15 ವರ್ಷ ಕಷ್ಟಪಟ್ಟು ಬೆಳಸಿದ್ದ ಅಡಿಕೆ ಮರಗಳಿಗೆ ಕತ್ತಿ ಏಟು! ಸಂಸದರ ಎದುರು ಗೊನೆ ಹಿಡಿದು ಕಣ್ಣೀರಿಟ್ಟ ಕುಟುಂಬ! ಸೊರಬದಲ್ಲಿ ಏನಿದು ನಡೆದಿದ್ದು!

ಹಂಚಿಕೊಳ್ಳಿ
WhatsApp Facebook X Telegram
MP BY Raghavendra and Hartalu Halappa Console Farmers After Officials Chop 15-Year-Old Arecanut Trees in Soraba
MP BY Raghavendra and Hartalu Halappa Console Farmers After Officials Chop 15-Year-Old Arecanut Trees in Soraba

ಮಲೆನಾಡು ಟುಡೆ ಸುದ್ದಿ / ಸೊರಬ / ಕಷ್ಟಪಟ್ಟು ವರ್ಷಗಟ್ಲೇ ದುಡಿದು ಬೆಳಸಿದ ಮರವನ್ನ ಯಾರೋ ಇದ್ದಕ್ಕಿದ್ದಂತೆ ಕಡಿದು ಹಾಕಿದರೆ, ಎಂತವರಿಗೆ ಆದರೂ ಮನಸ್ಸು ಚಿತ್ ಅನಿಸುತೆ. ಅಂತಹದ್ದೊಂದು ಘಟನೆ ತಮ್ಮ ಮನೆಯಲ್ಲಿ ನಡೆಯುತ್ತೆ ಅಂತಾ ಆ ಕುಟುಂಬ ಅಂದುಕೊಂಡಿರಲಿಲ್ಲ. ಆದರೂ ನಡೆದು ಹೋಗಿದೆ. ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ತೇವರತೆಪ್ಪ ಗ್ರಾಮದಲ್ಲಿ, 15 ವರ್ಷಗಳ ಕಾಲ ಕಷ್ಟಪಟ್ಟು ಬೆಳೆಸಿದ್ದ ಫಸಲು ನೀಡುತ್ತಿದ್ದ ಅಡಿಕೆ ಮರಗಳನ್ನು ಅಧಿಕಾರಿಗಳು ಕಾರ್ಯಾಚರಣೆ ಹೆಸರಲ್ಲಿ ಕಡಿದು ಹಾಕಿರುವ ಆರೋಪ ಕೇಳಿಬಂದಿದೆ.

ಉತ್ತಮ ಇಳುವರಿ ನೀಡುತ್ತಿದ್ದ ಅಡಿಕೆ ಮರಗಳನ್ನು ಯಾವುದೇ ಪೂರ್ವ ನೋಟಿಸ್ ನೀಡದೆ, ಅಧಿಕಾರಿಗಳು ಜೆಸಿಬಿ ಹಾಗೂ ಇತರ ಮಷಿನ್ ಬಳಸಿ ಕಡಿದು ಹಾಕಿದ್ದಾರೆ. ಫಸಲು ಪಡೆಯುವುದಕ್ಕೂ ಅವಕಾಶ ನೀಡದೇ ಎಳೆಗೊನೆಗಳ ಜೊತೆಗೆ ಹಿಂಗಾರ ಬಿಟ್ಟಿರುವ ಮರಗಳನ್ನ ಸಹ ಉರುಳಿಸಿದ್ದಾರೆ ಎಂಬುದು ಆರೋಪ. ಇನ್ನೂ ಈ ವಿಷಯ ತಿಳಿದು . ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ರೈತರಿಗೆ ಸಾಂತ್ವನ ಹೇಳಿದರು.

ತೇವರತೆಪ್ಪ ಗ್ರಾಮದ ಅಡಿಕೆ ತೋಟಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡರು ನೆಲಕ್ಕುರುಳಿದ ಅಡಿಕೆ ಮರಗಳನ್ನು ನೋಡಿ ಛೇ….ಏನೀದು ಎಂದರು. ಸಂಸದರು ಬರುತ್ತಲೇ ರೈತರು ಅಡಿಕೆ ಗೊನೆಗಳನ್ನ ತೋರಿಸಿ ಕಣ್ಣೀರಿಟ್ಟರು. ಅವರಿಗೆ ಸಾಂತ್ವನ ಹೇಳಿದ ಮುಖಂಡರು, ರೈತರ ಹೆಗಲ ಮೇಲೆ ಕೈಹಾಕಿ ಧೈರ್ಯ ತುಂಬಿದರು. ಇದೇ ವೇಳೆ, ಸಂಕಷ್ಟಕ್ಕೆ ಸಿಲುಕಿದ ರೈತ ಕುಟುಂಬಗಳಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ವೈಯಕ್ತಿಕವಾಗಿ ಚೆಕ್‌ಗಳನ್ನು ವಿತರಿಸಿದರು

ಇನ್ನೂ ಇದೇ ವೇಳೆ ಬಿಜೆಪಿ ಸೊರಬ ಮಂಡಲದ ವತಿಯಿಂದ ತಾಲೂಕು ಅಧ್ಯಕ್ಷ ಪ್ರಕಾಶ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಹರತಾಳು ಹಾಲಪ್ಪ ಸೇರಿದಂತೆ ನೂರಾರು ರೈತರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ರೈತರು 15 ವರ್ಷಗಳ ಕಾಲ ಮಕ್ಕಳಂತೆ ಸಾಕಿ ಬೆಳೆಸಿದ ಮರಗಳನ್ನು ಕಡಿದು ಹಾಕಿರುವುದು ಅತ್ಯಂತ ಖಂಡನೀಯ. ಈ ಘಟನೆಯ ಕುರಿತು ಸರ್ಕಾರ ತಕ್ಷಣವೇ ನಿಷ್ಪಕ್ಷಪಾತವಾದ ಉನ್ನತ ಮಟ್ಟದ ತನಿಖೆ ನಡೆಸಬೇಕು. ಜೀವನೋಪಾಯ ಕಳೆದುಕೊಂಡಿರುವ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು. ರೈತರ ಬದುಕು ಮತ್ತು ಜೀವನೋಪಾಯದ ರಕ್ಷಣೆಗೆ ನಾವು ಸದಾ ಬದ್ಧರಾಗಿದ್ದೇವೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ರು.

ಇವೆಲ್ಲದರ ನಡುವೆ ನೆಲಕ್ಕುರುಳಿರುವ ಮರಗಳು ಹಾಗೂ ಅದರಲ್ಲಿರುವ ಎಳೆಯ ಅಡಿಕೆ ಗೊನೆಗಳನ್ನು ಹಿಡಿದುಕೊಂಡು ರೈತ ಮಹಿಳೆಯರು ಹಾಗೂ ವೃದ್ಧ ರೈತರು ಕಣ್ಣೀರು ಹಾಕುತ್ತಿರುವ ದೃಶ್ಯ ಎಂಥವರ ಕರುಳನ್ನೂ ಹಿಂಡುವಂತಿತ್ತು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor