ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ನಲ್ಲಿ ಧಗಧಗ ಎಂದ ಅಸಮಾಧಾನ! ಮಧು ಬಂಗಾರಪ್ಪ ವಿರುದ್ಧವೇ ಧರಣಿ! ಧಿಕ್ಕಾರ

Dissatisfaction with Shimoga District Congress The protest is against the in-charge minister Madhu Bangarappa

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ನಲ್ಲಿ ಧಗಧಗ ಎಂದ ಅಸಮಾಧಾನ! ಮಧು ಬಂಗಾರಪ್ಪ  ವಿರುದ್ಧವೇ ಧರಣಿ! ಧಿಕ್ಕಾರ
Shimoga District Congress , in-charge minister Madhu Bangarappa

shivamogga Mar 15, 2024 :  Shimoga District Congress , in-charge minister Madhu Bangarappaಶಿವಮೊಗ್ಗ ಬಿಜೆಪಿಯಲ್ಲಿ ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪನವರು ಕೆರಳಿ ಕೆಂಡವಾಗಿರುವ ಬೆನ್ನಲ್ಲೆ ಅತ್ತ ಕಾಂಗ್ರೆಸ್​ ಪಕ್ಷದಲ್ಲಿಯು ಅಸಮಾಧಾನ ಸ್ಫೋಟಗೊಂಡಿದೆ. ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರ ವಿರುದ್ದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ ಕಚೇರಿ ಎದುರು ಅಸಮಾಧಾನ ಸ್ಫೋಟಗೊಂಡಿದೆ. 

ಈ ಸಂಬಂಧ  ಶಿಕಾರಿಪುರದ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಉಸ್ತುವಾರಿ ಸಚಿವರನ್ನ ಉಡಾಫೆ ಮಂತ್ರಿ ಅಂತಾ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. 

ಶಿಕಾರಿಪುರ ವಿಧಾನಸಭೆ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್ ಬೆಂಬಲಿಗರಿಂದ ಪ್ರತಿಭಟನೆ ನಡೆದಿದೆ.  ಎಲ್ಲಾ ಪಕ್ಷ ಹಾಳು ಮಾಡಿ ಅವರ ಅಪ್ಪ ಬಂದ್ರು. ಈಗ ಮಧು ಬಂಗಾರಪ್ಪ ಕಾಂಗ್ರೆಸ್ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು  ಪಕ್ಷದ ವಿರುದ್ಧವೇ ಕೆಲಸ ಮಾಡುತ್ತೇವೆ ಎಂದು ಆಕ್ರೋಶ ಹೊರ ಹಾಕಿದರು.

ಕಾಂಗ್ರೆಸ್ ಅಸಮಾಧಾನಕ್ಕೆ ಕಾರಣವೇನು

ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನಾಗರಾಜ್ ಗೌಡ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಈ ವೇಳೇ ಅವರಿಗೆ ಪರೋಕ್ಷವಾಗಿ ಮಧು ಬಂಗಾರಪ್ಪ ಬೆಂಬಲ ನೀಡಿದ್ದರು ಎಂಬುದು ಗೋಣಿ ಮಾಲ್ತೇಶ್ ಬೆಂಬಲಿಗರ ಆರೋಪ. ಅಲ್ಲದೆ ಚುನಾವಣೆ ಮುಗಿದ ಬಳಿಕ ಮತ್ತೆ ಕಾಂಗ್ರೆಸ್ ಸೇರಿದ ನಾಗರಾಜ್ ಗೌಡ ಹಾಗೂ ಅವರ ಬೆಂಬಲಿಗರಿಗೆ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಿಷ್ಟಾವಂತರನ್ನ ಮಧು ಬಂಗಾರಪ್ಪ ಕಡೆಗಣಿಸುತ್ತಿದ್ದಾರೆ ಎಂಬುದು ಬೆಂಬಲಿಗರ ದೂರು. ಇದೇ ಕಾರಣಕ್ಕೆ ಇವತ್ತು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಗೋಣಿ ಮಾಲ್ತೇಶ್ ರವರ ಬೆಂಬಲಿಗರು ಸಚಿವರ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.