ಶಿವಮೊಗ್ಗ: ಬಿಸಿಸಿಐ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಕರ್ನಾಟಕದ ಪರವಾಗಿ ಆಡಲಿದ್ದಾರೆ ಶಿವಮೊಗ್ಗ ಆಯುಷ್ ವೈ.ಎಸ್.

ಹಂಚಿಕೊಳ್ಳಿ
WhatsApp Facebook X Telegram
Shivamogga Cricketer Ayush Selected for BCCI Vijay Merchant Trophy Karnataka Team
Shivamogga Cricketer Ayush Selected for BCCI Vijay Merchant Trophy Karnataka Team

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಬಿಸಿಸಿಐ ಪ್ರತಿವರ್ಷ ಆಯೋಜಿಸುವ ವಿಜಯ ಮರ್ಚೆಂಟ್ ಟ್ರೋಫಿ ಅಂಡರ್-16 ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಸಲ ನಮ್ಮ ಶಿವಮೊಗ್ಗದ ಹುಡುಗನೊಬ್ಬ ಪಾಲ್ಗೊಳ್ಳಲಿದ್ದಾನೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿರುವ ಆಟಗಾರರ ಪಟ್ಟಿಯಲ್ಲಿ ಶಿವಮೊಗ್ಗದ ಪ್ರತಿಭಾವಂತ ಯುವ ಕ್ರಿಕೆಟಿಗ ಆಯುಷ್ ವೈ.ಎಸ್. ಸ್ಥಾನ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಲಖನೌದಲ್ಲಿ ಪಂದ್ಯಾವಳಿ ನಡೆಯಲಿದ್ದು, ಇದೇ ನವೆಂಬರ್ 14 ರಿಂದ ಡಿಸೆಂಬರ್ 6 ರವರೆಗೆ ಟೂರ್ನಿ ನಡೆಯಲಿದೆ.

ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಆಡಲಿರುವ ಆಯುಷ್

ಇನ್ನೂ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿರುವ ಆಯುಷ್ ಬಗ್ಗೆ ಹೇಳುವುದಾದರೆ, ಇವರು ಪ್ರತಿಷ್ಠಿತ ಎಚ್ಚರಿಕೆ ಪತ್ರಿಕೆಯ ಸಂಪಾದಕ ವೈ.ಕೆ. ಸೂರ್ಯನಾರಾಯಣ ಹಾಗೂ ಶಿಕ್ಷಕಿ ವತ್ಸಲಾ ದಂಪತಿಯ ಕಿರಿಯ ಪುತ್ರ. ಶಿವಮೊಗ್ಗದ ಡೈಮಂಡ್ ಕ್ರಿಕೆಟ್ ಕ್ಲಬ್‌ನಲ್ಲಿ ತರಬೇತಿ ಪಡ್ಕೊಳ್ತಿದ್ದಾರೆ. ವಿಕಾಸ ಸ್ಕೂಲ್​ನ 10ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. 2024ರ ಜನವರಿಯಲ್ಲಿ ಬಿಸಿಸಿಐ ವತಿಯಿಂದ ಪುದುಚೇರಿಯಲ್ಲಿ ಆಯೋಜಿಸಲಾಗಿದ್ದ 14 ವರ್ಷ ವಯೋಮಿತಿಯ ದಕ್ಷಿಣ ವಲಯ ಕ್ರಿಕೆಟ್ ಪಂದ್ಯಾವಳಿಗೂ ಆಯುಷ್ ಆಯ್ಕೆಯಾಗಿ ಆಡಿದ್ದ,

ಆಯುಷ್ ಆಯ್ಕೆಯಾಗಿರುವ ಬಗ್ಗೆ ಹಲವರು ಸಂತಸ ವ್ಯಕ್ತಪಡಿಸಿದ್ದು, ಕೆಎಸ್‌ಸಿಎ ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್. ಅರುಣ್, ವಿಕಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎ.ಜೆ. ರಾಮಚಂದ್ರ, ಮುಖ್ಯೋಪಾಧ್ಯಾಯ ಗೋಪಾಲ ಕೃಷ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಡೈಮಂಡ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ರಾಜೇಂದ್ರ ಕಾಮತ್, ಕಾರ್ಯದರ್ಶಿ ಸುಕುಮಾರ್ ಪಟೇಲ್ ಹಾಗೂ ಹಿರಿಯ ಪತ್ರಕರ್ತರು ಮತ್ತು ಕ್ರೀಡಾ ಪ್ರಮುಖರು ಅಭಿನಂದನೆಗಳನ್ನು ಕೋರಿದ್ದಾರೆ. ಬಿಸಿಸಿಐ ಮಟ್ಟದ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ಆಯುಷ್ ಅವರು ಮುಂಬರುವ ಪಂದ್ಯಗಳಲ್ಲಿ ಅತ್ಯುತ್ತಮ ಸಾಮರ್ಥ್ಯ ಮೆರೆಯಲಿ ಎಂದು ಕ್ರೀಡಾಭಿಮಾನಿಗಳು ಹಾರೈಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor