ಮತ್ತೆ ಜೈಲಿಗೆ ಶಿವಮೂರ್ತಿ ಶರಣರು | ನಿನ್ನೆ ಏನೆಲ್ಲಾ ಆಯ್ತು ?

Chitradurga District Muruga Mutt Swamiji Shivamurthy sharanaru Surrendered to Court in POCSO Case

ಮತ್ತೆ ಜೈಲಿಗೆ ಶಿವಮೂರ್ತಿ ಶರಣರು | ನಿನ್ನೆ ಏನೆಲ್ಲಾ ಆಯ್ತು ?
Chitradurga District, Muruga Mutt Swamiji Shivamurthy sharanaru

SHIVAMOGGA | MALENADUTODAY NEWS | Apr 30, 2024    ‌ 

ಪೋಕ್ಸೋ ಕೇಸ್‌ನಲ್ಲಿ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರನ್ನ ನಿನ್ನೆ ಮತ್ತೆ ಕಾರಾಗೃಹಕ್ಕೆ ಕಳಹಿಸಲಾಗಿದೆ. ಸುಪ್ರೀಂಕೋರ್ಟ್‌ ಈ ಸಂಬಂಧ ಮಹತ್ವದ ಆದೇಶ ಹೊರಡಿಸಿತ್ತು. 

ಶಿವಮೂರ್ತಿ ಶರಣರಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲಾಗಿತ್ತು.   ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠ, ಹೈಕೋರ್ಟ್‌ ಆದೇಶಕ್ಕೆ ನಾಲ್ಕು ತಿಂಗಳ ಕಾಲ ತಡೆ ನೀಡಿತ್ತು ಅಲ್ಲದೆ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗಲು ಒಂದು ವಾರ ಕಾಲಾವಕಾಶ ನೀಡಿ ಏಪ್ರಿಲ್‌ 23ರಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ 

ದಾವಣಗೆರೆಯ ಶಿವಯೋಗಿ ಮಂದಿರದಲ್ಲಿದ್ದ ಸ್ವಾಮೀಜಿ, ಸೋಮವಾರ ವಕೀಲರೊಂದಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರಾದರು. ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನ್ಯಾಯಾಧೀಶರು, ಮೇ 27ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಸೂಚಿಸಿದರು.