ಎಟಿಎಂ ನಗದು ಹಿಂತೆಗೆತದಲ್ಲಿ ಕರ್ನಾಟಕಕ್ಕೆ ಎಷ್ಟನೇ ಸ್ಥಾನ ಗೊತ್ತಾ..?

ಹಂಚಿಕೊಳ್ಳಿ
WhatsApp Facebook X Telegram
ATM Cash Withdrawals in India 2025
ATM Cash Withdrawals in India 2025

ನವದೆಹಲಿ: ಡಿಜಿಟಲ್ ಪಾವತಿಗಳ ಯುಗದಲ್ಲೂ ಕರ್ನಾಟಕದ ಜನತೆ ಎಟಿಎಂನಿಂದ ನಗದು ಹಿಂತೆಗೆತದಲ್ಲಿ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದಾರೆ. 2025ರ ಸಾಲಿನಲ್ಲಿ ಪ್ರತಿ ಎಟಿಎಂನಿಂದ ಸರಾಸರಿ ₹1.73 ಕೋಟಿ ನಗದು ವಿತ್‌ಡ್ರಾವಲ್ ಆಗುವ ಮೂಲಕ ಕರ್ನಾಟಕ ರಾಜ್ಯವು ಅಗ್ರಸ್ಥಾನವನ್ನು ಪಡೆದಿದೆ ಎಂದು ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ. 

ಶಿವಮೊಗ್ಗದಲ್ಲಿ 91 ಸಾವಿರ ರೇಟಾಗಿದೆ! ಎಲ್ಲೆಲ್ಲಿ ಎಷ್ಟಿದೆ ಅಡಕೆ ದರ! ಗೊರಬಲಿಗೂ ಡಿಮ್ಯಾಂಡ್ ಇದೆ!

ದೇಶಾದ್ಯಂತ ಸುಮಾರು 73,000 ಎಟಿಎಂಗಳನ್ನು ನಿರ್ವಹಿಸುವ ಪ್ರಮುಖ ಕಂಪನಿಯೊಂದು ಈ ವರದಿಯನ್ನು ಸಿದ್ಧಪಡಿಸಿದೆ. ವರದಿಯ ಪ್ರಕಾರ, ಕರ್ನಾಟಕದಲ್ಲಿ ಪ್ರತಿ ಎಟಿಎಂನ ಸರಾಸರಿ ವಹಿವಾಟು ₹1.73 ಕೋಟಿಯಾಗಿದ್ದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿ ಕನಿಷ್ಠ ಅಂದರೆ ₹83 ಲಕ್ಷ ವಿತ್‌ಡ್ರಾವಲ್ ದಾಖಲಾಗಿದೆ. ದೇಶದ ಒಟ್ಟಾರೆ ಸರಾಸರಿಯನ್ನು ಗಮನಿಸಿದರೆ, 2025ರಲ್ಲಿ ಪ್ರತಿ ಎಟಿಎಂನಿಂದ ₹1.21 ಕೋಟಿ ಹಣ ಹಿಂಪಡೆಯಲಾಗಿದೆ. 

ವಿಶೇಷವೆಂದರೆ, 2024ರಲ್ಲಿ ದೇಶದ ಸರಾಸರಿ ನಗದು ಹಿಂತೆಗೆತದ ಪ್ರಮಾಣ ₹1.30 ಕೋಟಿಯಷ್ಟಿತ್ತು. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ದೇಶಾದ್ಯಂತ ಎಟಿಎಂ ಬಳಕೆಯ ಪ್ರಮಾಣದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

ATM Cash Withdrawals in India 2025

ATM Cash Withdrawals in India 2025
ATM Cash Withdrawals in India 2025
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor