Jog Falls | ಜೋಗ ಜಲಪಾತ ಹೇಗೆ ಕಾಣ್ತಿದೆ ಈಗ? ವಿಶೇಷವೇನು?
Jog Falls, located in the Sagar taluk of Shivamogga district, is a popular tourist destination
SHIVAMOGGA | MALENADUTODAY NEWS | Jul 1, 2024 ಮಲೆನಾಡು ಟುಡೆ
ಮಳೆ ಇನ್ನೂ ಶಿವಮೊಗ್ಗದಲ್ಲಿ ರಚ್ಚೆ ಹಿಡಿದಿಲ್ಲ, ಜುಲೈ ಹೊತ್ತಿಗೆ ಮಳೆ ಮೈದುಂಬಿ ಸುರಿಯುವ ನಿರೀಕ್ಷೆಯಿದೆ. ಇದರ ನಡುವೆ
ಜೋಗದ ಸಿರಿಗೆ ಜೀವ ಬಂದ ಹಾಗಿದೆ. ಶರಾವತಿ ಪ್ರದೇಸದಲ್ಲಿ ಮಳೆ ಸುರಿಯುತ್ತಿದೆ. ಜೋಗಕ್ಕೆ ನೀರು ಹರಿಯುತ್ತಿದೆ. ಸಹಜವಾಗಿಯೇ ಜೋಗಫಾಲ್ಸ್ ನೋಡಲು ಬರುತ್ತಿರುವ ಪ್ರವಾಸಿಗರ ಸಂಖ್ಯೆಯು ಹೆಚ್ಚಾಗುತ್ತಿದೆ.
ಜೋಗದ ಬಗ್ಗೆ ಗೊತ್ತಿರುವ ಸಂಗತಿ
ಜೋಗ ಜಲಪಾತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಶರಾವತಿ ನದಿ ಇಲ್ಲಿ ಬರೋಬ್ಬರಿ 830 ಅಡಿ ಆಳಕ್ಕೆ ದುಮುಕುತ್ತಾಳೆ ಆ ಮೂಲಕ ಕರಾವಳಿ ಜಿಲ್ಲೆಗೆ ಕಾಲಿಟ್ಟು ಹೊನ್ನಾವರದ ಸಮೀಪ ಸಮುದ್ರ ಸೇರುತ್ತಾಳೆ. ಹೀಗೆ ದುಮ್ಮಕ್ಕುವ ಶರಾವತಿ ರಾಜಾ, ರಾಣಿ , ರೋರರ್ ರಾಕೆಟ್ ಹೆಸರಿನಲ್ಲಿ ನಾಲ್ಕು ಕವಲುಗಳಾಗಿ ಜಲಪಾತ ಸೃಷ್ಟಿಸುತ್ತಾಳೆ ಶರಾವತಿ, ಇಂತಹ ಅದ್ಭುತ ಜಲಪಾತದ ವೈಭವನ್ನು ನೋಡಲು ಇದೀಗ ನೂರಾರು ಪ್ರವಾಸಿಗರು ಜೋಗಕ್ಕೆ ಬರುತ್ತಿದ್ದಾರೆ. ಇದು ಇಲ್ಲಿನ ಆರ್ಥಿಕ ವಹಿವಾಟನ್ನು ಸಹ ಹೆಚ್ಚಿಸಿದೆ.
Jog Falls, located in the Sagar taluk of Shivamogga district, is a popular tourist destination. The falls are created by the Sharavati River, which plunges 830 feet into four distinct cascades known as Raja, Rani, Roarer, and Rocket. The increased flow of water has attracted a large number of tourists, boosting the local economy. Shivamogga, Karnataka, Sharavati region has received rainfall, revitalizing the Jog Falls.