ಸಾಗರ ತಾಲ್ಲೂಕು | ಗಾಳಿ ಮಳೆಗೆ ಮನೆಯ ಮೇಲೆಯೆ ಬಿದ್ದ ದೊಡ್ಡ ಮರ

Heavy rains in Shivamogga Sagar taluk, a tree fell on a house due to windy conditions.

ಸಾಗರ ತಾಲ್ಲೂಕು | ಗಾಳಿ ಮಳೆಗೆ ಮನೆಯ ಮೇಲೆಯೆ ಬಿದ್ದ ದೊಡ್ಡ ಮರ
Heavy rains in Shivamogga Sagar taluk,

SHIVAMOGGA | MALENADUTODAY NEWS | Jul 3, 2024  ಮಲೆನಾಡು ಟುಡೆ   

ಶಿವಮೊಗ್ಗದಲ್ಲಿ ಮಳೆಯ ಅಬ್ಬರ ತುಸು ಕಡಿಮೆಯಾಗಿದೆ. ಇದರ ನಡುವೆ ಸಾಗರ ತಾಲ್ಲೂಕುನಲ್ಲಿ ಗಾಳಿ ಮಳೆಗೆ ಮರವೊಂದು ಮನೆಯ ಮೇಲೆ ಬಿದ್ದಿರುವ ಬಗ್ಗೆ ವರದಿಯಾಗಿದೆ. ಅದರ ವಿವರ ಹೀಗಿದೆ.

 

ಸಾಗರ ತಾಲ್ಲೂಕು

 

ಸಾಗರ ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಡೆಕೊಪ್ಪ ಗ್ರಾಮದಲ್ಲಿ  ಗಾಳಿ ಮಳೆಯಿಂದ ಪುರುಷೋತ್ತಮ ಎಂಬವರ ಮನೆ ಮೇಲೆ ಮರ ಬಿದ್ದಿದೆ. ದೊಡ್ಡ ಮರ ಉರುಳಿರುವುದರಿಂದ ಹೆಂಚುಗಳು ಸಂಪೂರ್ಣವಾಗಿ ಒಡೆದು ಹೋಗಿವೆ. ಮನೆ ಭಾಗಶಃ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತಾತ್ಕಾಲಿಕ ಪರಿಹಾರ ನೀಡಿದ್ದಾರೆ.

Heavy rains in Shivamogga have subsided. However, in Sagar taluk, a tree fell on a house due to windy conditions.