ಕುತ್ತಿಗೆ ಹಿಸುಕಿದ ಅಡಿಕೆ ಗಿಡ | ಭದ್ರಾ ಚಾನಲ್‌ನಲ್ಲಿ MISSING ಲೇಡಿ ಶವ | ಶಿವಮೊಗ್ಗ ಟು ದಾವಣಗೆರೆ ನಾಲೆ ಕೊಲೆ ಕೇಸ್ ಕ್ಲೀಯರ್‌!

Davangere police cracked the case of dead body of woman found in Bhadra channel. Shimoga News, Holehonnur News, Holehonnur Police Station, Davangere Police Station, Basavapatna Police Station, Arakere Bhadravati, Bhadra Channel

ಕುತ್ತಿಗೆ ಹಿಸುಕಿದ ಅಡಿಕೆ ಗಿಡ | ಭದ್ರಾ ಚಾನಲ್‌ನಲ್ಲಿ MISSING ಲೇಡಿ ಶವ |  ಶಿವಮೊಗ್ಗ ಟು ದಾವಣಗೆರೆ ನಾಲೆ ಕೊಲೆ ಕೇಸ್ ಕ್ಲೀಯರ್‌!
Bhadra channel, Shimoga News, Holehonnur News, Holehonnur Police Station, Davangere Police Station, Basavapatna Police Station, Arakere Bhadravati, Bhadra Channel

SHIVAMOGGA | MALENADUTODAY NEWS | May 15, 2024  ಮಲೆನಾಡು ಟುಡೆ

ನಿಗೂಢವಾಗಿದ್ದ ಪ್ರಕರಣವೊಂದನ್ನ ಪೊಲೀಸರು ಭೇದಿಸಿದ್ದು ಮಹಿಳೆಯ ಹತ್ಯೆ ಕೇಸ್‌ನಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ. ಭದ್ರಾ ನಾಲೆಯಲ್ಲಿ ಸಿಕ್ಕ ಅನಾಮಧೇಯ ಶವ ಶಿವಮೊಗ್ಗ ಜಿಲ್ಲೆಯ ಮಹಿಳೆಯದ್ದು ಎಂಬುದು ಪ್ರಕರಣದ ತನಿಖೆಯಲ್ಲಿ ಬಯಲಾಗಿದೆ. 

ಏನಿದು ಕೇಸ್‌ 

ದಿನಾಂಕ: 09-05-2024 ರಂದು  ದಾವಣಗೆರೆ ಜಿಲ್ಲೆ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕಣಿವೆ ಬಿಳಚಿ ಗ್ರಾಮದ ಬಳಿ ಭದ್ರಾ ನಾಲೆಯಲ್ಲಿ ಅನಾಮಧೇಯ ಮೃತ ದೇಹ ಪತ್ತೆಯಾಗಿತ್ತು. ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹದ ಗುರುತು ಪತ್ತೆ ಮಾಡುವುದು ಪೊಲೀಸರಿಗೆ ಹರಸಾಹಸದ ಕೆಲಸವಾಗಿತ್ತು. ಆಜುಮಾಸು 40 ವರ್ಷದ ಮಹಿಳೆ ಮೃತದೇಹವನ್ನು ಚಾನಲ್‌ನಿಂದ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಪೊಲೀಸರಿಗೆ ಮೇಲ್ನೋಟಕ್ಕೆ ಇದೊಂದು ಕೊಲೆ ಎಂಬುದು ಅರಿವಿಗೆ ಬಂದಿತ್ತು. ಅಲ್ಲದೆ ಅನುಮಾನಕ್ಕೆ ಸಾಕ್ಷಿ ಎಂಬಂತೆ ಕೊರಳಿಗೆ ಹಗ್ಗ ಬಿಗಿದ ರೀತಿಯೊಂದು ಪೊಲೀಸರಿಗೆ ಕಾಣಿಸಿತ್ತು. 

ಹಾಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ನಾಪತ್ತೆ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿದ್ದರು. ಭದ್ರಾ ಚಾನಲ್‌ ಹಾದು ಹೋಗುವ ಊರುಗಳನ್ನು ಒಳಗೊಂಡ ಪೊಲೀಸ್‌ ಸ್ಟೇಷನ್‌ಗಳನ್ನ ದಾವಣಗೆರೆ ಪೊಲೀಸರು ಸಂಪರ್ಕಿಸಿ, ಮಧ್ಯ ವಯಸ್ಸಿನ ಮಹಿಳೆಯ ನಾಪತ್ತೆ ಕೇಸ್‌ಗಳು ದಾಖಲಾಗಿವೆಯೇ ಎಂದು ಹುಡುಕಾಡಿದ್ದರು. ಈ ವೇಳೆ ಪೊಲೀಸರಿಗೆ ಶಿವಮೊಗ್ಗ ಜಿಲ್ಲೆ  ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್‌ ನಂಬರ್‌ವೊಂದು ಪ್ರಕರಣಕ್ಕೆ ದೊಡ್ಡ ಬ್ರೇಕ್‌ ತ್ರೂ ತಂದುಕೊಟ್ಟಿದೆ. 

ಹೊಳೆಹೊನ್ನೂರು ಪಿಎಸ್‌ನಲ್ಲಿ ದಾಖಲಾಗಿದ್ದ ಮಿಸ್ಸಿಂಗ್‌ ಕೇಸ್‌ನಲ್ಲಿ ಏಪ್ರಿಲ್‌ 20 ರಂದು ಜಮೀನಿಗೆ ಹೋಗಿ ಬರುತ್ತೇನೆ ಎಂದು ಹೋಗಿದ್ದ 47 ವರ್ಷದ ನೇತ್ರಾವತಿ ಎಂಬವರು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಲಾಗಿತ್ತು. ಆ ಸಂಬಂಧ ಎಫ್‌ಐಆರ್‌ ಸಹ ದಾಖಲಾಗಿತ್ತು. ಇದರ  ಬಗ್ಗೆ ಮಾಹಿತಿ ಪಡೆದ ಬಸವಾಪಟ್ಟಣ ಪೊಲೀಸರು, ದೂರು ಕೊಟ್ಟವರನ್ನ ಮೃತದೇಹದ ಗುರುತುಪತ್ತೆಗೆ ಕರೆಯುತ್ತಾರೆ. ಅಲ್ಲಿ ಸಂಬಂಧಿಕರು ನೇತ್ರಾವತಿಯನ್ನು ಗುರುತು ಹಿಡಿಯುತ್ತಾರೆ. 

ಅಪರಿಚಿತ ಮಹಿಳೆಯ ಶವ ಪತ್ತೆ ಪ್ರಕರಣದಲ್ಲಿ ಪೊಲೀಸರಿಗೆ ಮೃತದೇಹದ ಅಂತಿಮ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟು,ಪ್ರಕರಣದ ತನಿಖೆಗೆ ಇಳಿಯುತ್ತಾರೆ. ಜಮೀನಿಗೆ ಹೋದವರು ಕೊಲೆಯಾಗಿದ್ದು ಹೇಗೆ ಎಂದು ಇನ್‌ವೆಸ್ಟಿಗೇಷನ್‌ಗೆ ಮುಂದಾದ ಪೊಲೀಸರಿಗೆ ತಿಳಿದುಬಂದಿದ್ದು ಅಡಿಕೆ ಗಿಡ ಕಡಿದ ಪ್ರಕರಣ

ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನೇತ್ರಾವತಿ ಯಾವುದೋ ಕಾರಣಕ್ಕೆ ಅಲ್ಲಿದ್ದವರ ತೋಟದ ಅಡಿಕೆ ಗಿಡಗಳನ್ನು ಕಡಿದಿದ್ದರಂತೆ . ಇದೇ ಕಾರಣಕ್ಕೆ ಭದ್ರಾವತಿ ತಾಲ್ಲೂಕು ಅರಕೆರೆಯ ಕುಮಾರ ಹಾಗೂ ಚಿದಾನಂದಪ್ಪ ಎಂಬವರು ಸಿಟ್ಟಾಗಿ ನೇತ್ರಾವತಿಯನ್ನ ಆಕೆಯನ್ನು ತಮ್ಮ ಜಮೀನಿನಲ್ಲಿ ಕೊಲೆ ಮಾಡಿದ್ದಾರೆ. ಬಳಿಕ ಆಕೆಯನ್ನು ಭದ್ರಾ ಚಾನಲ್‌ಗೆ ಎಸೆದು ಮನೆಗೆ ಹೋಗಿದ್ದಾರೆ. ಹೆಣ ತೇಲಿಕೊಂಡು ಬಸವಾಪಟ್ಟಣ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ವರೆಗೂ ತೆರಳಿತ್ತು. ಶವದ ವಿಲೇವಾರಿಗೆ ನಿಂತ ಪೊಲೀಸರು, ಮೃತ ಮಹಿಳೆಗೆ ನ್ಯಾಯವನ್ನು ಒದಗಿಸುವ ಕೆಲಸಕ್ಕೆ ಮುಂದಾದ್ರು. ಅದರ ಪರಿಣಾಮವಾಗಿ ತನಿಖೆ ಮುಗಿಸಿದ ಪೊಲೀಸರು ಎ 01) ಕುಮಾರ ಹೆಚ್ ಜಿ, ೫೦ ವರ್ಷ, ನಾಗೊಲೆ (ಅರಕೆರೆ ಗೇಟ್) ಗ್ರಾಮ, ಭದ್ರಾವತಿ ತಾ. ಶಿವಮೊಗ್ಗ ಜಿಲ್ಲೆ, ಎ 02) ಚಿದಾನಂದಪ್ಪ, ೫೪ ವರ್ಷ, ಅರಕೆರೆ ಗ್ರಾಮ, ಭದ್ರಾವತಿ ತಾ. ಶಿವಮೊಗ್ಗ ಜಿಲ್ಲೆ ಇವರುಗಳನ್ನು ವಶಕ್ಕೆ ಪಡೆದು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.