ತೀರ್ಥಹಳ್ಳಿ: ಮೀನಿಗೆ ಗಾಳ ಹಾಕ್ತಿದ್ದಾಗ ಬಂಡೆಯ ಮಧ್ಯೆ ಕಾಣ್ತು ರಕ್ತ ಸೋರುತ್ತಿದ್ದ ಪ್ಲಾಸ್ಟಿಕ್ ಚೀಲ, ತೆರೆದು ನೋಡಿದ ಯುವಕರಿಗೆ ಕಾದಿತ್ತು ಶಾಕ್!

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗ ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಶಿವಮೊಗ್ಗ ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ : ತುಂಗಾ ನದಿಯ ಕಲ್ಲು ಬಂಡೆಗಳ ನಡುವೆ ಅಪರಿಚಿತರು ನವಜಾತ ಹೆಣ್ಣು ಶಿಶುವೊಂದನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಎಸೆದು ಹೋಗಿರುವ ಹೃದಯ ವಿದ್ರಾವಕ  ಘಟನೆ ತೀರ್ಥಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. 

ಇಬ್ಬರು ಯುವಕರು ತುಂಗಾ ನದಿಯ ಮಧ್ಯಭಾಗದಲ್ಲಿದ್ದ ಬಂಡೆಯ ಮೇಲೆ ಮೀನು ಗಾಳ ಹಾಕಿ ಹಿಡಿಯಲು ತೆರಳಿದ್ದರು. ಆದರೆ ಆ ಸಮಯದಲ್ಲಿ ಅಲ್ಲಿ ಯಾವುದೇ ವಸ್ತುಗಳು ಇರಲಿಲ್ಲ. ನಂತರ ಮಧ್ಯಾಹ್ನ ಊಟ ಮುಗಿಸಿಕೊಂಡು ಸುಮಾರು 3:00 ಗಂಟೆ ಸಮಯದಲ್ಲಿ ವಾಪಸ್ ಅದೇ ಸ್ಥಳಕ್ಕೆ ತೆರಳಿದಾಗ, ಎರಡು ಬಂಡೆಗಳ ಮಧ್ಯೆ ಒಂದು ಪ್ಲಾಸ್ಟಿಕ್ ಚೀಲ ಸಿಕ್ಕಿಕೊಂಡಿರುವುದು ಇವರ ಗಮನಕ್ಕೆ ಬಂದಿದೆ. ಕುತೂಹಲಗೊಂಡು ಆ ಚೀಲವನ್ನು ಪರಿಶೀಲಿಸಿದಾಗ ಅದರಿಂದ ರಕ್ತ ಸೋರುತ್ತಿರುವುದು ಕಂಡುಬಂದಿದೆ. ಕೂಡಲೇ ಗಾಬರಿಗೊಂಡ ಯುವಕರು, ಪಕ್ಕದಲ್ಲಿದ್ದ ಬಂಡೆಯ ಮೇಲೆ ಆ ಚೀಲವನ್ನು ಇಟ್ಟು ಬಿಚ್ಚಿ ನೋಡಿದ್ದಾರೆ. 

ಆ ಚೀಲದೊಳಗೆ ಒಂದು ಹ್ಯಾಂಡ್‌ಬ್ಯಾಗ್ ಇದ್ದು, ಅದರಲ್ಲಿ ಬಟ್ಟೆಯಿಂದ ಸುತ್ತಲಾದ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಮಗುವನ್ನು ಪರಿಶೀಲಿಸಿದಾಗ, ಅಷ್ಟರಲ್ಲಾಗಲೇ ಮಗು ಮೃತಪಟ್ಟಿರುವುದು ತಿಳಿದಿದೆ. ಈ ಹಿನ್ನೆಲೆ ಯುವಕರು ಕೂಡಲೇ ತೀರ್ಥಹಳ್ಳಿ ಪೊಲೀಸ್​ ಠಾಣೆಗೆ ತೆರಳಿ ದೂರನ್ನು ದಾಖಲಿಸಿದ್ದಾರೆ

ಯಾರೋ ಅಪರಿಚಿತರು ತಮ್ಮ ತಪ್ಪು ಮುಚ್ಚಿಕೊಳ್ಳುವ ಉದ್ದೇಶದಿಂದ ನವಜಾತ ಶಿಶುವನ್ನು ಬಟ್ಟೆ ಹಾಗೂ ಕೈಚೀಲದಲ್ಲಿ ಬಳಿಕ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ತುಂಗಾ ನದಿಗೆ ಎಸೆದಿರುವುದು ತಿಳಿದುಬಂದಿದೆ. ಮಗುವಿನ ಅಸ್ಥಿತ್ವದ ಗುರುತು ಪತ್ತೆ ಮಾಡಿ ಹಾಗೂ ಈ ಕೃತ್ಯಕ್ಕೆ ಕಾರಣರಾದ ಅಪರಿಚಿತರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor