ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಆರಂಭ | ಏನಿದೆ ವಿಶೇಷ
Today, voting will take place for the Southwest Graduates' and Teachers' Constituency elections. In the Shivamogga district,
SHIVAMOGGA | MALENADUTODAY NEWS | Jun 2, 2024 ಮಲೆನಾಡು ಟುಡೆʼ
ನೈರುತ್ಯ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಇವತ್ತು ನಡೆಯಲಿದೆ.ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ನೈರುತ್ಯ ಪದವೀಧರ ಒಟ್ಟು ಮತದಾರರು 27,412 ಇದ್ದಾರೆ. ಒಟ್ಟು 38 ಮತದಾನ ಕೇಂದ್ರಗಳಿವೆ
ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 4,365 ಮತದಾರರು ಇದ್ದಾರೆ. 32 ಮತಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮತದಾರರು ತಮ್ಮ ಮತವಿರುವ ಮತದಾನ ಕೇಂದ್ರದ ವ್ಯಾಪ್ತಿಯಲ್ಲಿ ಮತ ಚಲಾಯಿಸಲಿದ್ದಾರೆ. ಜಿಲ್ಲೆಯ ಮತಗಟ್ಟೆ ಕೇಂದ್ರಗಳಲ್ಲಿ 200 ಮೀ. ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಮತದಾನ ಮಾಡಲು ಚುನಾವಣಾ ಆಯೋಗ ಸೂಚಿಸಿರುವ ಭಾವಚಿತ್ರ ಇರುವ ಯಾವುದೇ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದು. ಇನ್ನೂ ಅಹಿತಕರ ಘಟನೆ ನಡೆಯದಂತೆ ಮತದಾನದ ಕೇಂದ್ರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
Today, voting will take place for the Southwest Graduates' and Teachers' Constituency elections. In the Shivamogga district, there are 27,412 graduate voters and 4,365 teacher voters, with 38 and 32 polling stations respectively.