ನಾ ಮಾಡಿದ ಕೆಲಸಕ್ಕೆ ಕೂಲಿ ಕೊಡಿ ! ಹೀಗ್ಯಾಕೆ ಹೇಳಿದ್ರು ಸಂಸದ ಬಿ.ವೈ.ರಾಘವೇಂದ್ರ!? ಬಿವೈ ವಿಜಯೇಂದ್ರ ಹೇಳಿದ್ದೇನು?

Pay me for what I did! Why did MP B.Y. Raghavendra say this?

ನಾ ಮಾಡಿದ ಕೆಲಸಕ್ಕೆ ಕೂಲಿ ಕೊಡಿ ! ಹೀಗ್ಯಾಕೆ ಹೇಳಿದ್ರು ಸಂಸದ ಬಿ.ವೈ.ರಾಘವೇಂದ್ರ!? ಬಿವೈ ವಿಜಯೇಂದ್ರ ಹೇಳಿದ್ದೇನು?
ಶಿಕಾರಿಪುರ, ಎಂಪಿ ರಾಘವೇಂದ್ರ, ಬಿವೈ ವಿಜಯೇಂದ್ರ,Shikaripura, MP Raghavendra, BY Vijayendra,

SHIVAMOGGA  Mar 1, 2024    ಶಿಕಾರಿಪುರ ತಾಲೂಕಿಗೆ ನೀರಾವರಿ, ರೈಲ್ವೆ ಯೋಜನೆ ಜಿಲ್ಲಾ ಕೇಂದ್ರದಲ್ಲಿ ವಿಮಾನ ನಿಲ್ದಾಣ, ರೈಲ್ವೆ ಮೇಲ್ ಸೇತುವೆ ಸಹಿತ ಸಾಕಷ್ಟು ಕಾರ್ಯಕ್ರಮಗಳನ್ನು ತಾಲೂಕು ಜಿಲ್ಲೆಯ ಅಭಿವೃದ್ಧಿಗಾಗಿ ಮಾಡಿದ್ದೇನೆ. ನಾನು ಈಗ ನಿಮ್ಮ ಮುಂದೆ ಕೈಜೋಡಿಸಿ ಮಾಡಿದ ಕೆಲಸಕ್ಕೆ ಕೂಲಿಯನ್ನು ಕೇಳುತ್ತಿದ್ದೇನೆ ಎಂದು ಸಂಸದ ಬಿವೈ ರಾಘವೇಂದ್ರ ಮನವಿ ಮಾಡಿದ್ದಾರೆ. 

ನಿನ್ನೆ ಶಿಕಾರಿಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು,   ಮುಂಬರುವ ಚುನಾವಣೆಯಲ್ಲಿ ನೀವು ನನಗೆ ನಿಮ್ಮ ಆಶೀರ್ವಾದ ಪೂರ್ವಕ ಮತ ನೀಡುವ ಮೂಲಕ ನನಗೆ ಕೂಲಿಯನ್ನು ಸಂದಾಯ ಮಾಡಿ ಎಂದು ಮನವಿ ಮಾಡಿದರು. 

ದೇಶವನ್ನು 60 ವರ್ಷ ಆಳಿದ ಕಾಂಗ್ರೆಸ್ಸಿಗರು, ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತಾ ಬಂದರು ಆದರೆ ರೈತರಿಗಾಗಿ ಯಾವುದೇ ಹೊಸ, ವಿಶಿಷ್ಟ ಕಾರ್ಯಕ್ರಮಗಳನ್ನು ಕೊಡಲಿಲ್ಲ ಆದರೆ ನರೇಂದ್ರ ಮೋದಿಜಿ ಅವರು ಕೃಷಿ ಸಮ್ಮಾನ್ ಯೋಜನೆ ಜಾರಿಗೆ ತಂದು ಅವರ ಖಾತೆಗೆ 56 ಸಾವಿರ ನೇರ ಜಮಾ ಮಾಡುತ್ತಿದ್ದಾರೆ. 

ಸ್ವಾತಂತ್ರ್ಯ ನಂತರದ 75 ವರ್ಷ ಕಾಂಗ್ರೆಸ್ಸಿಗರು ಕೇವಲ ಅಂಬೇಡ್ಕರ್ ಭಾವಚಿತ್ರ ಹಿಡಿದು ಹಿಂದುಳಿದವರ ಮತದಿಂದ ಅಧಿಕಾರ ಚಲಾಯಿಸಿದ್ದು, ಅಂಬೇಡ್ಕರ್ ಬದುಕಿದ್ದಾಗ ಅವರಿಗೆ ನ್ಯಾಯ ದೊರಕಿಸಲಿಲ್ಲ ಎಂದು ತಿಳಿಸಿದರು.

ಶಿಕಾರಿಪುರ  ಪಟ್ಟಣದ ಮಾರಿಕಾಂಬ ಬಯಲು ರಂಗಮಂದಿರದಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗದ ಬೃಹತ್ ಪಾಲ್ಗೊಂಡು ಮಾತನಾಡಿದರು. ಸಮಾವೇಶದಲ್ಲಿ  ಮಾತನಾಡಿದ ಬಿವೈ ವಿಜಯೇಂದ್ರ  ಈ ಬಾರಿಯ ಲೋಕಸಭಾ ಚುನಾವಣೆಯು ದೇಶದ ಭವಿಷ್ಯ ರೂಪಿಸುವ ಬಹು ನಿರ್ಣಾಯಕ ಚುನಾವಣೆಯಾಗಿದ್ದು, ದೇಶ ಮಾತ್ರವಲ್ಲ ಜಗತ್ತು ಕೂಡ ಕಾತುರದಿಂದ ನೋಡುತ್ತಿದೆ ಸತತ 3 ನೇ ಬಾರಿ ಪುನಃ ಮೋದಿ ಪ್ರಧಾನಿ ಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಬಗ್ಗೆ ಖುದ್ದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ 400 ಅಧಿಕ ಸ್ಥಾನ ಗಳಿಸಿ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿದ್ದು, ತಾಲೂಕಿನಲ್ಲಿ ರಾಘಣ್ಣನನ್ನು 1 ಲಕ್ಷ ಅಧಿಕ ಮತ ದೊರಕಿಸುವಂತೆ ಮನವಿ ಮಾಡಿದರು.