ಮನೆ ಆವರಣದಲ್ಲಿತ್ತು ಕದ್ದ ಹಸುಗಳು | ದಿಢೀರ್‌ ರೇಡ್‌ನ ಮೂಲಕ ಮಾಲೀಕನಿಗೆ ಪೊಲೀಸರ ಶಾಕ್

Maluru police have seized 21 calves and cows that were kept in a house in Lingapura near Mandagadde

ಮನೆ ಆವರಣದಲ್ಲಿತ್ತು ಕದ್ದ ಹಸುಗಳು | ದಿಢೀರ್‌ ರೇಡ್‌ನ ಮೂಲಕ ಮಾಲೀಕನಿಗೆ ಪೊಲೀಸರ ಶಾಕ್
Maluru police, Lingapura near Mandagadde

SHIVAMOGGA | MALENADUTODAY NEWS | Jun 10, 2024  ಮಲೆನಾಡು ಟುಡೆʼ

ಕಸಾಯಿ ಖಾನೆಗೆ ಸಾಗಿಸಲು ಮಂಡಗದ್ದೆ ಸಮೀಪದ ಲಿಂಗಾಪುರದ ಮನೆಯೊಂದರಲ್ಲಿ ಕೂಡಿ ಹಾಕಿದ್ದ ಬರೋಬ್ಬರಿ 21 ಕರುಗಳು ಮತ್ತು ಹಸುಗಳನ್ನು ಮಾಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು, ಗೋವುಗಳನ್ನು ಶಿವಮೊಗ್ಗ ಗೋ ಶಾಲೆಗೆ ಸೇರಿಸಿದ್ದಾರೆ. 

 

ತೀರ್ಥಹಳ್ಳಿ ಭಾಗದಲ್ಲಿ ನಿರಂತರ ಜಾನುವಾರುಗಳ ಕಳ್ಳತನ ನಡೆಯುತ್ತಿತ್ತು. ಗೋವಿನ ಕಳ್ಳತನದ ರೀತಿಯ ಬಗ್ಗೆ ಹಾಗೂ ಅದರ ಹಿಂದಿನ ಮಾಫಿಯದ ಬಗ್ಗೆ ಮಲೆನಾಡು ಟುಡೆ ಈ ಹಿಂದೆ ವರದಿ ಮಾಡಿತ್ತು. ಇನ್ನೂ ಈ ವಿಚಾರದಲ್ಲಿ  ಖಚಿತ ಮಾಹಿತಿ ಮೇಲೆ ಕಳೆದ ಶುಕ್ರವಾರ ರಾತ್ರಿ ಲಿಂಗಾಪುರದ ಜಬೀವುಲ್ಲ ಎಂಬುವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿ ಮನೆ ಆವರಣದಲ್ಲಿ ಕೂಡಿ ಹಾಕಿದ್ದ ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಪರಾರಿಯಾಗಿದ್ದು, ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

The Maluru police have seized 21 calves and cows that were kept in a house in Lingapura near Mandagadde, allegedly for the purpose of transporting them to a slaughterhouse.