ಶಿವಮೊಗ್ಗ-ಬೆಂಗಳೂರು ವಂದೇ ಭಾರತ್‌ | ಮತ್ತೆ ತಿರುಪತಿ ಟ್ರೈನ್‌ ಆರಂಭ? | ಮೂಕಾಂಬಿಕಾ ರೈಲು ನಿಲ್ದಾಣದಲ್ಲಿ ಟ್ರೈನ್‌ ಸ್ಟಾಪ್‌ |

Vande Bharat for Shivamogga | Will tirupati train start again? Do you know what are the demands of MPs with the Centre?

ಶಿವಮೊಗ್ಗ-ಬೆಂಗಳೂರು  ವಂದೇ ಭಾರತ್‌  | ಮತ್ತೆ ತಿರುಪತಿ ಟ್ರೈನ್‌ ಆರಂಭ? | ಮೂಕಾಂಬಿಕಾ ರೈಲು ನಿಲ್ದಾಣದಲ್ಲಿ ಟ್ರೈನ್‌ ಸ್ಟಾಪ್‌ |

SHIVAMOGGA | MALENADUTODAY NEWS | Jul 3, 2024  ಮಲೆನಾಡು ಟುಡೆ    

ಮೊನ್ನೆ ಮೊನ್ನೆ ನಿತಿನ್‌ ಗಡ್ಕರಿಯವರನ್ನ ಭೇಟಿಯಾಗಿ ಆಗುಂಬೆ ಸುರಂಗ ಮಾರ್ಗ ಸೇರಿದಂತೆ ಹೆದ್ದಾರಿ ಕಾಮಗಾರಿಗಳ ಬಗ್ಗೆ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದ ಸಂಸದ ಬಿವೈ ರಾಘವೇಂದ್ರ ನಿನ್ನೆ ಕೇಂದ್ರ ರೈಲ್ವೆ ಸಚಿವರನ್ನ ಭೇಟಿಯಾಗಿ ಚರ್ಚೆ ಮಾಡಿದ್ದಾರೆ. 

ಮಲೆನಾಡು ಮತ್ತು ಉತ್ತರ ಕರ್ನಾಟಕದ ನಡುವೆ ರೈಲ್ವೆ ಸಂಪರ್ಕ ಬೆಸೆಯುವ ಕಾಮಗಾರಿಗಳಿಗೆ  ಬಜೆಟ್‍ನಲ್ಲಿ ಹಣ ಮಂಜೂರು ಮಾಡುವುದು ಸೇರಿದಂತೆ ತಾಳಗುಪ್ಪ- ಶಿರಸಿ-ತಡಸ–ಹುಬ್ಬಳ್ಳಿ ಹೊಸ ರೈಲು ಮಾರ್ಗದ ಮುಂದಿನ ಪ್ರಕ್ರಿಯೆಯ ಬಗ್ಗೆ ಚರ್ಚಿಸಿದ್ದಾರೆ. ದೆಹಲಿಯಲ್ಲಿ  ಸಂಸದ ಬಿ.ವೈ.ರಾಘವೇಂದ್ರ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನಡೆಸಿದ ಮಾತುಕತೆಗಳ ವಿವರ ಹೀಗಿದೆ. 

ಕೇಂದ್ರ ರೈಲ್ವೆ ಇಲಾಖೆ  

1. ತಾಳಗುಪ್ಪ-ಸಿರ್ಸಿ-ತಡಸ-ಹುಬ್ಬಳ್ಳಿ ಹೊಸ ರೈಲು ಮಾರ್ಗ ಮಂಜೂರಾತಿ:

ತಾಳಗುಪ್ಪ-ಸಿರ್ಸಿ-ತಡಸ-ಹುಬ್ಬಳ್ಳಿ ಹೊಸ ರೈಲು ಮಾರ್ಗದ ಸಮೀಕ್ಷೆಗೆ ರೈಲ್ವೆ ಮಂಡಳಿ ಮಂಜೂರಾತಿ ನೀಡಿದೆ. ನೈಋತ್ಯ ರೈಲ್ವೆ ಈ ಸಮೀಕ್ಷೆಯನ್ನು ಪೂರ್ಣಗೊಳಿಸಿ ಅದರ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿದೆ. ಈ ಹೊಸ ರೈಲು ಮಾರ್ಗ ಯೋಜನೆಯು ಮಲೆನಾಡು ಮತ್ತು ಉತ್ತರ ಕರ್ನಾಟಕ ಪ್ರದೇಶದ ನಡುವೆ ರೈಲ್ವೆ ಸಂಪರ್ಕವನ್ನು ಒದಗಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಈ ಕಾಮಗಾರಿಯನ್ನು ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದ್ದಾರೆ. 

2. ಶಿವಮೊಗ್ಗ-ಬೀರೂರು ಡಬ್ಬಿಂಗ್ ಕಾಮಗಾರಿ:

ಶಿವಮೊಗ್ಗ-ಶಿಕಾರಿಪುರ- ರಾಣೆಬೆನ್ನೂರು ಹೊಸ ರೈಲು ಮಾರ್ಗ ಮತ್ತು ಕೋಟೆಗಂಗೂರು ಕೋಚಿಂಗ್ ಡಿಪೋ ನಿರ್ಮಾಣದಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಹಲವು ಪಟ್ಟು ಹೆಚ್ಚಾಗಲಿದೆ. ಆದ್ದರಿಂದ ಮುಂಬರುವ ಕೇಂದ್ರ ಬಜೆಟ್‌ನಲ್ಲಿ ದಯವಿಟ್ಟು ಈ ಯೋಜನೆಗೆ ಮಂಜೂರಾತಿ ನೀಡುವಂತೆ ಮನವಿ ಮಾಡಲಾಗಿದೆ. 

3. ಕೋಟೆಗಂಗೂರು ಕೋಚಿಂಗ್ ಡಿಪೋ ಮತ್ತು ಟರ್ಮಿನಲ್ ಸ್ಟೇಷನ್:

ಶಿವಮೊಗ್ಗ ಸಮೀಪದ ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿ ಪ್ರಗತಿಯಲ್ಲಿದೆ ಆದರೆ ಕಾಮಗಾರಿಯ ವೇಗ ತೃಪ್ತಿಕರವಾಗಿಲ್ಲ. ಏತನ್ಮಧ್ಯೆ, ವಂದೇ ಭಾರತ್ ರೈಲುಗಳನ್ನು ನಿರ್ವಹಿಸುವ ಸೌಲಭ್ಯಗಳೊಂದಿಗೆ ಈ ಕೋಚಿಂಗ್ ಡಿಪೋವನ್ನು ನಿರ್ಮಿಸಲು ಈ ಹಿಂದೆ  ರೈಲ್ವೆ ಸಚಿವಾಲಯಕ್ಕೆ ಕೋರಲಾಗಿತ್ತು.. ಈ ಪ್ರಮುಖ ಮೂಲಸೌಕರ್ಯ ಸೌಲಭ್ಯವನ್ನು ಶೀಘ್ರದಲ್ಲಿಯೇ ಕಾರ್ಯಗತಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲು ಮನವಿ ಸಲ್ಲಿಸಲಾಗಿದೆ. 

4. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ:

1) ಶಿವಮೊಗ್ಗ-ಶಿಕಾರಿಪುರ, 2) ಶಿಕಾರಿಪುರ- ರಾಣೆಬೆನ್ನೂರು. ಮೊದಲ ಹಂತದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ನೈಋತ್ಯ ರೈಲ್ವೆಯು ಕಾಮಗಾರಿಯನ್ನು ಕಾರ್ಯಗತಗೊಳಿಸಲು ಏಜೆನ್ಸಿಯನ್ನು ನಿಗದಿಪಡಿಸಿದೆ. ಹಂತ-1ರ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳಿಗೆ ಸೂಚಿಸುವುದು. ಹಾಗೂ ಈ ಯೋಜನೆಯ ಎರಡನೇ ಹಂತದ ಶಿಕಾರಿಪುರ- ರಾಣೆಬೆನ್ನೂರು ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಎರಡನೇ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಾಕಷ್ಟು ಹಣವನ್ನು ಕಾಯ್ದಿರಿಸಬೇಕು ಎಂದು ಮನವಿ ಮಾಡಲಾಗಿದೆ. 



5. ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗ ಮಂಜೂರಾತಿ:

ಈ ಉದ್ದೇಶಿತ ಯೋಜನೆಯು ಮಲೆನಾಡು ಪ್ರದೇಶದಿಂದ ಕರಾವಳಿ ಕರ್ನಾಟಕಕ್ಕೆ ಸಂಪರ್ಕವನ್ನು ಒದಗಿಸಲು ಸಹಾಯ ಮಾಡುತ್ತದೆ. ಹೀಗಾಗಿ ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಗೆ ಮಂಜೂರಾತಿ ನೀಡುವಂತೆ ಸಂಸದರು ಮನವಿ ಮಾಡಿದ್ಧಾರೆ. 

6. ಭದ್ರಾವತಿ ರೈಲು ನಿಲ್ದಾಣದ ಅಭಿವೃದ್ಧಿ:

ಭದ್ರಾವತಿಯು ಮಲೆನಾಡು ಪ್ರದೇಶದ ಪ್ರಮುಖ ಕೈಗಾರಿಕಾ ಪಟ್ಟಣವಾಗಿದೆ. ಭದ್ರಾವತಿಯ ರೈಲು ನಿಲ್ದಾಣವು ತುಂಬಾ ಹಳೆಯದಾಗಿದೆ ಮತ್ತು ಇದನ್ನು ಉನ್ನತ ದರ್ಜೆಯನ್ನಾಗಿಸುವ ಅಗತ್ಯವಿದೆ. ಆದ್ದರಿಂದ ಈ ನಿಲ್ದಾಣವನ್ನು "ಅಮೃತ್" ಯೋಜನೆಯಡಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.  

7.ಶಿವಮೊಗ್ಗ ರೇಣಿಗುಂಟ (ತಿರುಪತಿ) ಚೆನ್ನೈ ರೈಲನ್ನು ಮರುಚಾಲನೆಗೊಳಿಸುವುದು.

06223/06224 ಶಿವಮೊಗ್ಗ-ರೇಣಿಗುಂಟ-ಚೆನ್ನೈ ನಡುವಿನ ವಾರದಲ್ಲಿ 2 ದಿನಗಳ ವಿಶೇಷ ರೈಲು ಕಾರ್ಯಾಚರಣೆಯಲ್ಲಿತ್ತು. ಈ ರೈಲು ಶಿವಮೊಗ್ಗ, ಚಿತ್ರದುರ್ಗ ಪ್ರದೇಶದಿಂದ ತಿರುಪತಿ ಮತ್ತು ಚೆನ್ನೈಗೆ ಪ್ರಯಾಣಿಸಲು ಲಭ್ಯವಿರುವ ಏಕೈಕ ರೈಲು ಆಗಿರುವುದರಿಂದ ಉತ್ತಮ ಪ್ರೋತ್ಸಾಹವನ್ನು ಪಡೆಯಲಾಗಿತ್ತು. ಆದರೆ ಈ ರೈಲಿನ ಕಾರ್ಯಾಚರಣೆಯನ್ನು 01.10.2023 ರಿಂದ ಸ್ಥಗಿತಗೊಳಿಸಲಾಗಿದೆ. ಈ ರೈಲು ಸಂಚಾರ ಸ್ಥಗಿತಗೊಂಡಿರುವುದಿಂದ ಸಾವಿರಾರು ರೈಲು ಬಳಕೆದಾರರಿಗೆ ತೀವ್ರ ತೊಂದರೆಯಾಗಿದೆ. ಆದ್ದರಿಂದ ಈ ರೈಲಿನ ಕಾರ್ಯಾಚರಣೆಯನ್ನು ಆದಷ್ಟು ಬೇಗ ಮರುಚಾಲನೆಗೊಳಿಸುವುದು.

8. ಯಶವಂತಪುರ-ಶಿವಮೊಗ್ಗ-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ ಪರಿಚಯ:

ಶಿವಮೊಗ್ಗ ನಗರವು ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಯಶವಂತಪುರದಿಂದ ಶಿವಮೊಗ್ಯಕ್ಕೆ ವಂದೇ ಭಾರತ್ ರೈಲು ಪರಿಚಯಿಸುವುದರಿಂದ ಮಲೆನಾಡು ಭಾಗದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ರೈಲು ಬೆಳಿಗ್ಗೆ 6 ಗಂಟೆಗೆ ಯಶವಂತಪುರದಿಂದ ಹೊರಟು 9.15 ಕ್ಕೆ ಶಿವಮೊಗ್ಗವನ್ನು ತಲುಪಬಹುದು, ವಾಪಸ್ಸು ಶಿವಮೊಗ್ಗದಿಂದ 13.00 ಗಂಟೆಗೆ ಹೊರಟು 16.15 ಗಂಟೆಗೆ ಯಶವಂತಪುರವನ್ನು ತಲುಪಬಹುದು. ಸಾರ್ವಜನಿಕರ ಅನುಕೂಲಕ್ಕಾಗಿ ಈ ರೈಲು ಸೇವೆಯನ್ನು ಪರಿಚಯಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದು.

9. ರೈಲು ಸಂಖ್ಯೆ 16581/16582 ಅನ್ನು ದೈನಂದಿನ ರೈಲಿಗೆ ವಿಸ್ತರಣೆ:

ರೈಲು ಸಂಖ್ಯೆ 16581/16582 ಬೆಂಗಳೂರು-ಶಿವಮೊಗ್ಗ ವಿಶೇಷ ರೈಲು ಕಳೆದ 4 ವರ್ಷಗಳಿಂದ ವಾರದಲ್ಲಿ ಮೂರು ದಿನ ಸಂಚರಿಸಲಾಗುತ್ತಿದ್ದು, ಸಂಪೂರ್ಣ ಪ್ರೋತ್ಸಾಹದೊಂದಿಗೆ ಯಶಸ್ವಿಯಾಗಿ ಓಡುತ್ತಿದೆ. ಆದ್ದರಿಂದ ಈ ರೈಲನ್ನು ಸಾಮಾನ್ಯ ದೈನಂದಿನ ರೈಲನ್ನಾಗಿ ಪರಿವರ್ತಿಸಲು ಕೋರಿದೆ.

10. ಹಾರ್ನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ರೈಲು 16227/16228 ನಿಲುಗಡೆ:

ಹಾರನಹಳ್ಳಿ ಮತ್ತು ಇತರ ಅಕ್ಕಪಕ್ಕದ ಹಳ್ಳಿಗಳ ಪ್ರಯಾಣಿಕರಿಗೆ ನೇರವಾಗಿ ಬೆಂಗಳೂರಿಗೆ ಪ್ರಯಾಣಿಸಲು ರೈಲು ನಿಲುಗಡೆ ಇರುವುದಿಲ್ಲವಾದ ಕಾರಣ ರೈಲು ಸಂಖ್ಯೆ: 16227/16228 ಮೈಸೂರು-ಬೆಂಗಳೂರು-ಶಿವಮೊಗ್ಗ-ತಾಳಗುಪ್ಪ ಹಾರನಹಳ್ಳಿಯಲ್ಲಿ ನಿಲುಗಡೆ ನೀಡುವಂತೆ ವಿನಂತಿಸಲಾಗಿದೆ



11. ಬೈಂದೂರಿನ ಮೂಕಾಂಬಿಕಾ ರೈಲು ನಿಲ್ದಾಣದಲ್ಲಿ ರೈಲುಗಳ ನಿಲುಗಡೆ:

ಉಡುಪಿ ಜಿಲ್ಲೆಯ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿರುವುದರಿಂದ, ಮೂಕಾಂಬಿಕಾ ರಸ್ತೆ ಬೈಂದೂರು ರೈಲು ನಿಲ್ದಾಣವು ಯಾತ್ರಾರ್ಥಿಗಳಿಗೆ ದೇವಸ್ಥಾನವನ್ನು ತಲುಪಲು ಸೇವೆ ಸಲ್ಲಿಸುವ ರೈಲು ನಿಲ್ದಾಣವಾಗಿದೆ. ಮುಖ್ಯವಾಗಿ ಕೇರಳ ಮತ್ತು ತಮಿಳುನಾಡಿನಿಂದ ಪ್ರತಿದಿನ 10,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಹಾಗಾಗಿ ರೈಲು ಸಂಖ್ಯೆ. 22629/22630 ದಾದರ್ ಸೆಂಟ್ರಲ್-ತಿರುನಲ್ವೇಲಿ-ದಾದರ್ ಸೆಂಟ್ರಲ್ ಎಕ್ಸಪ್ರೆಸ್ (ಸಾಪ್ತಾಹಿಕ) ಮತ್ತು ರೈಲು ಸಂಖ್ಯೆ: 12617/12618 ಎರ್ನಾಕುಲಂ-ಹಜರತ್ ನಿಜಾಮುದ್ದೀನ್- ಎರ್ನಾಕುಲಂ ಮಂಗಳಾ ಲಕ್ಷದ್ವೀಪ್ ಎಕ್ಸ್‌ಪ್ರೆಸ್ (ಕೆ.ಆರ್.ಸಿ.ಎಲ್ ಡೈಲಿ ಕೂಡ) ನಿಲುಗಡೆಯನ್ನು ಮಂಜೂರು ಮಾಡುವಂತೆ  ವಿನಂಯತಿಸಲಾಗಿದೆ.  ಈ ರೈಲುಗಳಿಗೂ ಮೂಕಾಂಬಿಕಾ ನಿಲ್ದಾಣದಲ್ಲಿ ನಿಲುಗಡೆ ನೀಡಲು ಕೊಂಕಣ ರೈಲ್ವೆ ಮಂಡಳಿಯು ರೈಲ್ವೆ ಮಂಡಳಿಗೆ ಶಿಫಾರಸ್ಸನ್ನು ಸಹ ಮಾಡಿದೆ.

11. ಉಡುಪಿ ಜಿಲ್ಲೆ ಸೇನಾಪುರ ರೈಲು ನಿಲ್ದಾಣದಲ್ಲಿ ರೈಲುಗಳ ನಿಲುಗಡೆ:

ಸೇನಾಪುರ ರೈಲು ನಿಲ್ದಾಣವು ಉಡುಪಿ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣವಾಗಿದ್ದು, ಸುತ್ತಮುತ್ತಲಿನ ಜನರು ಸೇನಾಪುರದಿಂದ ದೂರದಲ್ಲಿರುವ ಮೂಕಾಂಬಿಕಾ ರಸ್ತೆ ಅಥವಾ ಕುಂದಾಪುರ ರೈಲು ನಿಲ್ದಾಣದಲ್ಲಿ ರೈಲುಗಳನ್ನು ಹತ್ತುವ ಮೂಲಕ ಬೆಂಗಳೂರು, ಮುಂಬೈಗೆ ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ ಸೇನಾಪುರ ರೈಲು ನಿಲ್ದಾಣದಲ್ಲಿ ಮಂಗಳೂರು ಮತ್ತು ಮುಂಬೈ ನಡುವೆ ಸಂಚರಿಸುವ ರೈಲು ಸಂಖ್ಯೆ:12619/20 ಮತ್ಸಗಂದ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ಗೆ ಹಾಗೂ ಮತ್ತು ಕಾರವಾರ ಮತ್ತು ಬೆಂಗಳೂರು ನಡುವೆ ಸಂಚರಿಸುವ ರೈಲು ಸಂಖ್ಯೆ:16595/96 ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಸೇನಾಪುರದಲ್ಲಿ ನಿಲುಗಡೆ ನೀಡಬೇಕು ಎಂದು ಸಂಸದರು ಮನವಿ ಸಲ್ಲಿಸಿದ್ದಾರೆ.