Juice Jacking Cyber Crime / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ಹ್ಯಾಕಿಂಗ್ ಹೇಗೆ ಆಗುತ್ತೆ ಅಂತಾ ಹೇಳೋದಕ್ಕೆ ಆಗೋದಿಲ್ಲ. ಈ ಪೈಕಿ ಸುಲಭವಾಗಿ ಹ್ಯಾಕ್ ಆಗುವ ಅಪಾಯ ಎದುರಾಗೋದು ಜ್ಯೂಸ್ ಜಾಕಿಂಗ್ ನಲ್ಲಿ.. ಇದರ ಬಗ್ಗೆ ಜಾಗೃತಿ ಮೂಡಿಸುವ ವಿವರ ಇಲ್ಲಿದೆ
ಸಾಮಾನ್ಯವಾಗಿ ಜನರು ಪ್ರಯಾಣದ ವೇಳೆ ಮೊಬೈಲ್ ಚಾರ್ಜ್ ಇಲ್ಲ ಅಂತಾ ಎಲ್ಲಂದರಲ್ಲಿ ಎಲ್ಲಿ ಚಾರ್ಜ್ ಹಾಕುತ್ತಾರೆ. ಉಚಿತವಾಗಿ ಸಿಗುವ ಸಾರ್ವಜನಿಕ ಯುಎಸ್‌ಬಿ (USB) ಪೋರ್ಟ್‌ಗಳನ್ನು ಬಳಸುವವರು ಇದ್ದಾರೆ. ಆದರೆ ಮೊಬೈಲ್ ಚಾರ್ಜ್‌ಗೆ ಹಾಕುವ ಮುನ್ನ ಎಚ್ಚರ ವಹಿಸುವುದು ಅತ್ಯಗತ್ಯ., ಸಾರ್ವಜನಿಕ ಸ್ಥಳಗಳಾದ ವಿಮಾನ ನಿಲ್ದಾಣ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಬೃಹತ್ ಮಾಲ್ ಹಾಗೂ ಹೋಟೆಲ್‌ಗಳಲ್ಲಿ ಅಳವಡಿಸಲಾಗಿರುವ ಉಚಿತ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಬಳಸಿ ಮೊಬೈಲ್ ಚಾರ್ಜ್ ಮಾಡುವಾಗ, ಅದು ಸೈಬರ್ ವಂಚನೆಗೆ ದಾರಿ ಮಾಡುವ ಸಾಧ್ಯತೆ ಇದೆ.
ಇಂತಹ ಯುಎಸ್‌ಬಿ ಪೋರ್ಟ್‌ಗಳ ಮೂಲಕ ಸೈಬರ್ ವಂಚಕರು ನಿಮ್ಮ ಮೊಬೈಲ್‌ನಲ್ಲಿರುವ ಖಾಸಗಿ ಮಾಹಿತಿ ಕದಿಯುವ ಸಾಧ್ಯತೆ ಇರುತ್ತದೆ. ಇದನ್ನೆ ‘ಜ್ಯೂಸ್ ಜಾಕಿಂಗ್’ ಅಂತಾ ಕರೆಯಲಾಗುತ್ತೆ. ಸಾರ್ವಜನಿಕ ಚಾರ್ಜಿಂಗ್ ಪೋರ್ಟ್‌ಗಳನ್ನು ಬಳಸುವಾಗ , ಡೇಟಾ ಕೇಬಲ್ ಕೇವಲ ಬ್ಯಾಟರಿ ಚಾರ್ಜ್ ಮಾಡುವುದಷ್ಟೆ ಅಲ್ಲದೆ ಡೇಟಾ ವರ್ಗಾವಣೆ (Data Transfer) ಮಾಡಲು ಕೂಡ ಅವಕಾಶ ನೀಡುತ್ತದೆ.
ಇಂತಹ ಟೆಕ್ನಿಕಲ್ ವಿಷಯವನ್ನ ಬಂಡವಾಳ ಮಾಡಿಕೊಳ್ಳುವ ಸೈಬರ್ ಕ್ರಿಮಿನಲ್‌ಗಳು, ಅದೇ ಪೋರ್ಟ್ ಮೂಲಕ ನಿಮ್ಮ ಮೊಬೈಲ್‌ಗೆ ಅಪಾಯಕಾರಿ ಮಾಲ್‌ವೇರ್ (Malware) ಗಳನ್ನು ಸೇರಿಸುತ್ತಾರೆ. ಬಳಿಕ ಅದರಿಂದ ಮೊಬೈಲ್‌ನಲ್ಲಿರುವ ಖಾಸಗಿ ಫೋಟೋ, Contacts, ಬ್ಯಾಂಕಿಂಗ್ ಡಿಟೇಲ್ಸ್ , ಪಾಸ್‌ವರ್ಡ್ ಸೇರಿದಂತೆ ವಿವಿಧ ಮಾಹಿತಿಯನ್ನ ತಮ್ಮ ಸೋರ್ಸ್ ಟ್ರಾನ್ಸಫರ್ ಮಾಡಿಕೊಳ್ತಾರೆ.
ಹೀಗೆ ಕದ್ದ ವೈಯಕ್ತಿಕ ಡೇಟಾವನ್ನು ಸೈಬರ್ ವಂಚಕರು ನಿಮ್ಮ ವಿರುದ್ಧವೇ ಅಸ್ತ್ರವಾಗಿ ಬಳಸಿಕೊಂಡು ಬ್ಲಾಕ್‌ಮೇಲ್ ಮಾಡುವ ಅವಕಾಶ ಇರುತ್ತದೆ. ಹಾಗಾಗಿ ಸಾರ್ವಜನಿಕ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳನ್ನು ಬಳಸುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ . ಅಲ್ಲದೆ ಪವರ್ ಬ್ಯಾಂಕ್ ಬಳಸುವುದು ಉತ್ತರಮ ಅಥವಾ ನೇರವಾಗಿ ಎಲೆಕ್ಟ್ರಿಕ್ ಪ್ಲಗ್ ಪಾಯಿಂಟ್‌ಗಳಿಗೆ ಅಡಾಪ್ಟರ್ ಮೂಲಕ ಚಾರ್ಜ್ ಮಾಡುವುದು ಒಳ್ಳೆಯದು.
ಅಂದಹಾಗೆ, ಈ ಸಂಬಂಧ ಶಿವಮೊಗ್ಗ ಪೊಲೀಸ್ ಇಲಾಖೆ ಯಾವುದೇ ರೀತಿಯ ಸೈಬರ್ ವಂಚನೆ ಕಂಡುಬಂದಲ್ಲಿ ಅಥವಾ ತುರ್ತು ಸಹಾಯಕ್ಕಾಗಿ ಸಾರ್ವಜನಿಕರು ತಕ್ಷಣವೇ ಉಚಿತ ಸಹಾಯವಾಣಿ 112 ಅಥವಾ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 8277982900 ಅನ್ನು ಸಂಪರ್ಕಿಸುವಂತೆ ಇಲಾಖೆ ಸಾರ್ವಜನಿಕರಲ್ಲಿ ವಿನಂತಿಸಿದೆ.
