ದೀಪಾವಳಿ ಬಾಡೂಟಕ್ಕೆ ಕಡವೆ, ಕಾಡುಕುರಿ ಶಿಕಾರಿ, ಬಾಡು ಹಂಚಿಕೊಳ್ಳುತ್ತಿದ್ದಾಗ ಬಂತು ಜೀಪು! ಎದುರಾಯ್ತು ಶಾಕ್!

ಹಂಚಿಕೊಳ್ಳಿ
WhatsApp Facebook X Telegram
Chikkamagaluru Wildlife Poaching Case One Arrested Near Kottigehara
Chikkamagaluru Wildlife Poaching Case One Arrested Near Kottigehara

ಸುದ್ದಿಯ ಸ್ಥಳ: Chikkamagaluru, Karnataka

ಮಲೆನಾಡು ಟುಡೆ ಸುದ್ದಿ | ಚಿಕ್ಕಮಗಳೂರು | ದೀಪಾವಳಿ ಬಾಡೂಟಕ್ಕಾಗಿ ಕಡವೆ ಹಾಗೂ ಕಾಡುಕುರಿಯನ್ನು ಬೇಟೆಯಾಡಿ, ಮಾಂಸ ಪಾಲು ಮಾಡ್ತಿದ್ದಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಓರ್ವನನ್ನ ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಸಮೀಪ ಈ ಪ್ರಕರಣ ಬೆಳಕಿಗೆ ಬಂದಿದ್ದು, ಕಾರ್ಯಾಚರಣೆ ವೇಳೆ ಮೂವರು ಪರಾರಿಯಾಗಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ, ಕೊಟ್ಟಿಗೆಹಾರ ಸಮೀಪದ ಕಾಡಲ್ಲಿ ಕಡವೆ ಹಾಗೂ ಕಾಡುಕುರಿಯನ್ನು ಬೇಟೆಯಾಡಿ, ಅವುಗಳ ಮಾಂಸವನ್ನ ಗ್ರಾಮದ ನಿವಾಸಿಯೊಬ್ಬರ ಮನೆಗೆ ತರಲಾಗಿತ್ತು. ಅಲ್ಲಿಯೇ ಅದನ್ನ ಪಾಲು ಮಾಡಿಕೊಳ್ಳುತ್ತಿದ್ದರು. ಈ ವೇಳೇ ಫಾರೆಸ್​ನೋರು ರೇಡ್ ಮಾಡಿದ್ದಾರೆ. ಮನೆಮಾಲೀಕನನ್ನ ಬಂಧಿಸಿದ್ದಾರೆ. ಉಳಿದವರು ಎಸ್ಕೇಪ್ ಆಗಿದ್ದಾರೆ. ಎರಡು ನಾಡ ಬಂದೂಕುಗಳನ್ನ ಸಹ ಸೀಜ್ ಮಾಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor