ಹೊಸನಗರದಲ್ಲಿ ಪು ನೀತ್​ರ ಚಿತ್ರ ಕಂಡು ಭಾವುಕರಾದ ಶಿವಣ್ಣ

Shivanna gets emotional after seeing PuNeet's flex in Hosanagara

ಹೊಸನಗರದಲ್ಲಿ ಪು ನೀತ್​ರ ಚಿತ್ರ ಕಂಡು ಭಾವುಕರಾದ  ಶಿವಣ್ಣ

KARNATAKA NEWS/ ONLINE / Malenadu today/ May 1, 2023 GOOGLE NEWS


ಹೊಸನಗರ/ ಶಿವಮೊಗ್ಗ ದಲ್ಲಿ ಶಿವಣ್ಣ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಸೊರಬದಲ್ಲಿ ಮಧು ಬಂಗಾರಪ್ಪರ ಪರವಾಗಿ ಮತ ಪ್ರಚಾರ ನಡೆಸಿದ್ದ ಶಿವಣ್ಣ ಇವತ್ತು ರಿಪ್ಪನ್​ ಪೇಟೆ ಹಾಗೂ ಹೊಸನಗರದಲ್ಲಿ ಬೇಳೂರು ಗೋಪಾಲೃಕೃಷ್ಣರ ಪರವಾಗಿ ಪ್ರಚಾರ ನಡೆಸಲಿದ್ದಾರೆ. 

ತೀರ್ಥಹಳ್ಳಿಯಲ್ಲಿಯು ಶಿವಣ್ಣ ಪ್ರಚಾರ

ಮೂಲಗಳ ಪ್ರಕಾರ ತೀರ್ಥಹಳ್ಳಿಯಲ್ಲಿಯು ಅವರು ಪ್ರಚಾರ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲಿ ಅವರು ಬಾಳೆಬೈಲಿನ ಸರ್ಕಾರಿ ಕಾಲೇಜಿನಿಂದ  ಆಗುಂಬೆ ಬಸ್ ನಿಲ್ದಾಣ, ಗಾಂಧಿ ಚೌಕ, ತಾಲೂಕು ಕಚೇರಿ, ಕೊಪ್ಪ ಸರ್ಕಲ್ ವರೆಗೆ ರೋಡ್ ಶೋ ನಡೆಸಲಿದ್ಧಾರಂತೆ. 

ಪ್ರಚಾರದಲ್ಲಿಯು ಎದುರಾದ ಪುನೀತ್ 

ಅಭಿಮಾನಿಗಳನ್ನ ಅಗಲಿದ ನಕ್ಷತ್ರ ಪುನೀತ್ ರಾಜಕುಮಾರ್​ನ್ನ ಜನರು ಪುತ್ತಳಿ, ಪ್ಲೆಕ್ಸ್​ ಹಾಗೂ ರಸ್ತೆಗೆ ಹೆಸರಿಟ್ಟು ಅಜರಾಮರವಾಗಿಸಿವೆ. ಸದ್ಯ  ನಟ ಶಿವಣ್ಣರಿಗೆ ಹೋದೆಲ್ಲೆಲ್ಲಾ ಪುನೀತ್​ರ  ಭಾವಚಿತ್ರ, ಪುತ್ತಳಿ, ರಸ್ತೆಗಿಟ್ಟ ಹೆಸರುಗಳು ಎದುರಾಗುತ್ತಿವೆ. ಮತ್ತು ಅವರನ್ನ ಭಾವುಕರಾಗಿಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಹೊಸನಗರದಲ್ಲಿ ಕನ್ನಡ ಸಂಘಟನೆಗಳು ಹಾಕಿದ್ದ ಪ್ಲೆಕ್ಸ್​ ಶಿವಣ್ಣರನ್ನ ಸೆಳೆದಿತ್ತು.  

ಬೇಳೂರು ಗೋಪಾಲಕೃಷ್ಣರ ಪರವಾಗಿ ಮತ ಪ್ರಚಾರ ನಡೆಸಿದ ಶಿವರಾಜ್ ಕುಮಾರ್, ತಮ್ಮ ಮತಪ್ರಚಾರಕ್ಕೂ ಮೊದಲು  ರಾಜರತ್ನ ಡಾಕ್ಟರ್ ಪುನೀತ್  ರಾಜಕುಮಾರ್ ರವರ ಭಾವಚಿತ್ರಕ್ಕೆ   ಪುಷ್ಪ ನಮನ ಸಲ್ಲಿಸಿದ್ರು.  ಕೆಇಬಿ ಸರ್ಕಲ್ ಬಳಿ ಹಾಕಲಾಗಿದ್ದ ಡಾಕ್ಟರ್ ಪುನೀತ್ ರಾಜಕುಮಾರ್ ರವರ  ಭಾವಚಿತ್ರಕ್ಕೆ ಹೂವು ಹಾಕಿದ ಶಿವಣ್ಣ, ಕ್ಷಣಕಾಲ ನಗು ಮುಖದ ಪುನೀತರನ್ನ ನೋಡುತ್ತಾ ಭಾವುಕಾದರು. 

ಬಳಿಕ ಪ್ರಚಾರದ ವಾಹವನ್ನ ಏರಿ ಶಿವಣ್ಣ ಪ್ರಚಾರ ಮಾಡಿದರು,  ಕಾಂಗ್ರೆಸ್​ ಪಕ್ಷದ ಅಭ್ಯರ್ಥಿ  ಬೇಳೂರು ಗೋಪಾಲಕೃಷ್ಣರ ಪರ ಮತ ಯಾಚಿಸಿದ ಶಿವಣ್ಣರವರ ಜೊತೆಗೆ ಮಧು ಬಂಗಾರಪ್ಪರವರು ಕೂಡ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. 

ಕೊಟ್ಟಿಗೆಗೆ ನುಗ್ಗಿದ ಚಿರತೆ/ ಹೆಂಚು ತೆಗೆದು ಅರಣ್ಯ ಇಲಾಖೆ ರೋಚಕ ಕಾರ್ಯಾಚರಣೆ!

ಸೊರಬ/ ಶಿವಮೊಗ್ಗ ಇಲ್ಲಿನ ಕುಪ್ಪೆ ಗ್ರಾಮದ ಮನೆಯಯೊಂದರ ಕೊಟ್ಟಿಗೆಯಲ್ಲಿ ಚಿರತೆಯೊಂದು ಸೇರಿ ಆತಂಕ ಮೂಡಿಸಿತ್ತು. ಈ ಸಂಬಂಧ ತಕ್ಷಣ ಕಾರ್ಯಾಚರಣೆಗೆ ಇಳಿದ ಅರಣ್ಯ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. 

ಗ್ರಾಮದ ಶಿವಕುಮಾರ್ ಗೌಡ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಚಿರತೆ ಸೇರಿಕೊಂಡಿತ್ತು. ಚಿರತೆಯ ಇರುವಿಕಯನ್ನು ಗಮನಿಸಿದ  ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. 

ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ 

ಒಂದು ಗಂಟೆಗೂ ಅಧಿಕ ಕಾಲ ಕಾರ್ಯಚರಣೆ ನಡೆಸಿದ ಅರಣ್ಯ ಸಿಬ್ಬಂದಿ, ಕೊಟ್ಟಿಗೆಯ ಹಂಚು ತೆಗೆದು ಅದರ ಮೂಲಕ ಚಿರತೆಗೆ ಅರವಳಿಕೆ ಚುಚ್ಚುಮದ್ದನ್ನು ಡಾರ್ಟ್​ ಮಾಡಿದರು, ಆನಂತರ  ಚಿರತೆಗೆ  ಪ್ರಾಥಮಿಕ ಚಿಕಿತ್ಸೆ ನೀಡಿ, ಹಂಪೆಯ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ. 

 

Malenadutoday.com Social media