ಕೋವಿಡ್ ಟೈಂನಲ್ಲಿ ರಜೆ ಕೇಳಿ ಹೋಗಿದ್ದ ಕಾನ್​ಸ್ಟೇಬಲ್​ ಕಾಣೆ! ಮಾಳೂರು ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಯ್ತು ಕೇಸ್​

Constable who had asked for leave during Covid time goes missing! The case was registered at Malur police station.

ಕೋವಿಡ್ ಟೈಂನಲ್ಲಿ ರಜೆ ಕೇಳಿ ಹೋಗಿದ್ದ ಕಾನ್​ಸ್ಟೇಬಲ್​ ಕಾಣೆ! ಮಾಳೂರು ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಯ್ತು ಕೇಸ್​

MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಪೊಲೀಸ್ ಸ್ಟೇಷನ್​ನಲ್ಲಿ ಕೆಲಸ ಮಾಡುತ್ತಿದ್ದ ಪೇದೆಯೊಬ್ಬರು ಕಾಣೆಯಾಗಿದ್ದಾರೆ ಎಂಬ ದೂರೊಂದು ಅದೇ ಸ್ಟೇಷನ್​ನಲ್ಲಿ ದಾಖಲಾಗಿದ್ದು, ಆ ಸಂಬಂಧ ಎಫ್​ಐಆರ್ ಕೂಡ ದಾಖಲಾಗಿದೆ. 

ದಿನಾಂಕ: 07-12-2021 ರಿಂದ ಮಾಳೂರು ಪೊಲೀಸ್ ಠಾಣೆಯಲ್ಲಿ (MALURU POLICE STATION) ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಸಂತೋಷ್ ಕುಮಾರ್ ಎಂಬವರು ಕೋವಿಡ್ ಪಾಸೀಟಿವ್ ಬಂದ ಹಿನ್ನೆಲೆಯಲ್ಲಿ  24-01-2022 ರಿಂದ ದಿನಾಂಕ:31-01-2022 ರ ವಿಶೇಷ ರಜೆ ತೆಗೆದುಕೊಂಡಿದ್ದರಂತೆ. 

ಆನಂತರ  ವಾಪಸ್‌ ಕರ್ತವ್ಯಕ್ಕೆ ಹಾಜರಾಗಿಲ್ಲ. ಅಲ್ಲದೆ ಯಾವುದೇ ರೀತಿಯ ರಜೆಯನ್ನು ಸಹ ಪಡೆದುಕೊಳ್ಳದೆ ಗೈರಾಗಿದ್ದಾರೆ. ಈ ಸಂಬಂಧ    ಪೊಲೀಸ್ ಅಧೀಕ್ಷಕರು ಪರಾರಿ ಪತ್ರವನ್ನು ಹೊರಡಿಸಿದ್ದರು. ಆದರೆ ಈ ಪತ್ರವನ್ನು ಜಾರಿಮಾಡಿದ್ದರು, ಪೊಲೀಸ್ ಕಾನ್​ಸ್ಟೇಬಲ್​ ಕೆಲಸಕ್ಕೆ ಹಾಜರಾಗಿಲ್ಲ. ಹೀಗಾಗಿ ಇವರ ವಿರುದ್ಧ  ಮನುಷ್ಯ ಕಾಣೆ ಪ್ರಕರಣ ದಾಖಲಿಸುವಂತೆ ಎಸ್​ಪಿ ಕಚೇರಿಯಿಂದ ಆದೇಶ ಹೊರಬಿದ್ದಿದೆ. ಹೀಗಾಗಿ ಈ ಸಂಬಂಧ ಮಾಳೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ. 

READ | BREAKING : ಮತ್ತೊಂದು ದರೋಡೆ ಯತ್ನವನ್ನು ತಡೆದ ಶಿವಮೊಗ್ಗ ಪೊಲೀಸ್! ನಾಲ್ವರ ಬಂಧನ !