ಮುಸ್ಲಿಮ್​ ಪರವಾಗಿ ನಿಲ್ಲುವ ಅಭ್ಯರ್ಥಿಗೆ ಮತ ಬೆಂಬಲ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Apr 25, 2023 GOOGLE NEWS


ಶಿವಮೊಗ್ಗ  ಸದ್ಯ ಕರ್ನಾಟಕ ವಿಧಾನಸಭಾ ಚುನಾವಣೆ ಶಿವಮೊಗ್ಗದಲ್ಲಿ ಬೇರೆಯದ್ದೆ ಮಜಲು ಪಡೆದುಕೊಳ್ತಿದೆ. ಲಿಂಗಾಯತ ಹಾಗೂ ಮುಸ್ಲಿಮ್​ ಮತಗಳು ನಿರ್ಣಾಯಕವಾಗುತ್ತಿದ್ದು, ಶಿವಮೊಗ್ಗ ನಗರ ಕ್ಷೇತ್ರ ಸಾಕಷ್ಟು ಕುತೂಹಲ ಮೂಡಿಸಿದೆ. 

ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ತಮಗೆ ಒಂದೇ ಒಂದು ಮುಸ್ಲಿಮ್ ವೋಟು ಬೇಡ ಎಂದಿರುವ ವಿಚಾರ ಈಗಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ. 

ಇದರ ನಡುವೆ  ಮುಸಲ್ಮಾನರ ಪರ ಧ್ವನಿ ಎತ್ತುವವರಿಗೆ ಬೆಂಬಲ ನೀಡುವುದಾಗಿ  ಮುಸ್ಲಿಮ್ ಡೆವಲಪ್‌ಮೆಂಟ್ ಫೋರಂ ತಿಳಿಸಿದೆ

ರಾಜ್ಯದಂತ ಮುಸ್ಲಿಮ್ ಡೆವಲಪೈಂಟ್ ಫೋರಂ ರಾಜ್ಯ ದಲ್ಲಿ ವಿವಿಧ ಕಡೆ ಮುಸ್ಲಿಂ ಸಮಾಜದ ಏಳಿಗೆಗಾಗಿ ಅಭ್ಯರ್ಥಿಗಳ ಮುಂದೆ ಕೆಲವು ಬೇಡಿಕೆ ಮುಂದಿಟ್ಟಿದೆ. 

ಬೇಡಿಕೆಗೆ ಒಪ್ಪಿದ ಅಭ್ಯರ್ಥಿಗೆ ತಮ್ಮ ಬೆಂಬಲ ಸೂಚಿಸುವ ಮೂಲಕ ಅವರ ಗೆಲುವಿಗಾಗಿ ಕಾರ್ಯ ತಂತ್ರ ರೂಪಿಸಲು ನಿರ್ಧರಿಸಿದೆ ಎಂದು ಫೋರಂನ ಸಂಚಾಲಕ ಮೊಹಮ್ಮದ್ ವಾಸಿಕ್ ತಿಳಿಸಿದ್ದಾರೆ. 

ನಾವು ಬೆಂಬಲಿಸುವ ಅಭ್ಯರ್ಥಿಗಳು ,  ಮುಸಲ್ಮಾನರಿಗೆ ಸಂವಿಧಾನದ  ಅಡಿಯಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ನ್ಯಾಯ ಒದಗಿಸಬೇಕು 

ಹಾಗೂ, ಶಿವಮೊಗ್ಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಂವಿಧಾನಿಕ ಚೌಕಟ್ಟಿನಡಿಯಲ್ಲಿ ಕೆಲಸ ಮಾಡಬೇಕು ಎಂದಿದ್ದಾರೆ. 

ರಾಜ್ಯದಲ್ಲಿ ಮುಸಲ್ಮಾನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಅಭ್ಯರ್ಥಿಯನ್ನು ಮುಸ್ಲಿಮ್ ಡೆವಲಪ್ ಮೆಂಟ್ ಫೋರಂ ಬೆಂಬಲಿಸಲಿದೆ ಎಂದು ಫೋರಂ ತಿಳಿಸಿದ್ದು, ಈ ಸಂಬಂಧ ನಿನ್ನೆ ಸುದ್ದಿಗೋಷ್ಟಿ ನಡೆಸಲಾಗಿದೆ.

ಪ್ರೆಸ್​ ಮೀಟ್​ನಲ್ಲಿ ಫೋರಂನ ಸಂಚಾಲಕರಾದ ಮೊಹಮ್ಮದ್ ವಾಸಿಕ್, ಇರ್ಫಾನ್ ರಜ್ಜಿ ಮೊಹಮ್ಮದ್ ಲಿಯಾಖತ್, ಸಯ್ಯದ್ ಮೊಹಮ್ಮದ್ ಮೊದಲಾದವರಿದ್ದರು. 

Malenadutoday.com Social media

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor