ರಾಗಿಗುಡ್ಡದ ಈ ಏರಿಯಾದಲ್ಲಿ ಓಡಾಡುತ್ತಿದೆಯಾ ಚಿರತೆ? ಇದೇನು ದೃಶ್ಯ

A CCTV camera in Shivamogga city has captured footage of what appears to be a leopard running,

ರಾಗಿಗುಡ್ಡದ  ಈ ಏರಿಯಾದಲ್ಲಿ ಓಡಾಡುತ್ತಿದೆಯಾ ಚಿರತೆ? ಇದೇನು ದೃಶ್ಯ
CCTV camera in Shivamogga city , leopard

SHIVAMOGGA | MALENADUTODAY NEWS | Jul 2, 2024  ಮಲೆನಾಡು ಟುಡೆ 

ಶಿವಮೊಗ್ಗ ಸಿಟಿಯಲ್ಲಿ ಚಿರತೆ ಓಡಾಟ ಆರಂಭಿಸಿದ್ಯಾ? ಹೀಗೋಂದು ಅನುಮಾನ ಇದೀಗ ಮೂಡುವಂತಾಗಿದೆ. ಇದಕ್ಕೆ ಕಾರಣವಾಗಿರುವುದು ನಗರದ ಬಡಾವಣೆಯೊಂದರಲ್ಲಿರುವ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಚಿರತೆಯೊಂದು ಕಾಣಿಸಿದೆ ಎಂದು ಹೇಳಲಾಗುತ್ತಿದೆ. 

ಕೆಲವೇ ಸೆಕೆಂಡ್‌ಗಳಿರುವ ಕ್ಯಾಮರಾದ ದೃಶ್ಯದಲ್ಲಿ ಚಿರತೆ ರೀತಿಯ ಪ್ರಾಣಿಯೊಂದು ಓಡಾಡುವುದು ಕಾಣುತ್ತದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳ ವಿವರಣೆ ಲಭ್ಯವಾಗಿಲ್ಲವಾದರೂ ಸ್ಥಳೀಯರ ಪ್ರಕಾರ ರಾಗಿಗುಡ್ಡ ಕುವೆಂಪು ನಗರದ ಸುತ್ತಮುತ್ತ ಚಿರತೆ ಓಡಾಡುತ್ತಿದೆ. ರಾತ್ರಿ ಹೊತ್ತು ಈ ಭಾಗದಲ್ಲಿ ಓಡಾಡುವಾಗ ಎಚ್ಚರ ವಹಿಸುತ್ತಿದ್ದೇವೆ ಎನ್ನುತ್ತಾರೆ.  

A CCTV camera in Shivamogga city has captured footage of what appears to be a leopard running, causing concern among residents. While forest officials have not yet confirmed the sighting, locals in the Kuvempu Nagar area report increased leopard activity at night and are urging caution.