡಮ್ಮಿ ಕ್ಯಾಂಡಿಡೇಟ್ ಎಂದು ಹೇಳುತ್ತಾರೆ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂದು ಅವರಿಗೆ ತಿಳಿದಿಲ್ಲ. ಅವರಿಗೆ ಗಂಡಸ್ತನ ಎಂಬುದು ಇದ್ದಿದ್ದರೆ ಅವರ ಮಗನಿಗೆ ಟಿಕೆಟ್ ಕೊಡಿಸುತ್ತಿದ್ದರು  ಅದು ಅವರಿಂದ ಸಾಧ್ಯವಾಗಲಿಲ್ಲ ಇಂದು ವಾಗ್ದಾಳಿ ನಡೆಸಿದರು.

ಸೀಟಿಗೂಸ್ಕರ ಪಕ್ಷ ಬಿಟ್ಟ ಲೋಯೆಸ್ಟ್‌ ರಾಜಕಾರಣಿ ಈಶ್ವರಪ್ಪ ನೀವು ನಾಲಿಗೆಗೆ ಬಣ್ಣ ಹಾಕಿಕೊಂಡು ಒಡಾಡುತ್ತಿದ್ದೀರ. ನಿಮ್ಮ ಸ್ವಾರ್ಥಕ್ಕೋಸ್ಕರ ನಿಮ್ಮ ಪಕ್ಷದ ಮರ್ಯಾದೆಯನ್ನು ಹರಾಜು ಹಾಕಿದ್ದೀರಾ. ನಿಮ್ಮ ಪಕ್ಷದಲ್ಲಿ ನಿಮಗೆ ಸೀಟ್ ತೆಗೆದುಕೊಳ್ಳುವ ಯೋಗ್ಯತೆ ಇಲ್ಲ ಹಾಗೆ ನಿಮ್ಮ ಮಗನಿಗೂ ಸೀಟ್ ಕೊಡಿಸೂ ಯೋಗ್ಯತೆ  ಇಲ್ಲ ಎಂದು ವ್ಯಂಗ್ಯವಾಡಿದರು. ಹಾಗೆಯೇ ಈ ಹಿಂದೆ 1999 ರ ಚುನಾವಣೆಯಲ್ಲಿ ನೀವು ಸೋಲಲು ಕಾರಣ ನಾನು. ನಮ್ಮ ತಂದೆಯವರು 3 ದಿನ ಇಂಚಾರ್ಜ್ ಆಗಿ ನನನ್ನು ಹಾಕಿದ್ದರು. ಆದರೆ ಇದು ಯಾರಿಗೂ ತಿಳಿದಿಲ್ಲ. ಆಗ ನಿಮ್ಮನ್ನು ಸೋಲಿಸಿದ್ದೆವು. ಈಗ ನಿಮ್ಮನ್ನು ಹಾಗೂ ರಾಘವೇಂದ್ರ ಇಬ್ಬರನ್ನು ಈ ಬಾರಿ ಗೀತಕ್ಕ ಸೋಲಿಸುತ್ತಾರೆ ಎಂದಿದ್ದಾರೆ.