ಶಿವಮೊಗ್ಗ-ಶಿಕಾರಿಪುರಲ್ಲಿನ ಟ್ರಾನ್ಸಫರ್​ ಬಗ್ಗೆ ಸಿಎಂ ಸಿದ್ದರಾಮಯ್ಯರಿಗೆ ಬಿಎಸ್​ವೈ & ಕುಟುಂಬದವರ ಫೋನ್! ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

Minister Madhu Bangarappa has alleged that BSY and his family members make phone calls to CM Siddaramaiah about the transfer in Shivamogga-Shikaripura

ಶಿವಮೊಗ್ಗ-ಶಿಕಾರಿಪುರಲ್ಲಿನ ಟ್ರಾನ್ಸಫರ್​ ಬಗ್ಗೆ ಸಿಎಂ ಸಿದ್ದರಾಮಯ್ಯರಿಗೆ  ಬಿಎಸ್​ವೈ & ಕುಟುಂಬದವರ ಫೋನ್! ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?
Minister Madhu Bangarappa has alleged that BSY and his family members make phone calls to CM Siddaramaiah about the transfer in Shivamogga-Shikaripura

SHIVAMOGGA  |  Jan 2, 2024  |  ಶಿವಮೊಗ್ಗದಲ್ಲಿ ವಿವಿಧ ವಿಚಾರಗಳ ಬಗ್ಗೆ ಮಾತನಾಡ್ತಾ ಸಚಿವ ಮಧು ಬಂಗಾರಪ್ಪರವರು,  ಶಿವಮೊಗ್ಗ-ಶಿಕಾರಿಪುರದಲ್ಲಿ ಯಾವುದಾದರೂ ವರ್ಗಾವಣೆಗಳಾದರೆ ಅದನ್ನು ತಡೆಹಿಡಿಯುವಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಿಕಾರಿಪುರದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರೆ ಮಾಡಿ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಈಗಲೂ ಇನ್ನೂ ತಮ್ಮದೇ ಸರ್ಕಾರ ಇದೆ ಎಂಬ ಭ್ರಮೆಯಲ್ಲಿ ಅವರು ಇದ್ದಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದ ಅವರು, 14-15 ವರ್ಷದಿಂದ ಇಲ್ಲಿಯೇ ಟಿಕಾಣಿ ಹೂಡಿದವರನ್ನ ನಾನೇ ಎತ್ತಂಗಡಿ ಮಾಡಿಸಿದ್ದೇನೆ.  ಯಾರೆಂದು ಎಲ್ಲರಿಗೂ ಗೊತ್ತು. ಹೆಸರು ಹೇಳಿ ಅವರನ್ನು ನಾನು ದೊಡ್ಡವರನ್ನಾಗಿ ಮಾಡುವುದಿಲ್ಲ. ಇಲ್ಲಿಂದಲೇ ಸರ್ಕಾರವನ್ನು ನಿಯಂತ್ರಣ ಮಾಡುತ್ತೇವೆ ಎಂಬ ಉದ್ಧಟತನಕ್ಕೆ ನಾವು ಸೊಪ್ಪು ಹಾಕುವುದಿಲ್ಲ ಎಂದಿದ್ಧಾರೆ. 

READ : ಬಿ.ವೈ.ವಿಜಯೇಂದ್ರ, ಆರ್​.ಅಶೋಕ್​, ನಳಿನ್ ಕುಮಾರ್ ಕಟೀಲ್, ರವಿಕುಮಾರ್​​ರಿಗೆ​ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ & ಸವಾಲ್! ನಾಲ್ಕು ಮಾತು

ಇದೇ ವೇಳೆ ನಡೆದ ಕಾರು ಅಪಘಾತದ ಬಗ್ಗೆ ಮಾತನಾಡಿದ ಅವರು,   ಕಾರು 2  ಕಿ.ಮೀ. ವೇಗದಲ್ಲಿತ್ತು. ಉತ್ತರ ಪ್ರದೇಶದ ಲಾರಿ ಚಾಲಕ ಬಂದು ಡಿಕ್ಕಿ ಹೊಡೆದ. ಅದೊಂದು ಸಣ್ಣ ಅಪಘಾತ. ಯಾರಿಗೂ ತೊಂದರೆಯಾಗಲಿಲ್ಲ. ತಕ್ಷಣವೇ ನಾನು ಪೊಲೀಸರ ಜೀಪಿನಲ್ಲಿ ಸದರಿ ಲಾರಿ ಚಾಲಕನನ್ನು ಕೂರಿಸಿಕೊಂಡು ಪ್ರಯಾಣವನ್ನು ಮುಂದುವರೆಸಿದೆ ಎಂದು ತಿಳಿಸಿದ್ದಾರೆ. 

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಹೋಗದೇ ಇದ್ದರೆ ನಮಗೆ ಇಲ್ಲೇ ಇರುವ ರಾಮನನ್ನು ಪೂಜಿಸಿಕೊಳ್ಳುತ್ತೇವೆ. ರಾಮ ಹೃದಯ ದಲ್ಲಿದ್ದಾನೆ. ಆತ ಎಲ್ಲರಿಗೂ ಸೇರಿದ್ದು, ಬಿಜೆಪಿ ಯವರಿಗೆ ಮಾತ್ರ ಸೀಮಿತವಲ್ಲ ಎಂದ ಸಚಿವರು, ಅಯೋಧ್ಯೆ ರಾಮಮಂದಿರ ನಿರ್ಮಾಣದಲ್ಲಿ ಆರ್ಥಿಕ ಅವ್ಯವಹಾರ ಅಗಿದೆ ಎಂಬ ದೂರುಗಳನ್ನು ಕೇಳಿದ್ದೆವು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅದನ್ನು ತನಿಖೆ ಮಾಡಿಸಬೇಕು. ರಾಮ ಪವಿತ್ರವಾದ ದೇವರು. ಅದಕ್ಕೆ ಅವ್ಯವಹಾರದ ಮಂದಿರ ಎಂಬ ಕಳಂಕ ಅಂಟಬಾರದು ಎಂದಿದ್ದಾರೆ.