BREAKING NEWS | ಶಿವಮೊಗ್ಗದಲ್ಲಿ ಮಳೆ,ಗಾಳಿಯ ಆರ್ಭಟ ಮರಬಿದ್ದು ಓರ್ವನ ಸಾವು| ಆಗುಂಬೆ ಘಾಟಿಯಲ್ಲಿ ಸಂಚಾರ ಅಸ್ತವ್ಯಸ್ತ

BREAKING NEWS | One killed after tree falls on him due to rain and wind in Shimavoga | Traffic disrupted at Agumbe Ghat

BREAKING NEWS | ಶಿವಮೊಗ್ಗದಲ್ಲಿ ಮಳೆ,ಗಾಳಿಯ ಆರ್ಭಟ ಮರಬಿದ್ದು ಓರ್ವನ ಸಾವು| ಆಗುಂಬೆ ಘಾಟಿಯಲ್ಲಿ ಸಂಚಾರ ಅಸ್ತವ್ಯಸ್ತ
Agumbe Ghat, Shimavoga, konanduru

Shivamogga  Apr 18, 2024  | ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಆರ್ಭಟ ಆರಂಭವಾಗಿದೆ. ಇಂದು ಸಂಜೆಯಿಂದ ಆರಂಭವಾದ ಮಳೆಯ ಜೊತೆಗೆ ಬೀಸಿದ ಬಿರುಗಾಳಿಗೆ ಹಲವೆಡೆ ಮರಗಳು ಉರುಳಿವೆ. ಇತ್ತ ಕೋಣಂದೂರಿನಲ್ಲಿ ಮರವೊಂದು ಉರುಳಿ ಬಿದ್ದು ಓರ್ವ ಸಾವನ್ನಪ್ಪಿದ್ದಾರೆ. 

ಕೋಣಂದೂರಿನಲ್ಲಿ ಮರಬಿದ್ದು ವ್ಯಕ್ತಿ ಸಾವು

 ಕೋಣಂದೂರು ಸಮೀಪದ ದೇಮ್ಲಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ತೊರೆಬೈಲು ಗ್ರಾಮದ ಸಂಪಗಾರಿನ ಬಳಿ ಈ ಘಟನೆ ಸಂಭವಿಸಿದೆ. ಇಲ್ಲಿನ ನಿವಾಸಿ  ಜಯಂತ್ ಭಟ್  (64 ವರ್ಷ )  ಮೃತ ನಿವಾಸಿ.  ಕೋಣಂದೂರಿನಿಂದ ಮನೆಗೆ ಹೋಗುವಾಗ ಬಾರಿ ಗಾಳಿ ಮಳೆಗೆ ಅಕೇಶಿಯಾ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.  

ಆಗುಂಬೆ ಘಾಟಿಯಲ್ಲಿ ಮರಬಿದ್ದು ಸಂಚಾರ ಸ್ಥಗಿತ

ಇನ್ನ ಅತ್ತ   ಮರ ಬಿದ್ದು ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಘಾಟಿಯ ಮೂರನೆ ತಿರುವಿನಲ್ಲಿ ಮರ ಬುಡ ಮೇಲಾಗಿದೆ. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ವಿಷಯ ತಿಳಿದು ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮರ ಬಿದ್ದ ಹಿನ್ನೆಲೆ ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಸಾಗರದಲ್ಲಿಯು ಸಂಚಾರ ಅಸ್ತವ್ಯಸ್ಥ

ಸುಮಾರು ಒಂದು ಗಂಟೆಯಿಂದ ಸಾಗರ ನಗರ,ಗ್ರಾಮಾಂತರ ಭಾಗದಲ್ಲಿ ಧಾರಾಕಾರವಾದ ಮಳೆಯಾಗಿದೆ. ಪರಿಣಾಮ ಪೇಟೆಯಲ್ಲಿ ವಾಹನ ಸವಾರರಿಗೆ ಮನೆಗೆ ಹೋಗಲು ತೊಂದರೆ ಉಂಟಾಗಿತ್ತು. ಇತ್ತ ಶಿವಮೊಗ್ಗದಲ್ಲಿಯು ಕೆಲವೆಡೆ ಮಳೆಯಾಗಿದ್ದು, ಜೋರಾಗಿ ಬೀಸಿದ ಗಾಳಿಯಿಂದಾಗಿ ಸಮಸ್ಯೆಯಾಗಿತ್ತು.,