ಮಾರಿ ಜಾತ್ರೆ ಬೆನ್ನಲ್ಲೆ ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಇವತ್ತಿನಿಂದ ಎರಡು ದಿನ ವಿಶೇಷ ಕಾರ್ಯಕ್ರಮ! ವಿವರ ಇಲ್ಲಿದೆ!
Shimoga kote Sri Marikamba, a two-day special event at the temple after Mari Jatre! Here are the details!
Shivamogga Mar 27, 2024 Shimoga kote Sri Marikamba ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ ಅದ್ದೂರಿ ಹಾಗೂ ಯಶಸ್ವಿಯಾಗಿ ಸಮಾಪ್ರಿಗೊಂಡಿದೆ. ಇದೀಗ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಪ್ರತಿಷ್ಟಾಪನೆಯ ವಾರ್ಷಿಕೋತ್ಸವ ಸಮಾರಂಭಕ್ಕೆ ಸಿದ್ದತೆ ನಡೆಯುತ್ತಿದೆ.
ಇದೇ ಮಾರ್ಚ್ 28,29 ರಂದು ಕೋಟೆ ಶ್ರೀ ಮಾರಿಕಾಂಬಾ ದೇವಿಯ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ, ಕುಂಭ ಕಲಶಾಭಿಷೇಕ ಪೂಜೆ ನಡೆಯಲಿದೆ.
ನಗರದ ಕೋಟೆ ಶ್ರೀ ಮಾರಿಕಾಂಬಾ ಸೇವಾ ಸಮಿತಿ ವತಿಯಿಂದ ಕೋಟೆ ದೇವಿಯ ಸ್ಥಿರಮೂರ್ತಿ ಪ್ರತಿಷ್ಠಾಪನೆಯಾಗಿ 33 ನೇ ವರ್ಷ ಇದು. ಈ ಹಿನ್ನೆಲೆಯಲ್ಲಿ ವಾರ್ಷಿಕೋತ್ಸವ ಅಂಗವಾಗಿ 108 ಕುಂಭ ಕಲಶಾಭಿಷೇಕವನ್ನು ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 28 ರ ಗುರುವಾರ ಸಂಜೆ 5 ಗಂಟೆಗೆ ಸುಹಾಸಿನಿಯರಿಂದ ಗಂಗಾ ಪೂಜೆ ಸಂಜೆ 7 ಗಂಟೆಗೆ ವಿನಾಯಕ ಪ್ರಾರ್ಥನೆ, , ಕಲಶ ಪ್ರತಿಷ್ಠಾಪನೆ. ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಮಾ. 29 ರಂದು ಶುಕ್ರವಾರ ಬೆಳಿಗ್ಗೆ ಗಂಟೆ 8.30 ರಿಂದ 11.30 ರವರೆಗೆ ಅಮ್ಮನವರಿಗೆ ಕುಂಭಾಭಿಷೇಕ, ನಂತರ ಮಧ್ಯಾಹ್ನ 12.30 ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿದೆ.
ಭಕ್ತರು ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ಪರವಾಗಿ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಮನವಿ ಮಾಡಿದ್ದಾರೆ.