ಡಿಪ್ಲೋಮೋ ಕೋರ್ಸ್​ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 % ಉದ್ಯೋಗಾವಕಾಶ/ ವಿವರ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Apr 25, 2023 GOOGLE NEWS


ಶಿವಮೊಗ್ಗಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಶಿವಮೊಗ್ಗ ಕೇಂದ್ರದಲ್ಲಿ 2023-24 ನೇ ಸಾಲಿನ ಡಿಪ್ಲೊಮಾ ಇನ್ ಟೂಲ್ ಡೈ ಮೇಕಿಂಗ್ ಕೋರ್ಸಿಗೆ ಅರ್ಜಿ ಆಹ್ವಾನಿಸಲಾಗಿದೆ. 

ಪಿಯುಸಿ(ಸೈನ್ಸ್) ಹಾಗೂ ಐಟಿಐ (ಫಿಟ್ಟರ್, ಟರ್ನರ್ ಮಷಿನಿಸ್ಟ್) ಪಾಸಾದ ವಿದ್ಯಾರ್ಥಿಗಳಿಗೆ 2ನೇ ವರ್ಷದ ಡಿಪ್ಲೊಮಾ ತರಬೇತಿಗೆ ನೇರ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಜಿಟಿಟಿಸಿ ಶಿವಮೊಗ್ಗ ಕೇಂದ್ರ ಇಲ್ಲಿ ಪಡೆಯಬಹುದು. ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಪ್ರವೇಶ ಕಲ್ಪಿಸಲಾಗುವುದು. 

ಹಾಗು ತರಬೇತಿ ಪೂರ್ಣಗೊಂಡ ಕೂಡಲೇ ಶೇ.100 ಉದ್ಯೋಗಾವಕಾಶ ಕಲಿಸಲಾಗುವುದು. ಬಾಲಕರ ವಸತಿ ನಿಲಯದ ಸೌಲಭ್ಯವಿದೆ. 

ಹೆಚ್ಚಿನ ಮಾಹಿತಿಗೆ ಘಟಕ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರು ಜಿಟಿಟಿಸಿ ಕೇಂದ್ರ, ಪ್ಲಾಟ್ ಸಿಎ-38, ನಿಧಿಗೆ, ಕೆಐಡಿಬಿ ಕೈಗಾರಿಕಾ ಪ್ರದೇಶ ಶಿವಮೊಗ್ಗ 5777222 .

ಫೋನ್​: 9429530914, 9448307027, 9880141054, 9449286543, 8904492741, 9945561526 ನ್ನು ಸಂಪರ್ಕಿಸಬಹುದೆಂದು ಜಿಟಿಟಿಸಿ ಪ್ರಾಂಶುಪಾಲರು ತಿಳಿಸಿದ್ದಾರೆ.

Malenadutoday.com Social media

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor