ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಬಗ್ಗೆ ದನಿ ಎತ್ತಿದ್ದ ಕುಮಾರಸ್ವಾಮಿ ವಿರುದ್ಧವೇ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ನೀಡಿರು ಹೇಳಿಕೆಗಳು ಸರಿಯಲ್ಲ. ತಾಕತ್ತಿದ್ದರೆ ಸೀಮಂತ್ ಕುಮಾರ್ ಸಿಂಗ್ ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ನೇರವಾಗಿ ಕಾಂಗ್ರೆಸ್ ಪಕ್ಷ ಸೇರಿಕೊಳ್ಳಲಿ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ವಾಗ್ದಾಳಿ ನಡೆಸಿದ್ದಾರೆ.
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಬಗ್ಗೆ ದನಿ ಎತ್ತಿದ್ದ ಕುಮಾರಸ್ವಾಮಿ ವಿರುದ್ಧವೇ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದರು. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂಬುದು ಗೊತ್ತಾಗಿದೆ ಎಂದ ಅವರು, ಒಬ್ಬ ಅಧಿಕಾರಿಯಾಗಿ ರಾಜಕೀಯ ಮೇಲಾಟ ಮಾಡುವ ಮನಸ್ಥಿತಿ ನಿಮಗೆ ಇದೆ ಎಂದು ಕಿಡಿಕಾರಿದರು. ನೀವು ಪೊಲೀಸ್ ಇಲಾಖೆಯಲ್ಲಿ ಕೇವಲ ಅಧಿಕಾರಿಯಾಗಿ ಇರಬಾರದು, ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡುತ್ತಿರುವ ರಾಹುಲ್ ಗಾಂಧಿ ಪಕ್ಕ ನಿಲ್ಲಬೇಕು, ನಮ್ಮ ರಾಜ್ಯಕ್ಕೆ ನಿಮ್ಮಂತಹ ಅಧಿಕಾರಿ ಅವಶ್ಯಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದಕ್ಕೆ ಯಾವುದನ್ನು ಲಿಂಕ್ ಮಾಡುತ್ತಿದ್ದೀರಾ ನೀವು ಎಂದು ಸೀಮಂತ್ ಕುಮಾರ್ರನ್ನು ಪ್ರಶ್ನಿಸಿದ ಶಾಸಕರು, ಸ್ಟಿಂಗ್ ಆಪರೇಷನ್ ನಲ್ಲಿ ಏನಾಗಿದೆ ಎಂಬುದು ಸಿದ್ಧರಾಮಯ್ಯನವರೇ ವಿವರಿಸಿದ್ದಾರೆ ಎಂದರು. ಸ್ಟಿಂಗ್ ಬಗ್ಗೆ ಯಾರ್ಯಾರು ಏನೇನು ಮಾಡಿದ್ದಾರೆಂಬ ಸ್ಪಷ್ಟ ಮಾಹಿತಿಯಿದೆ ಹಾಗೂ ಇದರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ತಿಳಿಸಿಕೊಟ್ಟಿದ್ದಾರೆ. ಪ್ರಕರಣ ತನಿಖೆ ನಡೆಯುವಾಗ ಪತ್ರಿಕಾಗೋಷ್ಠಿ ಮಾಡಿ ಹೇಳುತ್ತೀರಾ ಎಂದರೆ ಹೇಗೆ? ನೀವೇ ಹೀಗೆ ಮಾಡಿದರೆ, ಪೊಲೀಸ್ ಠಾಣೆಯಲ್ಲಿ ಮಾಡಬಾರದನ್ನೆಲ್ಲಾ ಮಾಡಿಬಿಡುತ್ತಾರೆ, ರಾಜ್ಯಕ್ಕೆ ಯಾವ ಸಂದೇಶ ಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದ ಅವರು. ಸ್ಟಿಂಗ್ ಆಪರೇಷನ್ ಸತ್ಯಾಸತ್ಯತೆ ಬಗ್ಗೆ ಮೊದಲು ಎಲ್ಲಿ ಮಾಹಿತಿ ನೀಡಬೇಕೋ ಅಲ್ಲಿಗೆ ಕೊಡಿ, ಪತ್ರಿಕಾಗೋಷ್ಠಿ ಮಾಡಿ ಮಾಹಿತಿ ಕೊಡಿ ಅಂತಾ ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರನ್ನ ತಪ್ಪಿತಸ್ಥ ಜಾಗದಲ್ಲಿ ನಿಲ್ಲಿಸುವ ಹುನ್ನಾರದ ಹಿನ್ನೆಲೆ ಏನು ಎಂದು ಪ್ರಶ್ನಿಸಿದ ಶಾಸಕರು, ಪ್ರಜ್ವಲ್ ಹಾಗೂ ರಿತೇಶ್ ಬಗ್ಗೆ ತನಿಖೆ ನಡೆಸಿ ಮಾಹಿತಿ ಹೊರಗೆ ತೆಗೆಯಿರಿ ಎಂದರೆ, ಇದು ಏನೋ ಮಾಡ್ತಾ ಇದ್ದೀರಾ ಎಂದು ಅಸಮಾಧಾನ ಹೊರಹಾಕಿದರು. ಸ್ಟಿಂಗ್ ಆಪರೇಷನ್ ಬಗ್ಗೆ ಸಂಪೂರ್ಣ ಮಾಹಿತಿ ಕುಮಾರಸ್ವಾಮಿ ನೀಡಿದ್ದಾರೆ ಮತ್ತು ಕೇಂದ್ರದ ಶ್ರೇಷ್ಠ ನಾಯಕನಾದ ಕುಮಾರಸ್ವಾಮಿ ಹೇಳಿರುವ ಸತ್ಯ ಮರೆಮಾಚಲು ಈ ರೀತಿ ಹೇಳುತ್ತಿದ್ದಾರೆ ಎಂದರು. ಕುಮಾರಸ್ವಾಮಿ ವಿರುದ್ಧ ತನಿಖೆ ಮಾಡಲು ಹೊರಟಿರುವ ಸೀಮಂತ್ ಕುಮಾರ್ ಸಿಂಗ್ರವರ ರಾಜಿನಾಮೆಯನ್ನು ಈ ಕೂಡಲೇ ಖರ್ಗೆಯವರು ಪಡೆಯಬೇಕು ಎಂದು ಆಗ್ರಹಿಸಿದರು.
