bs yediyurappa/ ಶಿವಮೊಗ್ಗ ನಗರ ಕ್ಷೇತ್ರವನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡ ಬಿಎಸ್​ವೈ! ಸಿದ್ದರಾಮಯ್ಯರನ್ನ ಸೋಲಿಸಲು ಸ್ಟ್ಯಾಟರ್ಜಿ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Apr 24, 2023 GOOGLE NEWS


ಶಿವಮೊಗ್ಗಮಾಜಿ ಸಿಎಂ ಯಡಿಯೂರಪ್ಪ ಇವತ್ತು ಶಿವಮೊಗ್ಗದಲ್ಲಿದ್ದು, ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದಲ್ಲಿ (shivamogga city assembly constituency) ಗೆದ್ದೇ ಗೆಲ್ಲುತ್ತೇವೆ ಎಂದಿದ್ಧಾರೆ. 

ಶಿವಮೊಗ್ಗ ಪ್ರತಿಷ್ಟೆಯ ಕಣ

ಶಿವಮೊಗ್ಗ ನಮಗೆ ಪ್ರತಿಷ್ಟೆಯ ಕಣ ಎಂದಿರುವ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ, ಶಿವಮೊಗ್ಗದಲ್ಲಿ ಗೆಲ್ಲಲು,  ಬೇರೆ ಬೇರೆ ರೀತಿಯ ಸಮಾಜದ ಸಭೆ ಮಾಡ್ತಿದ್ದೇವೆ. ಶಿವಮೊಗ್ಗದಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ ಎಂದಿದ್ದಾರೆ. 

ಹಿಂದುಳಿದ ವರ್ಗದ ಎಲ್ಲಾ ಸಮಾಜ ಬೆಂಬಲ‌ ಕೊಡುತ್ತಿವೆ ಹಾಗೆ ನಮ್ಮ ಸಮಾಜ ಸಹ ಎಲ್ಲಾ ಕಡೆ ಬೆಂಬಲ ಕೊಡ್ತೀವೆ . ರಾಜ್ಯದಲ್ಲಿ ವಾತಾವರಣ ಚನ್ನಾಗಿದೆ. 

ಕೇಂದ್ರದ ನಾಯಕರಾದ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ನಮಗೆ 125-130 ಸ್ಥಾನ ಬರುತ್ತದೆ ಎಂದು ಬಿಎಸ್​ವೈ ವಿಶ್ವಾಸ ವ್ಯಕ್ತಪಡಿಸಿದರು. 

ಸಿದ್ದರಾಮಯ್ಯ ಗೆಲ್ಲೋದು ಕಷ್ಟ

ರಾಜ್ಯದಲ್ಲಿ ನಾವು ಸರಕಾರ ರಚನೆ ಮಾಡ್ತೇವೆ ಎಂದ ಬಿಎಸ್ ಯಡಿಯೂರಪ್ಪ, ಲಿಂಗಾಯತ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ  ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದಿದ್ಧಾರೆ. 

ವಿಪಕ್ಷದ ನಾಯಕ ಅನ್ನುವ ಬಗ್ಗೆ ಅರಿವಿಲ್ಲದೇ ಮಾತನಾಡುತ್ತಿದ್ದಾರೆ, ಜನ ಸಿದ್ದರಾಮಯ್ಯ ಅವರಿಗೆ ತಕ್ಕ ಉತ್ತರ ಕೊಡುತ್ತಾರೆ.  

ಸಿದ್ದರಾಮಯ್ಯ ಗೆಲ್ಲೋದು ಕಷ್ಟ ಆಗುತ್ತದೆ.ಆ ರೀತಿ‌ ನಾವು ತಂತ್ರ ಮಾಡ್ತಿದ್ದೇವೆ ಜನ ಈ ಬಾರಿ  ರಾಜ್ಯದಾದ್ಯಂತ ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸುತ್ತಾರೆ ಎಂದಿದ್ದಾರೆ. 

ಸಂತೋಷ್ ಬಗ್ಗೆ ಟೀಕೆಗೆ ಬಿಎಸ್​​ವೈ ಗರಂ

ಬಿ.ಎಲ್​ ಸಂತೋಷ್​   ನಮ್ಮ ಹಿರಿಯ ಮುಖಂಡರು, ಬಿಜೆಪಿ ಮುತ್ಸದಿ, ನಮ್ಮ ‌ನಾಯಕರು, ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸಲ್ಲ ಎಂದ ಮಾಜಿ ಸಿಎಂ,  

ಅವರ ಬಗ್ಗೆ ಟೀಕೆ ಮಾಡಲು ಯೋಗ್ಯತೆ ಇಲ್ಲ. ಸಂತೋಷ್ ಸಂಘಟನೆಗಾಗಿ ಕೆಲಸ ಮಾಡ್ತಿದ್ದಾರೆ.ಅವರ ಬಗ್ಗೆ ‌ಮಾತನಾಡೋದು ಸರಿಯಲ್ಲ ಎಂದರು

ರಾಹುಲ್ ಗಾಂಧಿ ಯಾವ ಲೆಕ್ಕ

ರಾಹುಲ್ ಗಾಂಧಿಗೆ ತಲೆ ತಿರುಗಿದೆ ಎಂದ ಬಿಜೆಪಿಯ ಹಿರಿಯ ಮುಖಂಡ, ವೀರಶೈವರ ಬಗ್ಗೆ ರಾಹುಲ್ ಗಾಂಧಿಗೆ ಏನು ಗೊತ್ತಿದೆ. ಬಸವಣ್ಣನವರ ತತ್ವ ಸಿದ್ದಾಂತ ಏನು ಗೊತ್ತಿದೆ ಎಂದು ಪ್ರಶ್ನಿಸಿದ್ದಾರೆ. 

ಈಗ ವೀರಶೈವರ ಬಗ್ಗೆ ಏನೋ ತಿಳಿದವರ ರೀತಿ ಮಾತನಾಡುತ್ತಿದ್ದಾರೆ. ಅಮಿತ್ ಶಾ ಮೋದಿ ಮುಂದೆ ರಾಹುಲ್ ಗಾಂಧಿ ಯಾವ ಲೆಕ್ಕ ಎಂದ ಯಡಿಯೂರಪ್ಪ,  

ಇದೆಲ್ಲಾ ನಡೆಯುವುದಿಲ್ಲ, ಕಾಂಗ್ರೆಸ್ ನವರು ಏನೋ ಹೇಳಬೇಕು ಹೇಳ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು

Malenadutoday.com Social media

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor