KARNATAKA NEWS/ ONLINE / Malenadu today/ Jun 1, 2023 SHIVAMOGGA NEWS
ಶಿವಮೊಗ್ಗ/ ಒಂದು ಕಡೆ ಮೊಬೈಲ್ ಕಳೇದುಕೊಂಡಿದ್ದಷ್ಟೆ ಅಲ್ಲದೆ, ಅದರ ಬೆನ್ನಲ್ಲೆ ಕಳೆದು ಹೋದ ಮೊಬೈಲ್ನಿಂದ ದುಷ್ಕರ್ಮಿಗಳು ತಮ್ಮ ಅಕೌಂಟ್ಗೆ 1,38,500 ಹಣವನ್ನು ಪೋನ್ ಪೇ ಮಾಡಿಕೊಂಡ ಘಟನೆ ಸಂಬಂಧ ಸಿಇಎನ್ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಾಗಿದೆ.
ನಡೆದಿದ್ದೇನು?
ರಾಮಪ್ಪ ಎಂಬವರು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವಾಗ ತಮ್ಮ ಮೊಬೈಲ್ನ್ನ ಕಳೇದುಕೊಂಡಿದ್ದರಂತೆ. ಅದನ್ನು ಹುಡುಕಾಡುತ್ತಿರುವಾಗ ಅದೇ ದಿನ ಅವರ ಅಕೌಂಟ್ನಿಂದ ಹಣ ಟ್ರಾನ್ಸಫರ್ ಆಗಿರುವುದು ಗೊತ್ತಾಗಿದೆ. ಕಳೆದುಹೋಗಿದ್ದ ಮೊಬೈಲ್ನಲ್ಲಿರುವ ನಂಬರ್ನ್ನ ರಾಮಪ್ಪ, ಪೋನ್ ಪೇ ಹಾಗೂ ಬ್ಯಾಂಕ್ ಅಕೌಂಟ್ಗೆ ಲಿಂಕ್ ಮಾಡಿದ್ದರು. ಕಳೆದುಹೋದ ಪೋನ್ ಸಿಕ್ಕವರು, ಅದನ್ನು ಬಳಿಸಿ ಎರಡು ಬ್ಯಾಂಕ್ ಖಾತೆಗಳಿಗೆ ಹಣ ಕಳುಹಿಸಿಕೊಂಡಿದ್ದಾರೆ. ಈ ಬಗ್ಗೆ ತಿಳಿದ ಬೆನ್ನಲ್ಲೆ ರಾಮಪ್ಪರವರು ದೂರು ದಾಖಲಿಸಿದ್ದಾರೆ.
ಹುಡುಗಿ ವಿಚಾರಕ್ಕೆ ಕಿರಿಕ್! ತಾರಕಕ್ಕೇರಿದ ಜಗಳ ! ಮನೆಗಿ ನುಗ್ಗಿ ಮಚ್ಚು ಬೀಸಿದ ಯುವಕರ ಗುಂಪು!
ಶಿವಮೊಗ್ಗ ಹುಡುಗಿಯೊಬ್ಬಳ ವಿಚಾರಕ್ಕೆ ಜಗಳ ನಡೆದು ಮನೆಗೆ ನುಗ್ಗಿ ಯುವಕರ ಗುಂಪೊಂದು ಹಲ್ಲೆ ನಡೆಸಿದ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ದಾಖಲಾಗಿದೆ, ಈ ಸಂಬಂಧ ಧೀಮಂತ್ ಎಂಬಾತ ದೂರು ನೀಡಿದ್ದು, ಐವರ ವಿರುದ್ಧ ಮನೆಗೆ ನುಗ್ಗಿ ಹಲ್ಲೆ ಮಾಡಿದ ಆರೋಪ ಮಾಡಿದ್ಧಾರೆ.
ನಡೆದಿದ್ದೇನು?
ಹುಡುಗಿಯೊಬ್ಬಳ ವಿಚಾರಕ್ಕೆ ಧೀಮಂತ್ರ ಸ್ನೇಹಿತ ಹಾಗೂ ಇತರರ ನಡುವೆ ಜಗಳ ನಡೆಯುತ್ತಿತ್ತಂತೆ. ಇದೇ ವಿಚಾರಕ್ಕೆ ಬೊಮ್ಮನ ಕಟ್ಟೆಯಲ್ಲಿ ಧೀಮಂತ್ ಹಾಗೂ ಆತನ ಸ್ನೇಹಿತ ಮತ್ತು ಈ ಹಲ್ಲೆ ಪ್ರಕರಣದ ಆರೋಪಿ ತಮ್ಮ ಮತ್ತು ಅವರ ಜೊತೆಗಿನ ಹುಡುಗರ ನಡುವೆ ಜಗಳವಾಗಿತ್ತು. ಈ ಕಾರಣಕ್ಕೆ ಪ್ರಕರಣದ ಆರೋಪಿ ಹಾಗೂ ಆತನ ಸ್ನೇಹಿತರು ಧೀಮಂತ್ನ ಮನೆಗೆ ನುಗ್ಗಿ, ಆತನ ಮೇಲೆ ಮಚ್ಚು ಬೀಸಿದ್ಧಾರೆ. ಈ ವೇಳೆ ಆತ ತಪ್ಪಿಸಿಕೊಂಡು ರೂಮಿಗೆ ಹೋಗಿ ಆರೋಪಿ ಬಾಗಿಲು ಹಾಕಿಕೊಂಡಿದ್ಧಾರೆ. ಇದರಿಂದ ಸಿಟ್ಟಿಗೆದ್ದ ಗುಂಪು ಮನೆಯಲ್ಲಿದ್ದ ವಸ್ತುಗಳನ್ನ ಚೆಲ್ಲಾಪಿಲ್ಲಿಯಾಗಿಸಿ ಅಲ್ಲಿಂದ ಹೋಗಿದೆ. ಸದ್ಯ ಈ ಸಂಬಂಧ ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ.
ತೋಟಕ್ಕೆ ದನ-ಕರ ನುಗ್ಗಿದ್ದಕ್ಕೆ ಮೂವರ ಮಕ್ಕಳ ಮೇಲೆ ಹಲ್ಲೆ ಆರೋಪ! ಪ್ರಶ್ನಿಸಿದ್ದಕ್ಕೆ ಮಹಿಳೆ ಜೊತೆ ಅನುಚಿತ ವರ್ತನೆ ದೂರು!
ಶಿವಮೊಗ್ಗ ತಾಲ್ಲೂಕಿನ ಕುಂಸಿ ಪೊಲೀಸ್ ಸ್ಟೇಷನ್ ನಲ್ಲಿ ದನ-ಕರ ತೋಟಕ್ಕೆ ನುಗ್ಗಿದ ಕಾರಣಕ್ಕೆ ಮೂವರು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಪ್ರಶ್ನಿಸಿದ ಅವರ ತಾಯಿ ಜೊತೆಗೂ ಅಸಭ್ಯವಾಗಿ ವರ್ತಿಸಿದ ಆರೋಪ ಸಂಬಂಧ ಕೇಸ್ ದಾಖಲಾಗಿದೆ.
ಇದೇ ಜೂನ್ 3 ಕ್ಕೆ ನಾ ಕಂಡಂತೆ ತೇಜಸ್ವಿ-ಶಾಮಣ್ಣ
ನಿನ್ನೆ ದಾಖಲಾಗಿರುವ ಎಫ್ಐಆರ್ ಹಾಗೂ ದೂರಿನಲ್ಲಿ , ಸುನೀತಾ ಎಂಬವರು ಈ ಸಂಬಂಧ ಆರೋಪ ಮಾಡಿದ್ದಾರೆ. ಮೊನ್ನೆ ದಿನ ಇವರ ಮಕ್ಕಳು ದನ ಹಾಗೂ ಕರುವೊಂದನ್ನ ಮೇಯಿಸಲು ಕೊಂಡೊಯ್ದಿದ್ದರಂತೆ. ಈ ವೇಳೆ ಆಕಸ್ಮಾತ್ ಆಗಿ, ಅಲ್ಲಿಯ ನಿವಾಸಿ ಮೋಹನ್ ಎಂಬವರ ತೋಟಕ್ಕೆ ದನ ಕರು ನುಗ್ಗಿ ಮೇಯಲು ಆರಂಭಿಸಿವೆ. ಇದೆ ಕಾರಣಕ್ಕೆ ಮೂವರು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದು ಆರೋಪ. ಅಲ್ಲದೆ ಘಟನೆಯಲ್ಲಿ ಬಾಲಕನೊಬ್ಬನ ಕೈ ಮುರಿದು ಹೋಗುವ ಸಾಧ್ಯತೆ ಇದೆ ಎಂದು ದೂರಲಾಗಿದೆ. ಇನ್ನೂ ಇದನ್ನ ಪ್ರಶ್ನಿಸಿದ್ದಕ್ಕೆ ಅವರ ಜೊತೆಗೂ ಅಸಭ್ಯವಾಗಿ ವರ್ತಿಸಿದ ಆರೋಪ ಮಾಡಲಾಗಿದೆ. ಇನ್ನೂ ತೋಟಕ್ಕೆ ನುಗ್ಗಿದ್ದ ದನ ಕರುವಿಗೂ ದೊಣ್ಣೆಯಿಂದ ಹೊಡೆದಿದ್ಧಾರೆ ಎಂದು ದೂರಿದ್ಧಾರೆ. ಸದ್ಯ ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನು ಸಹ ಓದಿ : ಚೀಲೂರು ಡಬ್ಬಲ್ ಅಟ್ಯಾಕ್! ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲಿನ ದಾಳಿಯಲ್ಲಿ ಯಾರೆಲ್ಲಾ ಆರೋಪಿಗಳು ಗೊತ್ತಾ? ಫಿಟ್ ಆದನಾ ಹೆಬ್ಬೆಟ್ಟು ಮಂಜಾ?
