ದಾರಿಯಲ್ಲಿ ಹೋಗುತ್ತಿದ್ದಾಗ ಎದುರಾದ ಕಾಟಿ ಹಿಂಡು! ಮರ ಹತ್ತಿದ ಮಂದಿ! ಜೀವ ಉಳಿದಿದ್ದೇ ವಿಶೇಷ

ಹಂಚಿಕೊಳ್ಳಿ
WhatsApp Facebook X Telegram
Wild Gaurs Chase Migrant Workers in Koppa, Chikkamagaluru Viral Video
Wild Gaurs Chase Migrant Workers in Koppa, Chikkamagaluru Viral VideoWild Gaurs Chase Migrant Workers in Koppa, Chikkamagaluru Viral Video

ಸುದ್ದಿಯ ಸ್ಥಳ: Chikkamagaluru, Karnataka

ಕೊಪ್ಪ (ಚಿಕ್ಕಮಗಳೂರು): ದಿನಸಿ ಸಾಮಾನು ತರಲು ತೆರಳಿದ್ದ ವಲಸೆ ಕಾರ್ಮಿಕರನ್ನು ಕಾಟಿ ಹಿಂಡು ಬೆನ್ನಟ್ಟಿದ ಘಟನೆ ಇಲ್ಲಿ ವರದಿಯಾಗಿದೆ. ಘಟನೆಯಲ್ಲಿ ಪ್ರಾಣ ಉಳಿಸಿಕೊಳ್ಳಲು ಕಾರ್ಮಿಕರು ಮರವೇರಿ ಕುಳಿತಿದ್ದರು.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹೆಗ್ಗಾರು ಕೂಡಿಗೆ ಗ್ರಾಮದ ಎಸ್ಟೇಟ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು ದಿನಸಿ ತರಲೆಂದು ತೋಟದ ದಾರಿಯಲ್ಲಿ ಹೋಗುತ್ತಿದ್ದರು. ಈ ವೇಳೆ ಕಾಡು ಕೋಣಗಳು ಎದುರಾಗಿವೆ. ಭಯದಲ್ಲಿ ಅವು ಸಹ ದಾಳಿಗೆ ಮುಂದಾಗಿವೆ.

ಹೆದರಿದ ಕಾರ್ಮಿಕರು ಅಲ್ಲೇ ಇದ್ದ ಮರ ಹತ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರದ ಕೆಳಗೆ ಕೆಲ ಹೊತ್ತು ಬೀಡುಬಿಟ್ಟಿದ್ದ ಕಾಡುಕೋಣಗಳ ಕಂಡು ಕಾರ್ಮಿಕರು ಆತಂಕಕ್ಕೊಳಗಾಗಿ ಮರದ ಮೇಲಿಂದಲೇ ಈ ದೃಶ್ಯ ಸೆರೆಹಿಡಿದಿದ್ದಾರೆ. ಅ ವಿಡಿಯೋ ವೈರಲ್ ಆಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor