ಸಾಗರ, ಹೊಸನಗರ, ತೀರ್ಥಹಳ್ಳಿಯಲ್ಲಿ ಎಷ್ಟಾಗಿದೆ ಮಳೆ | ಭದ್ರಾವತಿ, ಸೊರಬ, ಶಿಕಾರಿಪುರ, ಶಿವಮೊಗ್ಗದಲ್ಲಾದ ಮಳೆಯ ಅಂಕಿಅಂಶ

Heavy rainfall was experienced in Shivamogga yesterday,

ಸಾಗರ, ಹೊಸನಗರ, ತೀರ್ಥಹಳ್ಳಿಯಲ್ಲಿ ಎಷ್ಟಾಗಿದೆ ಮಳೆ | ಭದ್ರಾವತಿ, ಸೊರಬ, ಶಿಕಾರಿಪುರ, ಶಿವಮೊಗ್ಗದಲ್ಲಾದ ಮಳೆಯ ಅಂಕಿಅಂಶ
Heavy rainfall in Shivamogga

SHIVAMOGGA | MALENADUTODAY NEWS | Jul 4, 2024  ಮಲೆನಾಡು ಟುಡೆ   

ನಿನ್ನೆ ದಿನ ಶಿವಮೊಗ್ಗದ ಧಾರಾಕಾರ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟಾರೆ ನಿನ್ನೆ ದಿನ ಅಂದರೆ ಕಳೆದ 24 ಗಂಟೆಗಳ ಅವಧಿಯಲ್ಲಿ 55 ಮಿಲಿಮೀಟರ್‌ ಮಳೆಯಾಗಿದೆ. ತಾಲ್ಲೂಕುವಾರು ಮಳೆಯನ್ನ ಗಮನಿಸುವುದಾದರೆ, ಸಾಗರದಲ್ಲಿ ಅತಿಹೆಚ್ಚು 111.20 MM ಮಳೆಯಾಗಿದೆ. ಹೊಸನಗರ ತಾಲ್ಲೂಕುನಲ್ಲಿ 100.90 MM ಮಳೆಯಾಗಿದೆ. ಭದ್ರಾವತಿಯಲ್ಲಿ ಅತಿ ಕಡಿಮೆ 9.10 MM ಮಳೆಯಾಗಿದೆ. ತೀರ್ಥಹಳ್ಳಿಯಲ್ಲಿಯು 100.80 MM ಮಳೆಯಾಗಿದೆ. ಶಿಕಾರಿಪುರದಲ್ಲಿ  18.80 MM ಮಳೆಯಾಗಿದ್ದು ಸೊರಬ ತಾಲ್ಲುಕುನಲ್ಲಿ 34.60 MM ಮಳೆಯಾಗಿದೆ ಮತ್ತು ಶಿವಮೊಗ್ಗದಲ್ಲಿ 15.30 MM ಮಳೆಯಾಗಿದೆ 

ಜುಲೈ ತಿಂಗಳ ಆರಂಭದಿಂದ ಇಲ್ಲಿವರೆಗೂ ಶಿವಮೊಗ್ಗದಲ್ಲಿ 36.00 MM, ಭದ್ರಾವತಿ 27.80, ತೀರ್ಥಹಳ್ಳಿ 220.70 MM, ಸಾಗರ 206.80 MM. ಶಿಕಾರಿಪುರ 32.40 MM, ಸೊರಬ 62.80 MM ಹಾಗೂ ಹೊಸನಗರದಲ್ಲಿ  231.10 MM ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಈ ತಿಂಗಳಿನಲ್ಲಿ  116.37 MM ಸರಾಸರಿ ಮಳೆಯಾಗಿದೆ. 

Heavy rainfall was experienced in Shivamogga yesterday, with a total of 55 millimeters of rain recorded in the district over the past 24 hours. Sagar received the highest amount of rainfall at 111.20 mm, followed by Hosanagar at 100.90 mm. Bhadravathi recorded the lowest rainfall at 9.10 mm.