Karnatakaelection/ ಶಿಕಾರಿಪುರದಲ್ಲಿ ಹೇಗಿದೆ ಸ್ಪರ್ಧೆ! ನಿರ್ಣಾಯಕ ಯಾರು! ವಿಜಯೇಂದ್ರ ವಿಜಯ ಸಲೀಸಿಲ್ಲ ಏಕೆ? ಬಿಎಸ್​ವೈ V/s ಬಂಡಾಯ

Karnatakaelection/ Do you know why it will not be easy for BY Vijayendra to win shikaripura constituency?

Karnatakaelection/  ಶಿಕಾರಿಪುರದಲ್ಲಿ ಹೇಗಿದೆ ಸ್ಪರ್ಧೆ!  ನಿರ್ಣಾಯಕ ಯಾರು!  ವಿಜಯೇಂದ್ರ ವಿಜಯ ಸಲೀಸಿಲ್ಲ ಏಕೆ? ಬಿಎಸ್​ವೈ V/s ಬಂಡಾಯ

KARNATAKA NEWS/ ONLINE / Malenadu today/ May 3, 2023 GOOGLE NEWS


ಶಿಕಾರಿಪುರ/ ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆ 2023  ಶಿಕಾರಿಪುರ ದಶಕಗಳ ಬಳಿಕ ಬಿಎಸ್ ಯಡಿಯೂರಪ್ಪನವರ ಸ್ಪರ್ಧೆಯಿಲ್ಲದ ಚುನಾವಣಾ ಅಖಾಡವನ್ನು ನೋಡುತ್ತಿದೆ. ಜೊತೆಯಲ್ಲಿಯೇ ಬಿ.ವೈ ವಿಜಯೇಂದ್ರ ರವರ ಸ್ಪರ್ಧೆಯಿಂದಾಗಿ ರೋಚಕ ಕ್ಷೇತ್ರವಾಗಿ ಮಾರ್ಪಟ್ಟಿದೆ. 

ಹಾಲಿ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು

ಶಿಕಾರಿಪುರ-115 ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆರ್‍ಪಿಐ ಪಕ್ಷದ ಯಲ್ಲಪ್ಪ, ಕೆಆರ್‍ಎಸ್ ಪಕ್ಷದ ರವಿನಾಯ್ಕ್, ಎಎಪಿ ಆರ್.ಎಸ್.ಚಂದ್ರಕಾಂತ, ಬಿಜೆಪಿಯ ಬಿ.ವೈ.ವಿಜಯೇಂದ್ರ, ಪಕ್ಷೇತರ ಇಮ್ತಿಯಾಜ್ ಅತ್ತರ್, ಜಿ.ಬಿ.ಮಾಲತೇಶ್, ಅನಿಲ್.ಎಂ.ಆರ್, ಮೊಹಮ್ಮದ್ ಸಾದಿಕ್, ನಾಗನಗೌಡ ಎಸ್.ಪಿ, ಗಣೇಶ ಆರ್. ಕಣದಲ್ಲಿದ್ದಾರೆ.

ಓದಿ :  ನಾನೊಬ್ಬ ಬಜರಂಗಿ: ಕಾಂಗ್ರೆಸ್ ವಿರುದ್ಧ ಬಿಜೆಪಿ  ‘ಬ್ಯಾನ್​ ಅಸ್ತ್ರ’ ಶುರುವಾಯ್ತು ನಾಯಿ ಬಿಡುವ ಅಭಿಯಾನ!

ಬಿಎಸ್​ವೈ ಭದ್ರ ಕೋಟೆ 

ಶಿಕಾರಿಪುರ ಬಿಎಸ್​ವೈರವರ ನೆಲೆ, ರಾಜ್ಯದಲ್ಲಿಯೇ ಅತಿಹೆಚ್ಚು ಅನುದಾನ ಪಡೆದುಕೊಂಡಿರುವ ಕ್ಷೇತ್ರ ಎನಿಸಿರುವ ಶಿಕಾರಿಪುರದಲ್ಲಿ ಮತಶಿಕಾರಿಯನ್ನ ಯಶಸ್ವಿಯಾಗಿ ನಡೆಸಿಕೊಂಡು ಬಂದವರು ಬಿಎಸ್​ ಯಡಿಯೂರಪ್ಪನವರು. ಈ ಸಲ ಅವರು ಕಣದಲ್ಲಿಲ್ಲ. 

ಅವರ ಬದಲಾಗಿ ಪುತ್ರ ಬಿವೈ ವಿಜಯೇಂದ್ರ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.  ಯಡಿಯೂರಪ್ಪನವರು ಅನ್ನೋ ಮಾತಿದ್ರೆ ಸಾರಾಸಗಟಾಗಿ ವೋಟು ಕೇಂದ್ರಿಕೃತವಾಗುತ್ತಿತ್ತು ಅನ್ನುವುದಕ್ಕೆ ಹಿಂದಿನ ಚುನಾವಣೆಗಳು ಸಾಕ್ಷಿಯಾಗಿದ್ದವು. ಆದರೆ ತಂದೆಗೆ ಕೊಟ್ಟ ಗೆಲವನ್ನ ಮಗನಿಗೂ ನೀಡುವ ಸಂಪ್ರದಾಯ ಮಲೆನಾಡಲ್ಲಿಲ್ಲ. ಹಾಗಾಗಿ ಕ್ಷೇತ್ರದಲ್ಲಿ ಸೆಲೆಬ್ರಿಟಿಯಾದರೂ ವಿಜಯೇಂದ್ರ ಕ್ಷೇತ್ರದಲ್ಲಿ ಮನೆ ಮನ ಎರಡನ್ನು ಮುಟ್ಟಲೇಬೇಕಿದೆ. 

ಹಿಂದಿನ ಚುನಾವಣೆ ಏನಾಗಿತ್ತು?

2018ರ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪವಿರುದ್ಧ 35,000 ಮತಗಳಿಂದ ಸೋತಿದ್ದರು ಗೋಣಿ ಮಾಲತೇಶ್. ಆಗ ಯಡಿಯೂರಪ್ಪ 2018ರಲ್ಲಿ 86,983 ಮತಗಳನ್ನು ಪಡೆದರೆ, ಮಾಲತೇಶ್ 51,586 ಮತಗಳನ್ನು ಪಡೆದಿದ್ದರು. ಐವತ್ತೊಂದು ಸಾವಿರ ಮತಗಳನ್ನ ಪಡೆದ ಹಿನ್ನೆಲೆಯಲ್ಲಿ ಈ ಸಲ ಮತ್ತೆ ಗೋಣಿ ಮಾಲತೇಶ್​ರನ್ನ ಕಾಂಗ್ರೆಸ್ ಕಣಕ್ಕಿಳಿಸಿದೆ. ಇದನ್ನ ಖಂಡಿಸಿ  ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಎಸ್.ಪಿ. ನಾಗರಾಜ ಗೌಡ ಸ್ಪರ್ಧಿಸಿದ್ದಾರೆ. 

ಬಂಜಾರ ಸಮುದಾಯದ ಆಕ್ರೋಶ

ದಲಿತರ ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಬಂಜಾರ ಸಮುದಾಯದ ಆಕ್ರೋಶ ಚುನಾವಣಾ ವೇದಿಕೆಯಲ್ಲಿ ಸ್ಪಷ್ಟವಾಗಿ ಬಿಸಿ ಮುಟ್ಟಿಸ್ತಿದೆ. ಜೊತೆಯಲ್ಲಿಯೇ ಬಿಎಸ್​ವೈ ಮನೆಗೆ ಬಿದ್ದ ಕಲ್ಲು ಅನುಕಂಪದ ಮಾತುಗಳನ್ನ ಆಡುವಂತೆ ಮಾಡಿದೆ. 

ನಾಗರಾಜ್​ ಗೌಡರ ಸ್ಪರ್ಧೆ 

ಶಿಕಾರಿಪುರದಲ್ಲಿ ಕಾಂಗ್ರೆಸ್ ಅಡ್ಜೆಸ್ಟ್​ಮೆಂಟ್ ರಾಜಕಾರಣ ಮಾಡಿದೆ ಎಂಬುದು ಸ್ಥಳಿಯ ನಾಯಕರ ಆಕ್ರೋಶ. ಇದೇ ಕಾರಣಕ್ಕೆ ಬಂಡೆದ್ದ ನಾಗರಾಜ್​ ಗೌಡರಿಗೆ ದೊಡ್ಡ ಸಮುದಾಯ ಹಾಗೂ ಕಾಂಗ್ರೆಸ್​ನ ಭಿನ್ನಮತಿಯರು ಹಾಗೂ ಸಂಘಟನೆಯ ನಾಯಕರು ನಾಗರಾಜ್​ ಗೌಡರಿಗೆ ಜೈ ಎನ್ನುತ್ತಿದ್ದಾರೆ. 

ಕ್ಷೇತ್ರದಲ್ಲಿ ವಿಜಯೇಂದ್ರರಿಗೆ ನೇರಾ ಹಣಾಹಣಿ ನೀಡುವಷ್ಟರ ಮಟ್ಟಿಗೆ ನಾಗರಾಜ್​ ಗೌಡರ ಸ್ಪರ್ಧೆ ಚರ್ಚೆಯಾಗುತ್ತಿದೆ. ಜನರೇ ಕೋಟಿ ದಾಟುವಷ್ಟು ದೇಣಿಗೆ ನೀಡಿದ್ದಾರೆ ಎನ್ನಲಾಗಿದ್ದು, ರಾಘವೇಂದ್ರ ನಾಯ್ಕ್​ ಎಂಬ ಇನ್ನೊಬ್ಬ ಸಮುದಾಯದ ಮುಖಂಡ ಬೆಂಬಲ ಸಹ ನಾಗರಾಜ್​ಗೌಡರಿಗೆ ಲಭಿಸಿದೆ. ಇದು ಬಿಜೆಪಿಗೆ ಮುಳುವಾ ಕಾಂಗ್ರೆಸ್​ಗೆ ಮುಳುವಾ ಅನ್ನುವುದು ಫಲಿತಾಂಶ ಹೇಳಬೇಕಿದೆ.  



ಓದಿ : BREAKING NEWS /  ಪ್ರಯಾಣಿಕರ ಗಮನಕ್ಕೆ ಇವತ್ತು ಕೆಎಸ್​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ! ಕಾರಣ ಇಲ್ಲಿದೆ 

ಶಿಕಾರಿಪುರ ಕ್ಷೇತ್ರ ಒಟ್ಟು 1,67 092

  • ಪುರುಷ ಮತದಾರರು-99129

  • ಮಹಿಲಾ ಮತದಾರರು-98311

  • ಒಟ್ಟು ಮತದಾರರು-197443

ಜಾತಿ ಲೆಕ್ಕಾಚಾರ 

ಲಿಂಗಾಯಿತರು 34,130, ಎಸ್ಸಿ ಎಸ್ಟಿ-34 ಸಾವಿರ, ಕುರುಬ-14 ಸಾವಿರ, ಹಿಂದುಳಿದ ವರ್ಗ-70 ಸಾವಿರ.  ಲಿಂಗಾಯತ ಸಮಾಜ ಹಾಗೂ ಪರಿಶಿಷ್ಟ ಮತಗಳು ಸಮಾನವಾಗಿದ್ದು, ಯಾರು ಯಾರ ಕಡೆ ವಾಲುತ್ತಾರೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. 

ಯಾರಿಗೆ ಪ್ಲಸ್ ಯಾರಿಗೆ ಮೈನಸ್

ರಾಜ್ಯ ಪ್ರವಾಸದ ಉಸ್ತುವಾರಿಯಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳಲದೇ ಕ್ಷೇತ್ರದಲ್ಲಿಯೇ ಸುತ್ತಾಡುತ್ತಿದ್ದಾರೆ ಬಿ.ವೈ ವಿಜಯೇಂದ್ರ, ಇನ್ನೊಂದೆಡೆ ತಮ್ಮನನ್ನ ಗೆಲ್ಲಿಸಿಯೇ ಸಿದ್ದ ಎಂದು ಸಂಸದ ಬಿವೈ ರಾಘವೇಂದ್ರ ತಾಂಡಾಗಳಲ್ಲಿ ಓಡಾಡುತ್ತಿದ್ದಾರೆ. ಬಿಎಸ್​ವೈ ತಮ್ಮ ಅನುಭವದ ತಂತ್ರಗಾರಿಕೆಯನ್ನು ಒರೆಗೆ ಹಚ್ಚಿ, ಗೆಲುವು ತಮ್ಮದೇ ಎನ್ನುತ್ತಿದ್ದಾರೆ. 

ಹಾಗಿದ್ದರೂ ಒಳಮೀಸಲಾತಿಯ ಆಕ್ರೋಶದಲ್ಲಿ ಬಿಜೆಪಿಗೆ ಮತ ಖೋತಾವಾಗುವ ಅನುಮಾನವೂ ಇದೆ. ಮೇಲಾಗಿ ನಾಗರಾಜ ಗೌಡರ ಸ್ಪರ್ಧೆ ಊಹಿಸಿಕೊಂಡಷ್ಟು ಬಿಜೆಪಿಗೆ ಸಲೀಸಲಾಗಿಲ್ಲ. 

ಇತ್ತ  ಕಾಂಗ್ರೇಸ್ ನಿಂದ ಸ್ಪರ್ಧಿಸಿರುವ ಗೋಣಿ ಮಾಲತೇಶ್ ಗೆ ಸಾಂಪ್ರಾದಾಯಿಕ ಮತಗಳು ಬೀಳುತ್ತವೆ. ಆದರೆ ಬಂಡಾಯ ಸ್ಪರ್ಧಿ ಕೀಳುವ ವೋಟು ಕಾಂಗ್ರೆಸ್ ಕಡೆಯಿಂದಲೇ ಆದಲ್ಲಿ , ಗೋಣಿ ಮಾಲ್​ತೇಶ್​ಗೆ ವೋಟು ಸುಲಭದ ಕಟಾವ್ ಆಗಲಾರದು. ಮೇಲಾಗಿ ಮತವಿಭಜನೆಯಾದರೆ, ವಿಜಯೇಂದ್ರರಿಗೆ ಲಾಭ. 




ಸೊರಬ ತಾಲ್ಲೂಕು ಉಳವಿಯಲ್ಲಿ ಭೀಕರ ಅಪಘಾತ ಇಬ್ಬರ ದುರ್ಮರಣ!

ಸೊರಬ/ ಶಿವಮೊಗ್ಗ ಇಲ್ಲಿನ ಉಳವಿ ಸಮೀಪ ಭೀಕರ ಅಪಘಾತವೊಂದು ಸಂಭವಿಸಿದೆ. ವ್ಯಾಗನರ್​ ಕಾರು ಹಾಗೂ ಬೈಕ್​ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ಮೃತರಿಬ್ಬರು ಸಹೋದರು ಎಂದು ತಿಳಿದು ಬಂದಿದೆ

ಸಾಗರ ತಾಲ್ಲೂಕಿನ ರಾಮನಗರ ಮೂಲದ ವೆಲ್ಟಿಂಗ್​ ಕೆಲಸ ಮಾಡುತ್ತಿದ್ದ ಇಬ್ಬರು ಅಪಘಾತದಲ್ಲಿ ಸಾವನ್ಪಪ್ಪಿ ದ್ದಾರೆ . ಸುಹೇಲ್ ಹಾಗೂ ಅಪ್ರಿದ್ ಮೃತರು . ಮೃತದೇಹವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ. 


ಶಿವಮೊಗ್ಗ/  ಮಾಜಿ ಸೈನಿಕರಿಂದ ಸಹ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆಯವರ ಚಿತ್ರದುರ್ಗದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮಾಜಿ ಸೈನಿಕರ ಮೀಸಲಾತಿಯಡಿ ಖಾಲಿ ಇರುವ ಸಹ ಶಿಕ್ಷಕ ಹುದ್ದೆಗೆ ಬಿ.ಎ., ಬಿ.ಇಡಿ. ವಿದ್ಯಾರ್ಹತೆ ಪಡೆದಿರುವ ಮಾಜಿ ಸೈನಿಕ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಆಸಕ್ತ ಅಭ್ಯರ್ಥಿಗಳು ಸಂಬಂಧಿತ ಶೈಕ್ಷಣಿಕ ಹಾಗೂ ಮಾಜಿ ಸೈನಿಕರ ಮೂಲ ದಾಖಲೆಯೊಂದಿಗೆ ಮೇ-05ರಂದು ಮ.01 ಗಂಟೆಯೊಳಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಚೇರಿಗೆ ಖುದ್ದಾಗಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.   

ಹೆಚ್ಚಿನ ಮಾಹಿತಿಗಾಗಿ ಇಲಾಖೆಯನ್ನು ಖುದ್ದಾಗಿ ಅಥವಾ ದೂ.ಸಂ.: 08182-220925 ನ್ನು ಸಂಪರ್ಕಿಸುವುದು.

ಓದಿ : BREAKING NEWS /  ಪ್ರಯಾಣಿಕರ ಗಮನಕ್ಕೆ ಇವತ್ತು ಕೆಎಸ್​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ! ಕಾರಣ ಇಲ್ಲಿದೆ 


Malenadutoday.com Social media