ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಕಾರು ಅಪಘಾತ ; ಪ್ರತ್ಯೇಕ ಘಟನೆಗಳಲ್ಲಿ ಇಬ್ಬರ ದುರ್ಮರಣ

ಹಂಚಿಕೊಳ್ಳಿ
WhatsApp Facebook X Telegram
Rising Car Accidents in Shivamogga Elderly Man and Medical Student Killed in Separate Incidents
Rising Car Accidents in Shivamogga Elderly Man and Medical Student Killed in Separate Incidents

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯಲ್ಲಿ ಓಡಾಡುವ ಕಾರುಗಳ ಸಂಖ್ಯೆ ಹೆಚ್ಚಾಯ್ತಾ? ಅಥವಾ ಹೊರಗಡೆಯಿಂದ ಬರುತ್ತಿರುವ ಕಾರುಗಳ ಸಂಖ್ಯೆ ಜಾಸ್ತಿಯಾಯ್ತಾ? ಅಥವಾ ರೋಡ್​ ಗೊತ್ತಾಗುತ್ತಿಲ್ವಾ? ಗೊತ್ತಿಲ್ಲ. ಆದರೆ ಒಂದಂತೂ ನಿಜ. ಇತ್ತೀಚಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾರು ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ/

ಅಜಾಗ್ರತೆ, ಓವರ್​ ಸ್ಪೀಡ್​ ಹಾಗೂ ಹೆವಿ ಕಾನ್ಫಿಡೆನ್ಸ್​ ಮತ್ತು ಡ್ರಂಕ್ ಅಂಡ್​ ಡ್ರೈವ್​ ಜೊತೆಗೆ ಇದೀಗ ಚಳಿಗಾಲ ಆರಂಭವಾಗಿರೋದರಿಂದ ಮಿಸ್ಟ್ ಕೂಡ ಅಪಘಾತಗಳಿಗೆ ಕಾರಣವಾಗ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಎರಡು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳಲ್ಲಿ ಓರ್ವ ವೃದ್ಧ ಹಾಗೂ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ.

ಘಟನೆ 1: ಶಿವಮೊಗ್ಗ ತಾಲೂಕಿನ ವೀರಣ್ಣಬೆನವಳ್ಳಿ ಕ್ರಾಸ್ ಬಳಿ ಸಂಜೆ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ 70 ವರ್ಷದ ವೃದ್ಧರೊಬ್ಬರಿಗೆ ವೇಗವಾಗಿ ಬಂದ ಎರ್ಟಿಗಾ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದ ನಿವಾಸಿ ತಿಪ್ಪೇಶಪ್ಪ ಎಂದು ಗುರುತಿಸಲಾಗಿದೆ. ಕೆಲಸವೊಂದಕ್ಕೆ ಹೋಗಿದ್ದ ತಿಪ್ಪೇಶಪ್ಪ ವಾಪಸ್ ಬರ್ತಾ, ಹೈವೆ ದಾಟುತ್ತಿದ್ದಾಗ ಆಯನೂರು ಕಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಪರಿಣಾಮ ಸ್ಪಾಟ್ ಡೆತ್ ಆಗಿದ್ದಾರೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಘಟನೆ 2: ಮತ್ತೊಂದು ಭೀಕರ ಘಟನೆಯಲ್ಲಿ, ಆಗುಂಬೆ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಎಂಬಿಬಿಎಸ್ ಹಾಗೂ ಎಂಡಿ ವ್ಯಾಸಂಗ ಮಾಡುತ್ತಿದ್ದ 28 ವರ್ಷದ ವೈದ್ಯಕೀಯ ವಿದ್ಯಾರ್ಥಿ ಡಾ. ಚೇತನ್ ಮೃತಪಟ್ಟಿದ್ದಾರೆ. ನವೆಂಬರ್ 1ರ ಮುಂಜಾನೆ ಸುಮಾರು 5.45ರ ಸುಮಾರಿಗೆ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಉಳಿದ ನಾಲ್ವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿಸ್ಟ್ ಹಾಗೂ ಸ್ಪೀಡ್ ಘಟನೆಗೆ ಕಾರಣ ಎನ್ನಲಾಗುತ್ತಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor