ದೆಹಲಿಗೆ ಹೊರಟ ಕೆಎಸ್‌ ಈ‍ಶ್ವರಪ್ಪ ಅಮಿತ್‌ ಶಾ ನಿರ್ಧಾರ ಏನಿರುತ್ತೋ ಗೊತ್ತಿಲ್ಲವೆಂದ್ರು

KSE Shwarappa, who left for Delhi, said he did not know what Amit Shah's decision would be.

ದೆಹಲಿಗೆ ಹೊರಟ ಕೆಎಸ್‌ ಈ‍ಶ್ವರಪ್ಪ ಅಮಿತ್‌ ಶಾ ನಿರ್ಧಾರ ಏನಿರುತ್ತೋ ಗೊತ್ತಿಲ್ಲವೆಂದ್ರು
KSE Shwarappa,Amit Shah

Shivamogga  Apr 3, 2024    ಮಾಜಿ ಡಿಸಿಎಂ ಬಿಜೆಪಿ ಬಂಡಾಯಗಾರ ಕೆಎಸ್‌ ಈಶ್ವರಪ್ಪ ದೆಹಲಿಗೆ ತೆರಳಿದ್ದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನದಲ್ಲಿ ಪ್ರಯಾಣಿಸುವ ಮೂಲಕ ತಮ್ಮ ದೆಹಲಿ ಪ್ರಯಾಣವನ್ನು ಆರಂಭಿಸಿದ್ದಾರೆ. ಇಂದು ಸಂಜೆ ಸುಮಾರು ಏಳುವರೆ ಗಂಟೆ ಸುಮಾರಿಗೆ ಅವರು ದೆಹಲಿಯಲ್ಲಿ ಇರಲಿದ್ದಾರೆ. ಇವತ್ತು ರಾತ್ರಿ ಕೇಂದ್ರ ಗೃಹಸಚಿವ ಅಮಿತ್‌ ಶಾರ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಆ ಬಳಿಕ ಅವರು ಶಿವಮೊಗ್ಗಕ್ಕೆ ವಾಪಸ್‌ ಆಗಲಿದ್ದಾರೆ. 

ತಮ್ಮ ಆಪ್ತ ವಿಶ್ವಾಸ್‌ ಜೊತೆಗೆ ದೆಹಲಿಗೆ ತೆರಳಿದ ಈಶ್ವರಪ್ಪ , ಶಿವಮೊಗ್ಗದಲ್ಲಿ ಮಾತನಾಡ್ತಾ ನಮ್ಮ ರಾಷ್ಟ್ರೀಯ ನಾಯಕರು ಗೃಹ ಸಚಿವ ಅಮಿತ್ ಶಾ ದೆಹಲಿಗೆ ಬರಲು ಹೇಳಿದ್ದಾರೆ .ಹಿರಿಯರ ಮಾತಿಗೆ ಗೌರವ ಕೊಟ್ಟು ಹೊರಟ್ಟಿದ್ದೇನೆ. ವಾಪಸ್ ಬರುವಾಗ ಚುನಾವಣೆಗೆ ಸ್ಪರ್ಧೆ ಮಾಡುವ ನಿರ್ಧಾರ ಇರಬೇಕು. ಹಿರಿಯರಾದ ಅಮಿತ್ ಶಾ ನಿರ್ಧಾರ ಏನಿದೆಯೋ ಗೊತ್ತಿಲ್ಲ .ದೆಹಲಿಗೆ ಹೋಗ್ತೇನೆ ಅವರ ಜೊತೆ ಕುಳಿತು ಮಾತನಾಡ್ತೇನೆ ಎಂದು ತಿಳಿಸಿದ್ದಾರೆ.