KARNATAKA NEWS/ ONLINE / Malenadu today/ SHIVAMOGGA / Apr 22, 2023
ಶಿವಮೊಗ್ಗ/ ದುಷ್ಕೃರ್ಮಿಗಳಿಂದ ಕೊಲೆಯಾದ ಹಿಂದೂ ಹರ್ಷ ನ ವಿಚಾರ ಇದೀಗ ಮತ್ತೆ ಮುನ್ನಲೆಗೆ ಬರುತ್ತಿದೆ. ಚುನಾವಣಾ ಪ್ರಚಾರದ ನಡುವೆ ಇವತ್ತು ಹರ್ಷನ ಮನೆಗೆ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ರವರು ಭೇಟಿಕೊಟ್ಟಿದ್ದರು
ಆರತಿ ಎತ್ತಿ ಸ್ವಾಗತಿಸಿದ ಹರ್ಷ ಸಹೋದರಿ
ಮನೆಗೆ ಆಗಮಿಸುತ್ತಲೇ ಹರ್ಷನ ತಾಯಿ ಹಾಗೂ ಹರ್ಷನ ಸಹೋದರಿ ಚನ್ನಬಸರಪ್ಪನವರಿಗೆ ಶಾಲು ಹಾಕಿ ಆರತಿ ಎತ್ತಿ ಸ್ವಾಗಿಸಿದರು.
ಅಲ್ಲದೆ ನಾನು ಸಹ ಬಿಜೆಪಿಗೆ ಸೇರುತ್ತೇನೆ ಎಂದು ಹರ್ಷನ ಸಹೋದರಿ ಹೇಳಿದ್ದು, ಚೆನ್ನಬಸಪ್ಪರವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಅಲ್ಲದೆ ನಿಮ್ಮ ಮಕ್ಕಳ ಹಾಗೆ , ನಿಮ್ಮ ಪರವಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ತಮ್ಮನಿಗೆ ಆಗಿದ್ದು ಬೇರೆಯಾರಿಗೂ ಆಗಬಾರದು
ನಾವೆಲ್ಲರೂ ಬಿಜೆಪಿಗೆ ಜೀವ ಪಣಕ್ಕಿಟ್ಟು ನಿಮ್ಮ ಪರವಾಗಿ ಕೆಲಸ ಮಾಡುತ್ತೇವೆ ಎಂದ ಹರ್ಷನ ಸಹೋದರಿ ಅಶ್ವಿನಿ ನನ್ನ ತಮ್ಮನಿಗೆ ಬಂದ ಸಾವು ಯಾವ ಯುವಕನಿಗೂ ಬರಬಾರದು ಎಂದು ಮನವಿಮಾಡಿದ್ರು.
ರಾಷ್ಟ್ರ ಕಾರ್ಯ ಈಶ್ವರಿ ಕಾರ್ಯ
ಇದೇ ಸಂದರ್ಭದಲ್ಲಿ ಮಾತನಾಡಿದ ಚನ್ನಬಸಪ್ಪ, ಹರ್ಷ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದ. ಅವರ ಕುಟುಂಬಸ್ಥರು ಅದನ್ನು ಮುಂದುವರಿಸಿದ್ಧಾರೆ.
ಇದನ್ನ ಈಶ್ವರಿ ಕಾರ್ಯ ಎನ್ನುತ್ತೇವೆ. ಇದು ಕೂಡ ರಾಷ್ಟಕಟ್ಟುವ ಕೆಲಸವಾಗಿದೆ, ಎರಡು ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ.
ಈ ನಿಟ್ಟಿನಲ್ಲಿ ಹರ್ಷನ ಕುಟುಂಬಸ್ಥರು ನಮ್ಮೊಂದಿಗಿದ್ದಾರೆ. ಅವರು ಪಕ್ಷ ಇನ್ನೂ ಸೇರಬೇಕಾಗಿಲ್ಲ. ಅದಾಗಲೇ ಪಕ್ಷದಲ್ಲಿಯೇ ಇದ್ದು ಕೆಲಸ ಮಾಡುತ್ತಿದ್ದಾರೆ ಎಂದಿದ್ಧಾರೆ.
