ಸೋಲಿನ ಹೊಣೆ ಹೊತ್ತ ಬೆನ್ನಲ್ಲೆ ಮುಂದಿನ ಟಾರ್ಗೆಟ್‌ ತಿಳಿಸಿದ ಮಧು ಬಂಗಾರಪ್ಪ! ಏನದು?

Shivamogga District In-charge Minister Madhu Bangarappa spoke about the defeat of his party's candidates in the Lok Sabha elections

ಸೋಲಿನ ಹೊಣೆ ಹೊತ್ತ ಬೆನ್ನಲ್ಲೆ ಮುಂದಿನ ಟಾರ್ಗೆಟ್‌ ತಿಳಿಸಿದ ಮಧು ಬಂಗಾರಪ್ಪ! ಏನದು?
Shivamogga District In-charge Minister, Madhu Bangarappa, Lok Sabha elections

SHIVAMOGGA | MALENADUTODAY NEWS | Jun 10, 2024 ಮಲೆನಾಡು ಟುಡೆ 

ಲೋಕಸಭಾ ಚುನಾವಣೆ ಹಾಗೂ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಸೋಲಿಕ ಬಳಿಕ ಇದೇ ಮೊದಲ ಸಲ ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ  ಮಾತನಾಡಿದ್ದಾರೆ. ಸುದ್ದಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,  ಮತದಾರರಿಗೆ ಧನ್ಯವಾದ ಹೇಳುವ ಹಿನ್ನೆಲೆಯಲ್ಲಿ ಇಂದು ಕೃತಜ್ಞತಾ ಸಭೆ ನಡೆಸುತ್ತಿದ್ದೇವೆ ಚುನಾವಣೆಯಲ್ಲಿ ಸೋಲು ಗೆಲುವು ಸಹಜ ಗೀತಾ ಶಿವರಾಜಕುಮಾರ್ ನಾನು ಸ್ಪರ್ಧಿಸಿದಾಗ ತೆಗೆದುಕೊಂಡ ಮತಕ್ಕಿಂತ ಹೆಚ್ಚಿನ ಮತ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಶಿವಮೊಗ್ಗದಲ್ಲಿ ಗೀತಾ ಶಿವರಾಜಕುಮಾರ್ ಹೆಚ್ಚಿನ ಮತ ಪಡೆದಿದ್ದಾರೆ ಎಂದರು. 

ಚುನಾವಣೆಯ ಸೋಲಿನ ಪರಾಮರ್ಶೆ ನಡೆಯಲಿದೆ ಎಂದ ಅವರು  ಈ ಬಗ್ಗೆ ಬೂತ್ ಮಟ್ಟದಲ್ಲಿ ಮಾಹಿತಿ ಸಂಗ್ರಹ ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳ ಮೇಲೆ ಹೆಚ್ಚು ಅವಲಂಭಿತರಾಗಿದ್ದೆವು ಎನ್ನುವುದರ ಬಗ್ಗೆ ಹೆಚ್ಚು ವಿಮರ್ಶೆ ಮಾಡುವುದಿಲ್ಲ. ಬಿಜೆಪಿ 400 ಕ್ಕಿಂತ ಹೆಚ್ಚಿನ ಸ್ಥಾನ ಗಳಿಸಲಿದೆ ಎಂದು ಮಾಧ್ಯಮಗಳಲ್ಲಿ ಪದೇಪದೇ ಪ್ರಚಾರದ ಹಿನ್ನೆಲೆ ಬಿಜೆಪಿಯ ಗೆಲುವಿಗೆ ಸಹಕಾರಿಯಾಗಿದೆ ಎಂದರು

ಆದರೆ ಉತ್ತರ ಭಾರತದಲ್ಲಿ ಬಿಜೆಪಿಗೆ ಹೆಚ್ಚಿನ ಗೆಲುವು ಸಿಗಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಹೆಚ್ಚಿನ ಶ್ರಮದಿಂದ ಗೀತಾ ಶಿವರಾಜಕುಮಾರ್ ಗೆ ಹೆಚ್ಚಿನ ಮತಗಳು ಬಂದಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಗ್ಯಾರಂಟಿಗಳನ್ನು ಮುಂದುವರಿಸುತ್ತೇವೆ ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ,ಮಹಾನಗರ ಪಾಲಿಕೆ ಚುನಾವಣೆ ಗಳಿಗೆ ಮತ್ತೆ ಸಿದ್ಧವಾಗುತ್ತೇವೆ ಎಂಧ ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವನಾಗಿ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಚುನಾವಣೆಯ ಸೋಲಿನ ಹೊಣೆ ಹೊರುವುದಕ್ಕಿಂತ ಹೆಚ್ಚಾಗಿ ಮುಂದೆ ಹೇಗೆ ಚುನಾವಣೆ ಎದುರಿಸಬೇಕು ಎಂಬುದಕ್ಕೆ ಸಿದ್ಧರಾಗಬೇಕು ಎಂಧರು. ಇದೇ ವೇಳೆ ಕುಮಾರ್ ಬಂಗಾರಪ್ಪ ವಿರುದ್ಧ ಪ್ರತಿಭಟನೆ ವಿಚಾರದಲ್ಲಿ ಸ್ಯಾಡಿಸ್ಟ್ ಗಳ ಬಗ್ಗೆ ನಾವು ಮಾತನಾಡಬೇಕಿಲ್ಲ ಎಂದಷ್ಟೆ ಹೇಳಿದ್ದಾರೆ. 

Shivamogga District In-charge Minister Madhu Bangarappa spoke about the defeat of his party's candidates in the Lok Sabha elections and the Southwest Graduate and Teachers' Constituency elections. He also mentioned that Geetha Shivarajkumar got more votes than he did when he contested and that she got the highest votes in the history of the Congress party in Shivamogga.