ನಾನೊಬ್ಬ ಬಜರಂಗಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ‘ಬ್ಯಾನ್​ ಅಸ್ತ್ರ’ ಶುರುವಾಯ್ತು ನಾಯಿ ಬಿಡುವ ಅಭಿಯಾನ!

BJP slams Bajrang Dal ban in Congress manifesto

ನಾನೊಬ್ಬ ಬಜರಂಗಿ: ಕಾಂಗ್ರೆಸ್ ವಿರುದ್ಧ ಬಿಜೆಪಿ  ‘ಬ್ಯಾನ್​ ಅಸ್ತ್ರ’ ಶುರುವಾಯ್ತು ನಾಯಿ ಬಿಡುವ ಅಭಿಯಾನ!

KARNATAKA NEWS/ ONLINE / Malenadu today/ May 3, 2023 GOOGLE NEWS


ಶಿವಮೊಗ್ಗ & ಚಿಕ್ಕಮಗಳೂರು/ ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಬಜರಂಗದಳದ ನೀಷೇಧ ಪ್ರಸ್ತಾಪವನ್ನು ಬಿಜೆಪಿ ಅಚ್ಚುಕಟ್ಟಾಗಿ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಪ್ರಣಾಳಿಕೆ ಬಿಡುಗಡೆಯಾದ ಬೆನ್ನಲ್ಲೆ ಕಾಂಗ್ರೆಸ್​  ಪಕ್ಷದಲ್ಲಿಯೇ ಪ್ರಣಾಳಿಕೆಗೆ ಅಪಸ್ವರ ಕೇಳಿಬಂದಿತ್ತು. 

ಇನ್ನೂ ಬಿಜೆಪಿ ಇದೇ ಅಸ್ತ್ರವನ್ನು ಕಾಂಗ್ರೆಸ್​ನ ವಿರುದ್ಧ ಬಳಸಲು ಆರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಜರಂಗದಳವನ್ನು ನೀವು ನಿಷೇಧಿಸುತ್ತೀರಾ? ಎಂದು ಪ್ರಶ್ನೆ ಕೇಳುವುದರ ಜೊತೆಗೆ ಬಿಜೆಪಿ ನಾಯಕರು ನಾನು ಬಜರಂಗಿ ಎಂದು ಪೋಸ್ಟರ್​​ಗಳನ್ನು ತಮ್ಮ ಡಿಪಿಗಳಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ರವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗೆ ತಾನೊಬ್ಬ ಬಜರಂಗಿ ಎಂದು ಹಾಕಿಕೊಂಡಿದ್ದು ಅದೇ ರೀತಿಯಲ್ಲಿ ಹಲವು ನಾಯಕರು ಸೋಶಿಯಲ್​ ಮೀಡಿಯಾದಲ್ಲಿ ತಾನೊಬ್ಬ ಬಜರಂಗಿ ಎಂದು ಪೋಸ್ಟ್ ಹಾಕಿದ್ದಾರೆ. 

READ/ ಈ ಸಲ ವೋಟು ಯಾರಿಗೆ ಹಾಕಬೇಕು ಎಂಬುದಕ್ಕೆ ಶಿವಮೊಗ್ಗದಲ್ಲಿ ಚಕ್ರವರ್ತಿ ಸೂಲಿಬೆಲೆ ಉತ್ತರ! 


ಕಾಂಗ್ರೆಸ್​ ಸೋಲಿಗೆ ಇದೊಂದು ಸಾಕು

ಇನ್ನೊಂದೆಡೆ ಈ ಬಗ್ಗೆ ಟ್ವೀಟ್ ಮಾಡಿರುವ  ಬಿವೈ ವಿಜಯೇಂದ್ರ ವಿನಾಶ ಕಾಲಕ್ಕೆ ಎದುರಾದ ವಿಪರೀತ ಬುದ್ಧಿಯಿದು. ‘ಬಜರಂಗ ದಳ’ ನಿಷೇಧದ ನಿಮ್ಮ ಪ್ರಣಾಳಿಕೆಯ ಅಸ್ತ್ರವೇ ನಿಮ್ಮನ್ನು ನಿಶ್ಯಸ್ತ್ರಗೊಳಿಸಿ ನಿಷ್ಕ್ರಿಯಗೊಳಿಸಲಿದೆ ಎಂದಿದ್ದಾರೆ. 

ವೋಟು ಕೇಳಲು ಬಂದರೇ ನಾಯಿ ಬಿಡ್ತೀವಿ

ಇನ್ನೊಂದೆಡೆ ಬಿಜೆಪಿ ಮುಖಂಡರು ಈ ವಿಚಾರವನ್ನು ಅಭಿಯಾನದ ರೂಪದಲ್ಲಿ ಪ್ರಚಾರ ಮಾಡುತ್ತಿದ್ದು, ಮನೆಮನೆಯ ಮುಂದೆ ಕಾಂಗ್ರೆಸ್​ನವರ ವಿರುದ್ಧ ಪೋಸ್ಟರ್ ಅಂಟಿಸುತ್ತಿದ್ದಾರೆ ಇದಕ್ಕೆ ಸಾಕ್ಷಿ ಎಂಬಂತೆ,  

ಮೂಡಿಗೆರೆ ತಾಲ್ಲೂಕಿನ ಬಣಕಲ್‌ ಹೋಬಳಿಯ ಗುಡ್ಡಹಟ್ಟಿ ಗ್ರಾಮದ ಅರುಣ್‌ ಪೂಜಾರಿ ಎಂಬುವರು ತಮ್ಮ ಮನೆ ಗೇಟಿನಲ್ಲಿ ಇದು ಬಜರಂಗದಳದವರ ಮನೆ. ಕಾಂಗ್ರೆಸ್‌ನವರು ಮತಯಾಚಿಸಲು ಅವಕಾಶ ಇಲ್ಲ. ಒಳಗೆ ಬಂದರೆ ನಾಯಿ ಬಿಡಲಾಗುತ್ತದೆ ಎಚ್ಚರ  ಎಂದು ಫಲಕ ಹಾಕಿದ್ದಾರೆ. 

ಇದನ್ನು ಸಹ ಓದಿ :  ಹೊಸನಗರದಲ್ಲಿ ಪು ನೀತ್​ರ ಚಿತ್ರ ಕಂಡು ಭಾವುಕರಾದ  ಶಿವಣ್ಣ

ಒಟ್ಟಾರೆ, ಬಿಜೆಪಿ ನಾಯಕರು ಬಜರಂಗದಳದ ನಿಷೇಧ ವಿಚಾರವನ್ನು ಚುನಾವಣಾ ಅಸ್ತ್ರವನ್ನಾಗಿಸಿಕೊಂಡಿದ್ದು,  ಕಾಂಗ್ರೆಸ್ ಪ್ರಣಾಳಿಕೆ ವ್ಯಾಪಕ ಚರ್ಚೆಯ ವಿಷಯವಾಗಿದೆ. 


ಬಿಎಸ್​ವೈ ಮನೆಗೆ ಕಲ್ಲು ಬಿದ್ದ ಘಟನೆ ನೆನೆದು ಕಣ್ಣೀರು ಹಾಕಿದ್ರಾ ಸಂಸದ ಬಿ.ವೈ .ರಾಘವೇಂದ್ರ!?

ಶಿಕಾರಿಪುರ/ ಶಿವಮೊಗ್ಗ ಶಿಕಾರಿಪುರದಲ್ಲಿರುವ ಬಿಎಸ್​ವೈ ಮನೆ ಮೇಲೆ ಕಲ್ಲು ತೂರಾಟದ ಘಟನೆ ಇದೀಗ ಮತ್ತೆ ಚರ್ಚೆಯಾಗುತ್ತಿದೆ. ಆ ಸಂದರ್ಭದಲ್ಲಿ ನಮ್ಮ ಕುಟುಂಬದವರು ಕಣ್ಣೀರು ಹಾಕಿದ್ದೇವೆ ಅಂತಾ ಪ್ರಚಾರ ಸಭೆಯೊಂದರಲ್ಲಿ ಸಂಸದರ ಬಿ.ವೈ ರಾಘವೆಂದ್ರ ಹೇಳಿದ್ಧಾರೆ ಎನ್ನಲಾಗಿದೆ. 

 

ಶಿಕಾರಿಪುರ ವಿಧಾನಸಭಾ ಕ್ಷೇತ್ರದ  ವಿವಿಧ ತಾಂಡಾಗಳಲ್ಲಿ  ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಪರ ಪ್ರಚಾರ ನಡೆಸ್ತಾ ಸಂಸದ ಬಿ.ವೈ ರಾಘವೇಂದ್ರರವರು ದೇವಾಲಯದ ಮುಂದೆ ನಿಂತುಕೊಂಡು ಮಾತಾಡುತ್ತಿದ್ದೆನೆ. ಸೇವೆ ಮಾಡಿದ ಮನೆತನಕ್ಕೆ ಕಲ್ಲು ಹೊಡೆಸುವ ಕೆಲಸವನ್ನು ವಿರೋಧಿಗಳು ಮಾಡಿದ್ದಾರೆ  ಎಂದು ಆರೋಪಿಸಿದ್ದಾರೆ. 

ಇದನ್ನು ಸಹ ಓದಿ : ಆಟೋ ಚಾಲಕನಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಡಿಐಜಿಪಿ ತ್ಯಾಗರಾಜನ್​ ರಿಂದ ಸನ್ಮಾನ! ಕಾರಣವೇನು ?



ಅಲ್ಲದೆ ನಮ್ಮ ಸರ್ಕಾರ  ಯಾರಿಗೂ ಅನ್ಯಾಯ ಮಾಡಿಲ್ಲ ಎಂದ ಅವರು, ಘಟನೆ ನಡೆದ ಸಂದರ್ಭದಲ್ಲಿ ಕುಟುಂಬದವರು ಕಣ್ಣಿರುಹಾಕಿದ್ದರು ಎಂದಿದ್ದಾರೆ.  

 

Malenadutoday.com Social media