ಶಿವಮೊಗ್ಗ : ಹೆಂಡತಿಗೆ ತಿಳಿಯದೆ ಮತ್ತೊಂದು ಮದುವೆಯಾಗಿ ಪೊಲೀಸರಿಗೆ ಫೋನ್​ ಮಾಡಿದ ಗಂಡ-ಏನಿದು ಘಟನೆ?

ಹಂಚಿಕೊಳ್ಳಿ
WhatsApp Facebook X Telegram
Shivamogga Man Calls 112 Police
Shivamogga Man Calls 112 Police

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಪ್ರತಿನಿತ್ಯವೂ ಒಂದಲ್ಲ ಒಂದು ಆಶ್ಚರ್ಯಕರ ಹಾಗೂ ಅಪರೂಪದ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವುಗಳು ಕೊನೆಗೆ 112 ಸಿಬ್ಬಂದಿಯ ಬಳಿ ತಲುಪಿ, ಅಲ್ಲಿಯೂ ಬಗೆಹರಿಯದೆ ಪೊಲೀಸ್​ ಠಾಣೆಯ ಮೆಟ್ಟಿಲೇರುತ್ತವೆ. ಅಂತಹದ್ದೇ ಒಂದು ಘಟನೆ ನಡೆದಿದ್ದು, ಹೆಂಡತಿಗೆ ತಿಳಿಯದೆ ಮತ್ತೊಂದು ಮದುವೆಯಾದ ಗಂಡ, ಇಬ್ಬರ ನಡುವೆ ನಡೆಯುತ್ತಿರುವ ಜಗಳವನ್ನು ತಪ್ಪಿಸಲು 112 ಪೊಲೀಸರ ಮೊರೆ ಹೋಗಿದ್ದಾರೆ.

ಹೌದು, ಪೇಪರ್​ ಟೌನ್​ ಪೊಲೀಸ್​ ಠಾಣಾ ವ್ಯಾಪ್ತಿಯಿಂದ 112 ಸಿಬ್ಬಂದಿಗೆ ಫೋನ್​ ಕರೆ ಬಂದಿದೆ. ಕರೆಯನ್ನು ಸ್ವೀಕರಿಸಿದಾಗ, ಸರ್, ನಾನು ನನ್ನ ಹೆಂಡತಿಗೆ ತಿಳಿಯದೆ 2ನೇ ಮದುವೆಯಾಗಿದ್ದೇನೆ. ಇದೀಗ ಆ ವಿಚಾರ ಮೊದಲನೇ ಹೆಂಡತಿಗೆ ತಿಳಿದಿದ್ದು, ಇಬ್ಬರೂ ಜಗಳವಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರು ಇಬ್ಬರ ಜಗಳವನ್ನು ನಿಲ್ಲಿಸಿ ಸೂಕ್ತ ತಿಳಿವಳಿಕೆ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಪೊಲೀಸ್​ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor