Editorial Team

ಸಂಪಾದಕೀಯ ಬಳಗ

‘ಮಲೆನಾಡು ಟುಡೆ’ (malenadutoday.com) ಕೇವಲ ಒಂದು ಸುದ್ದಿ ವೆಬ್‌ಸೈಟ್ ಅಲ್ಲ, ಇದೊಂದು ನೈಜ, ನಿಷ್ಪಕ್ಷಪಾತ ಮತ್ತು ಪಾರದರ್ಶಕ ಪತ್ರಿಕೋದ್ಯಮವನ್ನು ನಂಬಿರುವ ಸಮರ್ಪಿತ ಪತ್ರಕರ್ತರ ತಂಡ. ನಮ್ಮ ಓದುಗರಿಗೆ ಪ್ರತಿದಿನ ನಿಖರ, ವಸ್ತುನಿಷ್ಠ ಹಾಗೂ ವಿಶ್ವಾಸಾರ್ಹ ಸುದ್ದಿಗಳನ್ನು ಅತ್ಯಂತ ವೇಗವಾಗಿ ತಲುಪಿಸಲು ನಮ್ಮ ಸಂಪಾದಕೀಯ ಬಳಗ ಶ್ರಮಿಸುತ್ತದೆ.

ನಮ್ಮ ಸುದ್ದಿಮನೆಯ ಹಿಂದಿರುವ ಪ್ರಮುಖ ಸದಸ್ಯರ ಪರಿಚಯ ಇಲ್ಲಿದೆ

ಜೆಪಿ

ಮುಖ್ಯ ಸಂಪಾಧಕರು, ಪ್ರಧಾನ ವರದಿಗಾರರು & Founder & Editor-in-Chief

ಪತ್ರಿಕೋದ್ಯಮದಲ್ಲಿ 25 ಕ್ಕೂ ಹೆಚ್ಚು ವರ್ಷಗಳ ಕಾಲ ನುರಿತ ಅನುಭವ ಹೊಂದಿರುವ ಜೆಪಿ, ಶಿವಮೊಗ್ಗ ಜಿಲ್ಲೆಯ ರಾಜಕಾರಣ, ಅರಣ್ಯ, ವನ್ಯಜೀವಿ, ಜನಪರ ಹೋರಾಟ, ಸಂತ್ರಸ್ತ ಜೀವನ, ಮುಳುಗು ನೀರಿನ ಕಥೆಗಳು ಸೇರಿದಂತೆ ಪ್ರಕೃತಿಯ ಒಡಲಾಳ ತೆರದಿಡುವ ಹಲವು ವಿಷಯಗಳನ್ನು ತಮ್ಮ ಪತ್ರಿಕಾ ವರದಿಯಲ್ಲಿ ತಂದಿದ್ದಾರೆ. ಇದುವರೆಗೂ ಹಲವು ಸಾಧ್ಯತೆಗಳನ್ನು ವೃತ್ತಿ ಜೀವನದಲ್ಲಿ ತೆರೆದಿಟ್ಟಿರುವ ಜೆಪಿ ಮಲೆನಾಡು ಟುಡೆ ಎಂಬ ಸಂಸ್ಥೆಯ ಕನಸು ಕಟ್ಟಿ ಅದನ್ನು ಜಾರಿಗೊಳಿಸಿದ್ದಷ್ಟೆ ಅಲ್ಲದೆ ಯಶಸ್ವಿಯಾಗಿ ಐದು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಗಣೇಶ್ ನಾವುಡ
ಉಪ ಸಂಪಾಧಕರು, ವರದಿಗಾರರು
ಪತ್ರಿಕೋದ್ಯಮದಲ್ಲಿ ಹಾಗೂ ಸುದ್ದಿ ನಿರ್ವಹಣೆಯಲ್ಲಿ ಅಪಾರ ಆಸಕ್ತಿ ಮತ್ತು ಅನುಭವ ಗಣೇಶ್ ನಾವುಡರದ್ದು ಸುದೀರ್ಘ ಪತ್ರಿಕೋದ್ಯಮದ ಹಾದಿ. ಸಮಯ ಟಿವಿಯಿಂದ ಶಿವಮೊಗ್ಗ ವರದಿಗಾರನಾಗಿ ಆರಂಭಗೊಂಡ ಟಿವಿ ಪತ್ರಿಕೋದ್ಯಮ, ಬೆಂಗಳೂರಿನಲ್ಲಿ ಟಿವಿ 9 ಕನ್ನಡ, ನ್ಯೂಸ್​ ಫಸ್ಟ್ ಕನ್ನಡದಲ್ಲಿ ಪ್ರಮುಖ ಜವಾಬ್ದಾರಿ ನಿಬಾಯಿಸುವರೆಗೂ ಸಾಗಿದೆ. ಮಲೆನಾಡು ಟುಡೆ ಜವಾಬ್ದಾರಿಗಳ ಪೈಕಿ, ಸಂಸ್ಥೆಯ ಸುದ್ದಿ ವಿಚಾರದ ನಿರ್ವಹಣೆ ಹಾಗೂ ಮಲೆನಾಡು ಟುಡೆ ಪತ್ರಿಕೆಯ ಡಿಸೈನರ್ ಆಗಿ ಕಾರ್ಯ ನಿರ್ವಹಿಸ್ತಿದ್ದಾರೆ.
ಸಂಪರ್ಕಿಸಿ: [ ajjimaneganesh@gmail.com]

ಪ್ರತಾಪ್ ತೀರ್ಥಹಳ್ಳಿ
ಹಿರಿಯ ವರದಿಗಾರರು (Senior Reporter)
ಕಳೆದ ಕೆಲವು ವರ್ಷಗಳಿಂದ ಸ್ಥಳೀಯ ಸುದ್ದಿ, ಅಪರಾಧ, ಮತ್ತು ಮಲೆನಾಡಿನ ವಿಶೇಷ ವರದಿಗಾರಿಕೆಯಲ್ಲಿ ಇವರು ಪರಿಣತಿ ಹೊಂದಿದ್ದಾರೆ. ತಾಲೂಕು ಮತ್ತು ಜಿಲ್ಲಾ ಮಟ್ಟದ ಪ್ರಮುಖ ಘಟನೆಗಳನ್ನು ಕ್ಷಣಮಾತ್ರದಲ್ಲಿ ಓದುಗರ ಮುಂದಿಡುವ ಜವಾಬ್ದಾರಿ ಇವರದ್ದು.
ಸಂಪರ್ಕಿಸಿ: []

ನಾಗರಾಜ್ ನೇರಿಗೆ

ಹಿರಿಯ ಅಂಕಣಕಾರರು / Columnist)
ಪರಿಚಯ: ಕೃಷಿ, ಸ್ಥಳೀಯ ಸಂಸ್ಕೃತಿ, ತಂತ್ರಜ್ಞಾನ ಮತ್ತು ವಿಶೇಷ ಲೇಖನಗಳನ್ನು ಬರೆಯುವಲ್ಲಿ ಇವರು ಪರಿಣಿತರು. ವಿಜಯ ಕರ್ನಾಟಕದಂತಹ ದೊಡ್ಡ ಪತ್ರಿಕೆಯಲ್ಲಿ ಎರಡು ದಶಕಗಳ ಕಾಲ ರೆಸಿಡೆಂಟ್ ಎಡಿಟರ್​ ಆಗಿ ಕಾರ್ಯ ನಿರ್ವಹಿಸಿರುವ ಹಿರಿಯ ಪತ್ರಕರ್ತರು, ನಮ್ಮ ಆಹ್ವಾನ ಮನ್ನಿಸಿ ಅವರು ಬರೆಯುವ ವಿಶೇಷ ಲೇಖನಗಳನ್ನು ನಮ್ಮಲ್ಲಿ ಪ್ರಕಟಿಸಲು ಅಕವಾಶ ನೀಡಿದ್ದಾರೆ.

ನಮ್ಮೊಂದಿಗೆ ಕೈಜೋಡಿಸಿ (Join Our Team):
ನೀವು ಕೂಡ ಉತ್ಸಾಹಿ ಬರಹಗಾರರಾಗಿದ್ದರೆ, ಅಥವಾ ನಿಮ್ಮ ಭಾಗದ ಸುದ್ದಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಬಯಸಿದರೆ, ದಯವಿಟ್ಟು ನಮ್ಮ ‘Contact Us’ ಪುಟದ ಮೂಲಕ ನಮ್ಮನ್ನು ಸಂಪರ್ಕಿಸಿ.