ಆಟೋ ಚಾಲಕನಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಡಿಐಜಿಪಿ ತ್ಯಾಗರಾಜನ್​ ರಿಂದ ಸನ್ಮಾನ! ಕಾರಣವೇನು ?

DIGP Thyagarajan felicitates auto driver at Shivamogga district police office What is the reason?

ಆಟೋ ಚಾಲಕನಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಡಿಐಜಿಪಿ ತ್ಯಾಗರಾಜನ್​ ರಿಂದ ಸನ್ಮಾನ! ಕಾರಣವೇನು ?

KARNATAKA NEWS/ ONLINE / Malenadu today/ May 1, 2023 GOOGLE NEWS


ಶಿವಮೊಗ್ಗ ಶಿವಮೊಗ್ಗ ಪೊಲೀಸ್  ಇಲಾಖೆ ಆಟೋ ಡ್ರೈವರ್​ ಒಬ್ಬರಿಗೆ ಕಚೇರಿಗೆ ಕರೆದು ಸನ್ಮಾನ ಮಾಡಿದೆ. ಆಟೋದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟುಹೋಗಿದ್ದ ಬೆಲೆಬಾಳುವ ವಸ್ತುಗಳನ್ನ ಹಿಂತಿರುಗಿಸಿದ ಪ್ರಾಮಾಣಿಕತೆಗಾಗಿ ಅವರನ್ನ ಸನ್ಮಾನ ಮಾಡಲಾಗಿದೆ. 

ಪ್ರಾಮಾಣಿಕತೆ ಮೆರೆದ ಚಾಲಕ

ದಿನಾಂಕಃ 30-04-2023 ರಂದು ಶಿವಮೊಗ್ಗ ಟೌನ್ ಬಸವೇಶ್ವರ ನಗರದ ವಾಸಿ ಶ್ರೀನಿವಾಸ ಗೌಡರವರ ಕಾರು  ಶರಾವತಿ ನಗರದ ಬಳಿ ಕೆಟ್ಟುನಿಂತಿತ್ತು. ಹೀಗಾಗಿ , ಆಟೋದಲ್ಲಿ ಮನೆಗೆ ಹೊರಡಲು ಮುಂದಾಗಿದ್ದಾರೆ. 

ಆ ಸಂದರ್ಭದಲ್ಲಿ  ಆಟೋದ ಚಾಲಕ ಶ್ರೀನಿವಾಸ್ ಗೌಡರ ಕಾರನ್ನು ತಳ್ಳಿ ಸ್ಟಾರ್ಟ್ ಮಾಡಲು ಅನುವು ಮಾಡಿಕೊಟ್ಟಿದ್ದರು. ಆದರೆ, ಅಷ್ಟರಲ್ಲಿ ಶ್ರೀನಿವಾಸ್ ಗೌಡರವರು,  ತಮ್ಮ ನಗದು  ಹಣ, ಎಟಿಎಂ ಕಾರ್ಡ್, ಬ್ಯಾಂಕ್ ಪಾಸ್ ಬುಕ್  ಮತ್ತು ಅಡಿಕೆ ಮಂಡಿಯ ಕೀ ಇದ್ದ ತಮ್ಮ ಬ್ಯಾಗ್ ಅನ್ನು ಮರೆತು ಆಟೋದಲ್ಲಿಯೇ ಮರೆತು ಹೋಗಿದ್ದರು. 

ಇದನ್ನ ಗಮನಿಸಿದ ಆಟೋ ಚಾಲಕ ಫೈರೋಜ್ ಖಾನ್, ಬ್ಯಾಗ್​ನ್ನು  ಪೊಲೀಸ್ ರಿಗೆ ತಂದು ಕೊಟ್ಟು ಅದರ ಮಾಲೀಕರಿಗೆ ಒಪ್ಪಿಸುವಂತೆ ಮನವಿ ಮಾಡಿದ್ದರು. ಅದರಂತೆ ಪೊಲೀಸರು ಬ್ಯಾಗ್ ಮತ್ತು ಅದರಲ್ಲಿದ್ದ ರೂ 22,000/- ನಗದು  ಹಣ, ಎಟಿಎಂ ಕಾರ್ಡ್, ಬ್ಯಾಂಕ್ ಪಾಸ್ ಬುಕ್  ಮತ್ತು ಅಡಿಕೆ ಮಂಡಿಯ ಕೀ ಅನ್ನು ಮಾಲೀಕರಾದ ಶ್ರೀನಿವಾಸ್ ಗೌಡ ರವರಿಗೆ ಹಿಂದಿರುಗಿಸಿದ್ದಾರೆ. ಅಲ್ಲದೆ ಪ್ರಾಮಾಣಿಕತೆ ಮೆರೆದ ಆಟೋ ಚಾಲಕರಿಗೆ ಸನ್ಮಾನ ಮಾಡಿದ್ದಾರೆ.  

ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ 

 

ಈ  ವೇಳೆ,  ಜಿಲ್ಲಾ ಪೊಲೀಸ್ ಕಛೇರಿಯಲ್ಲಿ,  ತ್ಯಾಗರಾಜನ್, ಐಪಿಎಸ್, ಮಾನ್ಯ ಡಿಐಜಿಪಿ, ಪೂರ್ವ ವಲಯ ದಾವಣಗೆರೆ ಮತ್ತು ಮಿಥುನ್ ಕುಮಾರ್ ಜಿ.ಕೆ, ಐಪಿಎಸ್,  ಮಾನ್ಯ  ಪೊಲೀಸ್ ಅಧೀಕ್ಷಕರು,   ಅನಿಲ್ ಕುಮಾರ್ ಭುಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು  ಸತೀಶ ಕುಮಾರ ಕೆ.ವಿ, ಪೊಲೀಸ್ ನಿರೀಕ್ಷಕರು, ಜಿಲ್ಲಾ ನಿಸ್ತಂತು ವಿಭಾಗ, ಕಂಟ್ರೋಲ್ ರೂಂ ಶಿವಮೊಗ್ಗ ರವರು ಉಪಸ್ಥಿತರಿದ್ದರು.



ಇದನ್ನೂ ಓದಿ / ಒಂದೇ ದಿನ 90 ಲಕ್ಷದ ಎಣ್ಣೆ ಜಪ್ತಿ/ ಶಿಕಾರಿಪುರದಲ್ಲಿ ಭರ್ಜರಿ ಹಣ ಪತ್ತೆ/  ಒಂದೇ ರಾತ್ರಿ 19 ಪಿಟ್ಟಿಕೇಸ್/ ಎ.ಎ. ಸರ್ಕಲ್​ ನಲ್ಲಿ ರೂಟ್ ಮಾರ್ಚ್​! ಪೊಲೀಸ್ ನ್ಯೂಸ್​ 

ಕೊಟ್ಟಿಗೆಗೆ ನುಗ್ಗಿದ ಚಿರತೆ/ ಹೆಂಚು ತೆಗೆದು ಅರಣ್ಯ ಇಲಾಖೆ ರೋಚಕ ಕಾರ್ಯಾಚರಣೆ!

ಸೊರಬ/ ಶಿವಮೊಗ್ಗ ಇಲ್ಲಿನ ಕುಪ್ಪೆ ಗ್ರಾಮದ ಮನೆಯಯೊಂದರ ಕೊಟ್ಟಿಗೆಯಲ್ಲಿ ಚಿರತೆಯೊಂದು ಸೇರಿ ಆತಂಕ ಮೂಡಿಸಿತ್ತು. ಈ ಸಂಬಂಧ ತಕ್ಷಣ ಕಾರ್ಯಾಚರಣೆಗೆ ಇಳಿದ ಅರಣ್ಯ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. 

ಗ್ರಾಮದ ಶಿವಕುಮಾರ್ ಗೌಡ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಚಿರತೆ ಸೇರಿಕೊಂಡಿತ್ತು. ಚಿರತೆಯ ಇರುವಿಕಯನ್ನು ಗಮನಿಸಿದ  ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. 

ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ

ಒಂದು ಗಂಟೆಗೂ ಅಧಿಕ ಕಾಲ ಕಾರ್ಯಚರಣೆ ನಡೆಸಿದ ಅರಣ್ಯ ಸಿಬ್ಬಂದಿ, ಕೊಟ್ಟಿಗೆಯ ಹಂಚು ತೆಗೆದು ಅದರ ಮೂಲಕ ಚಿರತೆಗೆ ಅರವಳಿಕೆ ಚುಚ್ಚುಮದ್ದನ್ನು ಡಾರ್ಟ್​ ಮಾಡಿದರು, ಆನಂತರ  ಚಿರತೆಗೆ  ಪ್ರಾಥಮಿಕ ಚಿಕಿತ್ಸೆ ನೀಡಿ, ಹಂಪೆಯ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ. 

 

Malenadutoday.com Social media