ಲೋಕಾಯುಕ್ತ ರೇಡ್​ನಲ್ಲಿ ಪತ್ತೆಯಾಯ್ತು 4.23 ಕೋಟಿ ಮೌಲ್ಯದ ಆಸ್ತಿ!

Lokayukta raids: Assets worth Rs 4.23 crore found

ಲೋಕಾಯುಕ್ತ ರೇಡ್​ನಲ್ಲಿ ಪತ್ತೆಯಾಯ್ತು  4.23 ಕೋಟಿ ಮೌಲ್ಯದ ಆಸ್ತಿ!

KARNATAKA NEWS/ ONLINE / Malenadu today/ Apr 25, 2023 GOOGLE NEWS


ಶಿವಮೊಗ್ಗ/ ನಗರದಲ್ಲಿ ಮೊನ್ನೆ ನಡೆದ ಲೋಕಾಯುಕ್ತ ದಾಳಿ ವೇಳೆ,  ನಿವೃತ್ತ ಡಿಸಿಎಫ್ ಅಧಿಕಾರಿ ಬಳಿ  4.23 ಕೋಟಿ ಆಸ್ತಿ ಪತ್ತೆಯಾಗಿದೆ.  

ನಿವೃತ್ತ ಉಪಅರಣ್ಯ ಸಂರಕ್ಷಣಾಧಿಕಾರಿ ಐ.ಎಂ. ನಾಗರಾಜ್​ ಅವರು 4.23 ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿ ಹೊಂದಿರುವುದು ಲೋಕಾಯುಕ್ತ ಪೊಲೀ ಸರು ದಾಳಿ ನಡೆಸಿದ ವೇಳೆ ಪತ್ತೆಯಾಗಿದೆ.

ಶಿವಮೊಗ್ಗದ ಹಲವೆಡೆ ಆಸ್ತಿ

ಶಿವಮೊಗ್ಗ ನಗರದ ಗೋಪಾಳ ಬಡಾವಣೆಯ ಮನೆ, ಹೊನ್ನಾಳಿ ಪಟ್ಟ ಣದಲ್ಲಿರುವ ಮನೆ ಹಾಗೂ ಶಿವಮೊಗ್ಗ ತಾಲ್ಲೂಕಿನ ಅನುಪಿನಕಟ್ಟೆ ಗ್ರಾಮದ ಫಾರಂ ಹೌಸ್‌ ಗಳಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. 

ಈ ವೇಳೆ  16.08 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು, 70 ಲಕ್ಷ ಬೆಲೆಬಾಳುವ ಎರಡು ಟ್ಯಾಂಕರ್ ಲಾರಿಗಳು, 16 ಲಕ್ಷದ ಇನ್ನೊವಾ ಕಾರು, 16 ಲಕ್ಷದ ಮಾರುತಿ ಸುಜುಕಿ ಕಾರು, 80,000 ಬೆಲೆ ಬಾಳುವ ಯಮಹಾ ರೇಮ್ ಮೋಟರ್ ಸೈಕಲ್, 4 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ

ಬೆಂಗಳೂರಿನಲ್ಲೂ ಆಸ್ತಿ

ಬೆಂಗಳೂರಿನ ಕಗ್ಗಲೀಪುರದಲ್ಲಿ 25 ಲಕ್ಷದ ಒಂದು ಫ್ಲ್ಯಾಟ್, ಅನುಪಿನಕಟ್ಟೆ ಗ್ರಾಮದಲ್ಲಿ 10 ಲಕ್ಷದ ಒಂದು ಫಾರ್ಮ್ ಹೌಸ್ ಹಾಗೂ ಗ್ರಾಮದಲ್ಲಿ 20 ಲಕ್ಷದ 10 ಎಕರೆ ಅಡಿಕೆ ತೋಟ ಪತ್ತೆಯಾಗಿವೆ.  

ಶಿವಮೊಗ್ಗದ ಲಗಾನ್ ಮಂದಿರ ರಸ್ತೆಯಲ್ಲಿ 50 ಲಕ್ಷ ಬೆಲೆಬಾಳುವ ಒಂದು ಮನೆ, 60 ಲಕ್ಷ ಮೌಲ್ಯದ ನಾಲ್ಕು ಮಳಿಗೆಗಳು ಹಾಗೂ ಎರಡನೇ ಮಹಡಿಯಲ್ಲಿರುವ ಒಂದು ಮನೆ, 

ಶಿವಮೊಗ್ಗ ಭದ್ರಾವತಿಯಲ್ಲಿ ಸರ್ವೀಸ್ ಸ್ಟೇಷನ್ 

ಶಿವಮೊಗ್ಗ ನಗರ, ಸಾಗರ ಹಾಗೂ ಭದ್ರಾವತಿಯ ಚನ್ನಗಿರಿ ರಸ್ತೆಯಲ್ಲಿರುವ ತಲಾ 20 ಲಕ್ಷ ಬೆಲೆ ಬಾಳುವ ತಲಾ ಒಂದೊಂದು ಸರ್ವೀಸ್ ಸ್ಟೇಷನ್‌ಗಳು,

ಶಿವಮೊಗ್ಗ ನಗರ ಅಟಲ್ ಬಿಹಾರಿ ವಾಜಪೇಯಿ (ಮಲ್ಲಿಗೇನಹಳ್ಳಿ) ಬಡಾವಣೆಯಲ್ಲಿ 12.50 ಲಕ್ಷದ 2 ನಿವೇಶನಗಳು, 

ಶಿವಮೊಗ್ಗ ನಗರದ ದೇವಕಾತಿಕೊಪ್ಪದ ಇಂಡಸ್ಟ್ರೀಯಲ್ ಏರಿಯಾದಲ್ಲಿ 37.66 ಲಕ್ಷದ ಒಂದು ಫ್ಲಾಟ್, ಶಿವಮೊಗ್ಗ ತಾಲ್ಲೂಕು ಕಸಬಾ ಹೋಬಳಿಯ ರಾಂಪುರ ಗ್ರಾಮದಲ್ಲಿ 13.54 ಲಕ್ಷ ಬೆಲೆ ಬಾಳುವ ಎರಡು ಲೋಕಾಯುಕ್ತ ನಿವೇಶನಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

Malenadutoday.com Social media