ಶಿವಮೊಗ್ಗ–ತುಮಕೂರು ರೈಲು ಸೇರಿ 10 ರೈಲುಗಳ ಸಂಚಾರ ರದ್ದು; ಜನಶತಾಬ್ದಿ ರೈಲು ಮಾರ್ಗ ಬದಲು! ಕಾರಣ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram
SWR Train Trains Cancelled Birur-Talguppa Railway Train Servis ChangedChanged Shivamogga-Talaguppa Train train plans affected by the cancellations Marikamba Jatre Special Train Railway Halt Extended Railway Line Block: Shimoga-Bangalore Janshatabdi and Other Trains Cancelledರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೇತುವೆ ಕಾಮಗಾರಿ ಹಿನ್ನೆಲೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳು ರದ್ದಾಗಿವೆ. ಪೂರ್ಣ ವಿವರ ಇಲ್ಲಿದೆ.
SWR Train Trains Cancelled Birur-Talguppa Railway Train Servis Changed Changed Shivamogga-Talaguppa Train Marikamba Jatre Special Train Railway Halt Extended Special Train to Sagara Marikamba Jathre from Feb 3 Shivamogga Train Timings Change 2026 Dasara Special Trains

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನೈಋತ್ಯ ರೈಲ್ವೆ ವ್ಯಾಪ್ತಿಯ ಟಿಪಟೂರು ಮತ್ತು ಹೊನ್ನವಳ್ಳಿ ರೋಡ್ ರೈಲು ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 88ರಲ್ಲಿ ಕಾಂಪೋಸಿಟ್ ಗರ್ಡರ್ ಅಳವಡಿಕೆ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 26ರಿಂದ 28ರವರೆಗೆ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ರೈಲ್ವೆ ಇಲಾಖೆ ನೀಡಿರುವ ಪ್ರಕಟಣೆಯ ವಿವರ ಹೀಗಿದೆ.

ಶಿವಮೊಗ್ಗ–ತುಮಕೂರು ಎಕ್ಸ್‌ಪ್ರೆಸ್ ಹಾಗೂ ಮೆಮು ರೈಲುಗಳು ಸೇರಿದಂತೆ ಒಟ್ಟು 10 ರೈಲುಗಳ ಸಂಚಾರ ರದ್ದುಗೊಳಿಸಲಾಗಿದ್ದು, 6 ರೈಲುಗಳ ಮಾರ್ಗ ಬದಲಾವಣೆ, 6 ರೈಲುಗಳ ಸಂಚಾರ ನಿಯಂತ್ರಣ ಹಾಗೂ 3 ರೈಲುಗಳ ಹೊರಡುವ ಸಮಯವನ್ನು ಮರುನಿಗದಿಪಡಿಸಲಾಗಿದೆ. ಕಾಮಗಾರಿಗಾಗಿ ರೈಲು ಮಾರ್ಗ ಹಾಗೂ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗಿರುವುದರಿಂದ ಈ ಬದಲಾವಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ–ತುಮಕೂರು ಸೇರಿದಂತೆ ರದ್ದಾಗಿರುವ ರೈಲುಗಳ ವಿವರ

ಅಕ್ಟೋಬರ್ 26ರಂದು ರೈಲು ಸಂಖ್ಯೆ 16567 ಶಿವಮೊಗ್ಗ–ತುಮಕೂರು ಟೌನ್ ಎಕ್ಸ್‌ಪ್ರೆಸ್ ರೈಲಿನ ಸಂಚಾರ ರದ್ದುಗೊಳಿಸಲಾಗಿದೆ.

ಅಕ್ಟೋಬರ್ 27ರಂದು ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್–ತುಮಕೂರು ಎಕ್ಸ್‌ಪ್ರೆಸ್, ರೈಲು ಸಂಖ್ಯೆ 56224 ಅರಸೀಕೆರೆ–ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್, ರೈಲು ಸಂಖ್ಯೆ 56229 ಕೆಎಸ್‌ಆರ್ ಬೆಂಗಳೂರು–ಚನ್ನಪಟ್ಟಣ ಪ್ಯಾಸೆಂಜರ್, ರೈಲು ಸಂಖ್ಯೆ 56230 ಚನ್ನಪಟ್ಟಣ–ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ ಹಾಗೂ ರೈಲು ಸಂಖ್ಯೆ 56223 ಕೆಎಸ್‌ಆರ್ ಬೆಂಗಳೂರು–ಅರಸೀಕೆರೆ ಪ್ಯಾಸೆಂಜರ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ಅಕ್ಟೋಬರ್ 28ರಂದು ರೈಲು ಸಂಖ್ಯೆ 66577 ತುಮಕೂರು–ಶಿವಮೊಗ್ಗ ಟೌನ್ ಮೆಮು, ರೈಲು ಸಂಖ್ಯೆ 66578 ಶಿವಮೊಗ್ಗ ಟೌನ್–ತುಮಕೂರು ಮೆಮು, ರೈಲು ಸಂಖ್ಯೆ 66505 ಯಲಹಂಕ–ಅರಸೀಕೆರೆ ಮೆಮು ಹಾಗೂ ರೈಲು ಸಂಖ್ಯೆ 66506 ಅರಸೀಕೆರೆ–ಯಲಹಂಕ ಮೆಮು ರೈಲುಗಳ ಸಂಚಾರ ಇರುವುದಿಲ್ಲ.

ಜನಶತಾಬ್ದಿ ಸೇರಿದಂತೆ 6 ರೈಲುಗಳ ಮಾರ್ಗ ಬದಲಾವಣೆ

ಅಕ್ಟೋಬರ್ 26ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 16546 ಸಿಂಧನೂರು–ಯಶವಂತಪುರ ಎಕ್ಸ್‌ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ ಹಾಗೂ ಚಿಕ್ಕಬಾಣಾವರ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಟಿಪಟೂರು, ಅಮ್ಮಸಂದ್ರ, ಗುಬ್ಬಿ, ತುಮಕೂರು, ಕ್ಯಾತ್ಸಂದ್ರ ಮತ್ತು ದೊಡ್ಡಬೆಲೆ ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆ ಹೊಂದಿರುವುದಿಲ್ಲ.

ಅಕ್ಟೋಬರ್ 26ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 19667 ಉದಯಪುರ ಸಿಟಿ–ಮೈಸೂರು ಎಕ್ಸ್‌ಪ್ರೆಸ್ ರೈಲು ದಾವಣಗೆರೆ, ಅರಸೀಕೆರೆ, ಹಾಸನ, ನೆಲಮಂಗಲ ಹಾಗೂ ಕೆಎಸ್‌ಆರ್ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ.

ಅಕ್ಟೋಬರ್ 27ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 12090 ಶಿವಮೊಗ್ಗ ಟೌನ್–ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ ಹಾಗೂ ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಟಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡುವುದಿಲ್ಲ.

ಅಕ್ಟೋಬರ್ 27 ಮತ್ತು 28ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 56519 ಕೆಎಸ್‌ಆರ್ ಬೆಂಗಳೂರು–ಹೊಸಪೇಟೆ ಪ್ಯಾಸೆಂಜರ್ ರೈಲು ಚಿಕ್ಕಬಾಣಾವರ, ನೆಲಮಂಗಲ, ಹಾಸನ ಹಾಗೂ ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ದೊಡ್ಡಬೆಲೆ, ಕ್ಯಾತ್ಸಂದ್ರ, ತುಮಕೂರು, ಗುಬ್ಬಿ, ಅಮ್ಮಸಂದ್ರ ಹಾಗೂ ಟಿಪಟೂರು ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.

ಅಕ್ಟೋಬರ್ 27ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 11006 ಪುದುಚೇರಿ–ದಾದರ್ ಎಕ್ಸ್‌ಪ್ರೆಸ್ ರೈಲು ಚಿಕ್ಕಬಾಣಾವರ, ನೆಲಮಂಗಲ, ಹಾಸನ ಹಾಗೂ ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ತುಮಕೂರು ಮತ್ತು ಟಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡುವುದಿಲ್ಲ.

ಅಕ್ಟೋಬರ್ 28ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 12079 ಕೆಎಸ್‌ಆರ್ ಬೆಂಗಳೂರು–ಎಸ್‌ಎಸ್‌ಎಸ್ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಯಶವಂತಪುರ, ನೆಲಮಂಗಲ, ಹಾಸನ ಹಾಗೂ ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ತುಮಕೂರು ಮತ್ತು ಟಿಪಟೂರು ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ.

6 ರೈಲುಗಳ ಸಂಚಾರ ನಿಯಂತ್ರಣ

ಅಕ್ಟೋಬರ್ 26ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 11022 ತಿರುನೆಲ್ವೇಲಿ–ದಾದರ್ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯೆ 60 ನಿಮಿಷ ಹಾಗೂ ರೈಲು ಸಂಖ್ಯೆ 22497 ಶ್ರೀಗಂಗಾನಗರ–ತಿರುಚಿರಾಪಳ್ಳಿ ಎಕ್ಸ್‌ಪ್ರೆಸ್ ರೈಲನ್ನು 30 ನಿಮಿಷ ನಿಯಂತ್ರಿಸಲಾಗುವುದು.

ಅಕ್ಟೋಬರ್ 27ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 12079 ಕೆಎಸ್‌ಆರ್ ಬೆಂಗಳೂರು–ಎಸ್‌ಎಸ್‌ಎಸ್ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯೆ 90 ನಿಮಿಷ ನಿಯಂತ್ರಿಸಲಾಗುವುದು. ಅದೇ ದಿನ ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 66577 ತುಮಕೂರು–ಶಿವಮೊಗ್ಗ ಟೌನ್ ಮೆಮು ರೈಲನ್ನು 20 ನಿಮಿಷ ನಿಯಂತ್ರಿಸಲಾಗುವುದು.

ಅಕ್ಟೋಬರ್ 28ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 12726 ಧಾರವಾಡ–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು 30 ನಿಮಿಷ ಹಾಗೂ ರೈಲು ಸಂಖ್ಯೆ 20689 ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲನ್ನು 30 ನಿಮಿಷ ಮಾರ್ಗಮಧ್ಯೆ ನಿಯಂತ್ರಿಸಲಾಗುವುದು.

ತಾಳಗುಪ್ಪ–ಬೆಂಗಳೂರು ರೈಲು ಹೊರಡುವ ಸಮಯದಲ್ಲಿ ಬದಲಾವಣೆ

ಅಕ್ಟೋಬರ್ 27ರಂದು ವಾಸ್ಕೊ ಡ ಗಾಮಾದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೊ ಡ ಗಾಮಾ–ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ಹೊರಡುವ ಸಮಯವನ್ನು 120 ನಿಮಿಷ ಮುಂದೂಡಲಾಗಿದೆ.

ಅಕ್ಟೋಬರ್ 28ರಂದು ತಾಳಗುಪ್ಪದಿಂದ ಹೊರಡುವ ರೈಲು ಸಂಖ್ಯೆ 20652 ತಾಳಗುಪ್ಪ–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಹೊರಡುವ ಸಮಯವನ್ನು 140 ನಿಮಿಷ ಮುಂದೂಡಲಾಗಿದೆ.

ಅದೇ ದಿನ ಚಿಕ್ಕಮಗಳೂರಿನಿಂದ ಹೊರಡುವ ರೈಲು ಸಂಖ್ಯೆ 16239 ಚಿಕ್ಕಮಗಳೂರು–ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ಹೊರಡುವ ಸಮಯವನ್ನು 60 ನಿಮಿಷ ಮುಂದೂಡಲಾಗಿದೆ.

ಟಿಪಟೂರು–ಹೊನ್ನವಳ್ಳಿ ರೋಡ್ ನಿಲ್ದಾಣಗಳ ನಡುವಿನ ಗರ್ಡರ್ ಅಳವಡಿಕೆ ಕಾಮಗಾರಿ ಹಿನ್ನೆಲೆಯಲ್ಲಿ ಮೇಲ್ಕಂಡ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor