ಆಗುಂಬೆ ಘಾಟಿ ಹತ್ತಿಸಲು ಪರದಾಟ! 6ನೇ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ಲಿಸಿದ ಚಾಲಕ

ಹಂಚಿಕೊಳ್ಳಿ
WhatsApp Facebook X Telegram
Agumbe Ghat KSRTC Bus Incident Passengers Panic at 6th Hairpin Bend
Agumbe Ghat KSRTC Bus Incident Passengers Panic at 6th Hairpin BendAgumbe Ghat KSRTC Bus Incident Passengers Panic at 6th Hairpin Bend
dasrara add shivamogga

ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಯಾವುದೇ ಡ್ರೈವರ್​ ಎಷ್ಟೆ ಎಕ್ಸ್​ಪಿರಿಯೆನ್ಸ್​ ಇದ್ದರೂ ಘಾಟಿ ಹತ್ತಿಸುವುದು ಸುಲಭದ ಮಾತಲ್ಲ. ಅದರಲ್ಲಿಯು ಹೇರ್​​ ಪಿನ್ ಕಟ್​ಗಳಲ್ಲಿ ಅಪ್​​ ಹತ್ತಿಸುವಾಗ ಚೂರು ಕಂಟ್ರೋಲ್​ ತಪ್ಪಿದರೂ ಬಸ್​ ಸೀದಾ…ಗೊತ್ತಲ್ಲ. ಹಾಗಿದ್ದರೂ ನಮ್ಮ ಜಿಲ್ಲೆಯ ಡ್ರೈವರ್​ಗಳು ಪ್ರತಿನಿತ್ಯ ಹತ್ತಾರು ಸಲ ಬಸ್​ಗಳನ್ನ ಘಟ್ಟದ ಕೆಳಗೆ ಮೇಲೆ ಹತ್ತಿಸಿ ಇಳಿಸಿ, ಪ್ರಯಾಣಿಕರನ್ನ ಸೇಫ್​ ಆಗಿ ತಲುಪಿಸುತ್ತಾರೆ.

ಈ ಮಧ್ಯೆ ನಿನ್ನೆ ದಿನ ಆಗುಂಬೆ ಘಾಟಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್​ವೊಂದು ಘಾಟಿ ತಿರುವಿನಲ್ಲಿ ಮೇಲಕ್ಕೆ ಬರದೆ ನಿಂತು ಬಿಟ್ಟಿತ್ತು. ಘಾಟಿಯ 6ನೇ ತಿರುವಿನಲ್ಲಿ ಬಸ್ ಅನ್ನು ಮುಂದಕ್ಕೆ ಚಲಾಯಿಸಲು ಸಾಧ್ಯವಾಗದೆ ಚಾಲಕ ಪರದಾಟ ಪಟ್ಟಿದ್ದ. ಈ ದೃಶ್ಯ ಮೇಲಿನಿಂದ ಕೆಳಕ್ಕೆ ಹೋಗುತ್ತಿದ್ದ ಬಸ್​ನ ಪ್ರಯಾಣಿಕರ ಮೊಬೈಲ್​ಗಳಲ್ಲಿ ಸೆರೆಯಾಗಿದೆ. ಆರಂಭದಲ್ಲಿ ಘಾಟಿ ಕ್ರಾಸ್​ನಲ್ಲಿ ನಾನಾ ಸಾಹಸ ಮಾಡಿ ಚಾಲಕ ಬಳಿಕ, ಕೈಸೋತಿದ್ದಾನೆ. ಅಷ್ಟರಲ್ಲಿ ಎದುರಿನಿಂದ ಬರುತ್ತಿದ್ದ ವಾಹನಗಳಲ್ಲಿದ್ದವರು, ಚಾಲಕರು ಕೆಎಸ್​ಆರ್​ಟಿಸಿ ಚಾಲಕನ ಸಹಾಯಕ್ಕೆ ಬಂದರು.

dasrara add shivamogga
shivamogga dasara add
dasrara add shivamogga

ಕೆಳಗಿನಿಂದ ಬರುತ್ತಿದ್ದ ವಾಹನಗಳನ್ನ ಕೆಲವರು ತಡೆದು ನಿಲ್ಲಿಸಿದರು, ಇನ್ನೂ ಕೆಲವರು ಬಸ್​ನಲ್ಲಿದ್ದ ಪ್ರಯಾಣಿಕರನ್ನ ಕೆಳಕ್ಕೆ ಇಳಿಸಿ ಸುರಕ್ಷತೆಯ ಕ್ರಮ ಕೈಗೊಂಡರು, ಆ ಬಳಿಕ ಡ್ರೈವರ್​ಗೆ ಗೈಡ್ ಮಾಡುತ್ತಾ, ಬಸ್​ ತಿರುವಿನ ಅಂಚಿನವರೆಗೂ ರಿವರ್ಸ್​ ಬರುವಂತೆ ಮಾಡಿ, ಬಳಿಕ ಟರ್ನ್​ ತೆಗೆದುಕೊಳ್ಳಲು ಬೇಕಾಗುವ ಸಲಹೆ ನೀಡಿದರು. ಹಾಗೂಹೀಗೂ ಬಸ್​ ಮೇಲೆ ಘಾಟಿಯ ತಿರುವು ಹತ್ತಿದ ಬಳಿಕ ಬಸ್​ನಲ್ಲಿದ್ದ ಪ್ರಯಾಣಿಕರು ತಮ್ಮ ಪ್ರಯಾಣ ಮುಂದುವರಿಸಿದರು

shivamogga dasara add
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor