ಟ್ರೈನೊಳಗೆ ಮೊಬೈಲ್‌ನಲ್ಲಿ ಜೋರಾಗಿ ಹಾಡು, ವಿಡಿಯೊ ಹಾಕಿದರೆ ಕಟ್ಟಬೇಕಾಗುತ್ತೆ ದಂಡ! ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ!

ಹಂಚಿಕೊಳ್ಳಿ
WhatsApp Facebook X Telegram
ರೈಲು ಪ್ರಯಾಣಿಕರಿಗೆ ಅಗತ್ಯ ಮಾಹಿತಿ ನೀಡುವ ಸಂದರ್ಭದ ಸಾಂದರ್ಭಿಕ ಚಿತ್ರ!
dasrara add shivamogga

ಮಲೆನಾಡು ಟುಡೆ ಸುದ್ದಿ / ರೈಲಲ್ಲಿ ಹೋಗುತ್ತಿರುವಾಗ ಅಕ್ಕಪಕ್ಕದವರಿಗೆ ತೊಂದರೆ ಆಗುತ್ತೆ ಎಂಬುದು ಗೊತ್ತಿದ್ದರೂ ಮೊಬೈಲ್​ನಲ್ಲಿ ಜೋರು ಸೌಂಡು ಕೊಟ್ಟುಕೊಂಡು ವಿಡಿಯೋ ನೋಡುವವರು, ಹಾಡು ಕೇಳುವವರು ಇದ್ದೆ ಇರುತ್ತಾರೆ. ಅಂತವರನ್ನ ನೋಡಿದಾಗ, ಈ ಪ್ರಜೆಗಳು ಎಲ್ಲಿಂದ ಅವತಾರ ಆದವು ಎಂದು ಎನಿಸದೇ ಇರದು. ಇದೀಗ ಅಂತಹ ಸೌಂಡು ಪಾರ್ಟಿಗಳ ವಿರುದ್ದ ಕೇಂದ್ರ ರೈಲ್ವೆ ಇಲಾಖೆ ದಂಡ ಹಾಕಲು ಮುಂದಾಗಿದೆ.

ಹೌದು, ಪ್ರಯಾಣದ ವೇಳೆ ಮೊಬೈಲ್‌ನಲ್ಲಿ ಜೋರಾಗಿ ಹಾಡು ಕೇಳುವುದು, ವಿಡಿಯೊಗಳನ್ನು ಸ್ಪೀಕರ್ ಮೋಡ್‌ನಲ್ಲಿ ಹಾಕುವುದು ಹಾಗೂ ಇತರ ಪ್ರಯಾಣಿಕರಿಗೆ ತೊಂದರೆಯಾಗುವಂತೆ ಜೋರಾಗಿ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯ ರೈಲ್ವೆ ಹೊಸ ಮಾರ್ಗಸೂಚಿ ಹೊರಡಿಸಿದೆ. ರೈಲಿನ ಒಳಗೆ ಮಾತ್ರವಲ್ಲದೆ ರೈಲು ನಿಲ್ದಾಣದ ಆವರಣದಲ್ಲಿಯೂ ಮೊಬೈಲ್ ಮೂಲಕ ಜೋರಾಗಿ ಹಾಡು ಹಾಗೂ ವಿಡಿಯೊಗಳನ್ನು ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಲಾಗಿದೆ. ಸಹ ಪ್ರಯಾಣಿಕರಿಗೆ ತೊಂದರೆಯಾಗದಂತೆ ಮೊಬೈಲ್ ಬಳಕೆ ಮಾಡಬೇಕು ಎಂದು ರೈಲ್ವೆ ಇಲಾಖೆ ಸೂಚಿಸಿದೆ.

dasrara add shivamogga
shivamogga dasara add
dasrara add shivamogga
  • ಪ್ರಯಾಣದ ವೇಳೆ ಹಾಡುಗಳನ್ನು ಕೇಳಲು ಇಯರ್‌ಫೋನ್ ಬಳಸಬೇಕು. ಮೊಬೈಲ್‌ನಲ್ಲಿ ಮಾತನಾಡುವಾಗ ಇತರ ಪ್ರಯಾಣಿಕರಿಗೆ ಅಡಚಣೆಯಾಗದಂತೆ ಮೆಲುದನಿಯಲ್ಲಿ ಮಾತನಾಡಬೇಕು ಎಂದು ತಿಳಿಸಲಾಗಿದೆ.
  • ರೈಲಿನಲ್ಲಿ ಅಥವಾ ರೈಲು ನಿಲ್ದಾಣದ ಆವರಣದಲ್ಲಿ ಜೋರಾಗಿ ಮಾತನಾಡುವ ಮೂಲಕ ಅಥವಾ ಮೊಬೈಲ್‌ನಲ್ಲಿ ಹೆಚ್ಚಿನ ಶಬ್ದದಲ್ಲಿ ಹಾಡು, ವಿಡಿಯೊಗಳನ್ನು ಮಾಡುವ ಮೂಲಕ ಇತರರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
  • ಇಂತಹ ವರ್ತನೆ ತೋರುವ ವ್ಯಕ್ತಿಯನ್ನು ರೈಲು ನಿಲ್ದಾಣದ ಆವರಣದಿಂದ ಹೊರಕಳುಹಿಸುವುದರ ಜೊತೆಗೆ ₹1,000 ದಂಡ ವಿಧಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  • ರೈಲ್ವೆ ಅಧಿಕಾರಿಗಳು ಎಚ್ಚರಿಕೆ ನೀಡಿದ ನಂತರವೂ ಪ್ರಯಾಣಿಕರು ನಿಯಮ ಉಲ್ಲಂಘಿಸುವುದು ಕಂಡುಬಂದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಅಂತಹ ಪ್ರಕರಣಗಳಲ್ಲಿ 6 ತಿಂಗಳವರೆಗೆ ಕಾರಾಗೃಹ ಶಿಕ್ಷೆ ಅಥವಾ ₹5,000 ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
  • ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕ ಘೋಷಣೆಗಳು ಹಾಗೂ ಪ್ರಕಟಣೆಗಳ ಮೂಲಕ ಜಾಗೃತಿ ಮೂಡಿಸುವಂತೆ ದಕ್ಷಿಣ ರೈಲ್ವೆಯು ತನ್ನ ವಿಭಾಗಗಳಿಗೆ ನಿರ್ದೇಶನ ನೀಡಿದೆ.
shivamogga dasara add
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor